ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಕೆಪಿಎಸ್ಸಿ ಪರೀಕ್ಷೆಯಲ್ಲಿ ಆಗಿರುವ ಯಡವಟ್ಟುಗಳಿಂದ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಲಕ್ಷಾಂತರ ಯುವಜನರ ಆತ್ಮಸ್ಥೈರ್ಯ ಕುಸಿದಿದ್ದು, ಪರೀಕ್ಷಾರ್ಥಿಗಳಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಹಾಲಪ್ಪ ಪ್ರತಿಷ್ಠಾನ ಸರಕಾರ ಮತ್ತು ಪರೀಕ್ಷಾರ್ಥಿಗಳ ನಡುವೆ ಕೊಂಡಿಯಾಗಿ ಕೆಲಸ ಮಾಡಲಿದೆ ಎಂದು ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರಳೀಧರ ಹಾಲಪ್ಪ ತಿಳಿಸಿದ್ದಾರೆ.ನಗರದ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ತುಮಕೂರು ವಿವಿಯ ಸಹಯೋಗದಲ್ಲಿ ಹಾಲಪ್ಪ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಂಡಿದ್ದ ಆತ್ಮವಿಶ್ವಾಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಯುಪಿಎಸ್ಸಿ ಪರೀಕ್ಷೆಯ ರೀತಿಯೇ ಕೆಪಿಎಸ್ಸಿ ಪರೀಕ್ಷೆಯೂ ನಡೆಯಬೇಕು. ಇದುವರೆಗೂ ವೇಳಾಪಟ್ಟಿ ಪ್ರಕಟಣೆ, ಪರೀಕ್ಷೆಗಳನ್ನು ನಡೆಸುವರೀತಿ ಸೇರಿದಂತೆಎಲ್ಲಾ ರೀತಿಯಲ್ಲಿಯೂ ಅನೇಕ ಬದಲಾವಣೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವ ಆಕಾಂಕ್ಷಿಗಳು ಬಯಸಿದ್ದು, ಈ ವಿಚಾರವನ್ನು ಕೆಪಿಎಸ್ಸಿ ಸದಸ್ಯ, ಕಾರ್ಯದರ್ಶಿಯವರಿಗೆ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಮುಟ್ಟಿಸುವುದರಜೊತೆಗೆ, ಜಿಲ್ಲೆಯ ಹಿರಿಯ ಸಚಿವರುಗಳ ಮೂಲಕ ಸರ್ಕಾರದ ಮುಖ್ಯಸ್ಥರ ಗಮನಕ್ಕೂ ತರುವ ಕೆಲಸವನ್ನು ಹಾಲಪ್ಪ ಪ್ರತಿಷ್ಠಾನ ಮಾಡಲಿದೆ ಎಂದರು. ದೆಹಲಿಯ ಐಎಎಸ್‌ತರಬೇತಿ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಜಿಲ್ಲೆಯ 12 ಜನ ಅಭ್ಯರ್ಥಿಗಳಿಗೆ ಊಟ ತಿಂಡಿಯ ಜೊತೆಗೆ, ಉಳಿದುಕೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ. ಅಗತ್ಯ ಇರುವವರು ಸಂಪರ್ಕಿಸಬಹುದು ಎಂದರು.ನವೋದಯ ಐಎಎಸ್ ಅಕಾಡೆಮಿಯ ಗೌರವಾಧ್ಯಕ್ಷ ನಾಗರಾಜರಾವ್ ಸ್ಕ್ವ್ಯಾಡನ್ ಲೀಡರ್ ಭಾಸ್ಕರ್, ಕೃಷ್ಣ ಏಜುಕೇಷನ್ ಟ್ರಸ್ಟ್ನಅಧ್ಯಕ್ಷರಾದ ಮರಿಚನ್ನಮ್ಮ, ಮುಖಂಡರಾದ ರೇವಣ್ಣಸಿದ್ದಯ್ಯ, ಪ್ರಗತಿಪರ ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ಎಂ.ವಿ.ಬಸವರಾಜು, ಗ್ರಾಹಕರ ವೇದಿಕೆಯ ಟಿ.ಎಸ್.ನಿರಂಜನ್, ದೀಪ್ತಿ ರಾಜೇಶ್ ಸಿದ್ದಗಂಗಾ ಐಎಎಸ್‌ಅಕಾಡೆಮಿ, ತ್ರಿವೇಣಿ ಪೃಥ್ವಿ ಐಎಎಸ್‌ಅಕಾಡೆಮಿ, ವಿಭೂಷಣ್, ಪೃಥ್ವಿ ಹಾಲಪ್ಪ, ಸಂಜೀವ್, ಶಿವಕುಮಾರ್, ನಟರಾಜು, ಶಾಬುದ್ದೀನ್, ವಸುಂಧರ, ಪ್ರೇಮ ಮತ್ತಿತರರು ಉಪಸ್ಥಿತರಿದ್ದರು.