ಸಾರಾಂಶ
ಶೃಂಗೇರಿಯ ಬಾಲನೃತ್ಯ ಕಲಾವಿದೆ ಕು.ಆರ್ಯಿಕಾ ಜೈಲ್ ರಾಜಸ್ಥಾನದ ಜೈಪುರದ ಬಡಪದಮ್ ಪುರದಲ್ಲಿ ನಡೆದ ಮುನಿಸುವ್ರತ ತೀರ್ಥಂಕರರ ಯಕ್ಷಿ ಅಪರಾಜಿತಾ ದೇವಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ನೀಲಾಂಜನ ನೃತ್ಯ ಪ್ರದರ್ಶನ ಮಾಡಿ ಅಪಾರ ಭಕ್ತರ ಗಮನ ಸೆಳೆದಳು.
ರಾಜ್ಯದ ವಿವಿಧೆಡೆಗಳಲ್ಲಿ ಸುಮಾರು 50ಕ್ಕೂ ಹೆಚ್ಚು ನೃತ್ಯ ಪ್ರದರ್ಶನ
ಕನ್ನಡಪ್ರಭ ವಾರ್ತೆ, ಶೃಂಗೇರಿಶೃಂಗೇರಿಯ ಬಾಲನೃತ್ಯ ಕಲಾವಿದೆ ಕು.ಆರ್ಯಿಕಾ ಜೈಲ್ ರಾಜಸ್ಥಾನದ ಜೈಪುರದ ಬಡಪದಮ್ ಪುರದಲ್ಲಿ ನಡೆದ ಮುನಿಸುವ್ರತ ತೀರ್ಥಂಕರರ ಯಕ್ಷಿ ಅಪರಾಜಿತಾ ದೇವಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ನೀಲಾಂಜನ ನೃತ್ಯ ಪ್ರದರ್ಶನ ಮಾಡಿ ಅಪಾರ ಭಕ್ತರ ಗಮನ ಸೆಳೆದಳು.
ಈಕೆ ಈಗಾಗಲೇ ಬೆಳಗಾಂ, ಧಾರವಾಡ, ಮಂಗಳೂರು, ಶಿವಮೊಗ್ಗ, ಚಿತ್ರದುರ್ಗ, ಸಾಗರ, ಆಳದಗಂಡಿ, ಹೊಂಬುಜ, ನರಸಿಂಹರಾಜಪುರ ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ಸುಮಾರು 50ಕ್ಕೂ ಹೆಚ್ಚು ನೃತ್ಯ ಪ್ರದರ್ಶನ ನೀಡಿ ತನ್ನ ಬಹುಮುಖ ಪ್ರತಿಭೆ ಪ್ರದರ್ಶಿಸಿದ್ದಾಳೆ.ಈಕಗೆ ಚಿತ್ರದುರ್ಗದ ಕನ್ನಡ ಸಾಹಿತ್ಯ ಸಾಗರ ಸಂಸ್ಥೆಯ ಅಭಿನಯ ನಾಟ್ಯ ಶಾರದೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ನೃತ್ಯವಲ್ಲದೆ ಕ್ರೀಡೆ, ಟೇಕ್ವಾಂಡೋ, ಸಾಂಸ್ಕೃತಿಕ, ಸಾಹಿತ್ಯ ಚಟುವಟಿಕೆಗಳಲ್ಲಿಯೂ ಸಾಧನೆ ಮಾಡಿದ ಈಕೆ ಜಿಲ್ಲಾ, ತಾಲೂಕು ಮಟ್ಟದ ಷಟಲ್ ಬ್ಯಾಡ್ಮಿಂಟನ್, ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಜಾವೆಲಿನ್ ಥ್ರೋನಲ್ಲಿ ಪ್ರಥಮ ಸ್ಥಾನ, ತಾಲೂಕು ಮಟ್ಟದ ಟೇಕ್ವಾಂಡೊದಲ್ಲಿ ದ್ವಿತೀಯ ಸ್ಥಾನ ಹೀಗೆ ಅನೇಕ ಸಾಧನೆ ಮಾಡಿದ್ದಾಳೆ.
ಶೃಂಗೇರಿ ಜೆಸಿಸ್ ಶಾಲೆ ವಿದ್ಯಾರ್ಥಿನಿಯಾದ ಈಕೆ ಶ್ರೀ ಭಗವತಿ ಕಲಾ ಕೇಂದ್ರದ ವಿದ್ವಾನ್ ಭಾರ್ಗವ ಶರ್ಮರಲ್ಲಿ ಭರತ ನಾಟ್ಯದಲ್ಲಿ ಜೂನಿಯರ್ ಪರೀಕ್ಷೆಯಲ್ಲಿ ಉತ್ತಿರ್ಣಳಾಗಿರುತ್ತಾಳೆ. ಈಕೆ ಶೃಂಗೇರಿ ಸರ್ಕಾರಿ ಜೂನಿಯರ್ ಕಾಲೇಜಿನ ಉಪನ್ಯಾಸಕ ಡಾ.ಶ್ರೀಮಂದಾರ ಹಾಗೂ ಮೆಣಸೆ ಸರ್ಕಾರಿ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಜಯಂತಿ ದಂಪತಿ ಪುತ್ರಿ.17 ಶ್ರೀ ಚಿತ್ರ 2-ಶೃಂಗೇರಿ ತಾಲೂಕಿನ ಬಾಲನೃತ್ಯಕಲಾವಿದೆ ಕು.ಆರ್ಯಿಕಾ ಜೈಲ್ ರಾಜಸ್ಥಾನದಲ್ಲಿ ನಡೆದ ನೀಲಾಂಜನ ನೃತ್ಯ ಪ್ರದರ್ಶನದಲ್ಲಿ ಪಾಲ್ಗೊಂಡಿರುವುದು.