ಹನ್ನೆರಡು ವರ್ಷಗಳಿಗೊಮ್ಮೆ ಅರಳುವ ನೀಲಕುರುಂಜಿ ಇದೀಗ ಕೊಡಗಿನಲ್ಲಿ ಅರಳಿ ಪೇರೂರು ಬೆಟ್ಟಶ್ರೇಣಿಗಳ ಉದ್ದಕ್ಕೂ ವ್ಯಾಪಿಸಿದೆ.ಕೊಡಗು ಜಿಲ್ಲೆಯ ಬಲ್ಲಮಾವಟಿ ಗ್ರಾಮ ಪಂಚಾಯತಿಯ ಪೇರೂರು ಗ್ರಾಮದ ವ್ಯಾಪ್ತಿಯಲ್ಲಿರುವ ಮಲ್ಮ ಬೆಟ್ಟದ ತಪ್ಪಲಿನಲ್ಲಿ ಹೂಗಳು ಅರಳಿ ಮನಮೋಹಕವಾಗಿ ಕಂಗೊಳಿಸುತ್ತಿವೆ.
ನಾಪೋಕ್ಲು : ಹನ್ನೆರಡು ವರ್ಷಗಳಿಗೊಮ್ಮೆ ಅರಳುವ ನೀಲಕುರುಂಜಿ ಇದೀಗ ಕೊಡಗಿನಲ್ಲಿ ಅರಳಿ ಪೇರೂರು ಬೆಟ್ಟಶ್ರೇಣಿಗಳ ಉದ್ದಕ್ಕೂ ವ್ಯಾಪಿಸಿದೆ.
ಕೊಡಗು ಜಿಲ್ಲೆಯ ಬಲ್ಲಮಾವಟಿ ಗ್ರಾಮ ಪಂಚಾಯತಿಯ ಪೇರೂರು ಗ್ರಾಮದ ವ್ಯಾಪ್ತಿಯಲ್ಲಿರುವ ಮಲ್ಮ ಬೆಟ್ಟದ ತಪ್ಪಲಿನಲ್ಲಿ ಹೂಗಳು ಅರಳಿ ಮನಮೋಹಕವಾಗಿ ಕಂಗೊಳಿಸುತ್ತಿವೆ.
ಸ್ಟೋಬಿಲಾಂಥಸ್ ಕುಂತಿಯಾನ
ನೀಲಕುರುಂಜಿಯ ಸಸ್ಯ ಶಾಸ್ತ್ರೀಯ ಹೆಸರು ಸ್ಟೋಬಿಲಾಂಥಸ್ ಕುಂತಿಯಾನ. ಈಗಾಗಲೇ ಸಾಕಷ್ಟು ಹೂಗಳು ಅರಳಿದ್ದು, ಇದು ಅಕ್ಟೋಬರ್ ತಿಂಗಳವರೆಗೆ ಅರಳಿದ ಸ್ಥಿತಿಯಲ್ಲಿರುತ್ತವೆ. ಮತ್ತೆ ಹೂಗಳನ್ನು ಕಾಣಬೇಕಾದರೆ ಹನ್ನೆರಡು ವರ್ಷ ಕಾಯಬೇಕು. ಬೆಟ್ಟದ ಮೇಲ್ಭಾಗ ಬೇಸಿಗೆಯಲ್ಲಿ ಒಣಗಿರುತ್ತದೆ. ಮಳೆಗಾಲದಲ್ಲಿ ನೆಲ ತಂಪಾಗಿ ಗಿಡಗಳು ಬಲಿತು ಹೂಗಳು ಅರಳುತ್ತವೆ. ಹೂಗಳು ನೋಡಲು ಬಲು ಸುಂದರ. ಅಪರೂಪಕ್ಕೆ ಕಾಣ ಸಿಗುತ್ತವೆ. ಬೇಸಿಗೆಯಲ್ಲಿ ಬೆಂಕಿ ಬಿದ್ದರೂ ಗಿಡಗಳು ನಾಶವಾಗುವುದಿಲ್ಲ. ಈ ಗಿಡಗಳನ್ನು ಹಸುಗಳು ತಿನ್ನುವುದಿಲ್ಲ. ಮಣ್ಣಿನ ಸವಕಳಿಯನ್ನು ತಡೆಯಲು ಗಿಡಗಳು ಸಹಕಾರಿಯಾಗಿವೆ.
ಅರಣ್ಯ ಇಲಾಖೆ ನಿರ್ಬಂಧ
ಆದರೆ ವಿವಿಧ ಕಾರಣಗಳಿಗಾಗಿ ಈ ಪ್ರದೇಶಗಳಿಗೆ ಪ್ರವಾಸಿಗರು ಸೇರಿದಂತೆ ಇನ್ನಿತರರು ತೆರಳದಂತೆ ಅರಣ್ಯ ಇಲಾಖೆ ನಿರ್ಬಂಧ ಹೇರಿದೆ.