ನೀರಲಗಿ ಮಾಸನಕಟ್ಟಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

| Published : Jan 17 2025, 12:46 AM IST

ಸಾರಾಂಶ

ಹಾನಗಲ್ಲ ತಾಲೂಕಿನ ನೀರಲಗಿ ಮ ಆಡೂರು ಗ್ರಾಮದಲ್ಲಿ ಗುರುವಾರ 2023-24ನೇ ಸಾಲಿನ ಮುಖ್ಯಮಂತ್ರಿಗಳ ವಿಶೇಷ ಅಭಿವೃದ್ಧಿ ಯೋಜನೆಯಡಿ ₹70 ಲಕ್ಷ ವೆಚ್ಚದಲ್ಲಿ ನೀರಲಗಿ - ಆಡೂರು - ಮಾಸನಕಟ್ಟಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಶ್ರೀನಿವಾಸ ಮಾನೆ ಭೂಮಿಪೂಜೆ ನೆರವೇರಿಸಿದರು.

ಹಾನಗಲ್ಲ: ತಾಲೂಕಿನ ನೀರಲಗಿ ಮ ಆಡೂರು ಗ್ರಾಮದಲ್ಲಿ ಗುರುವಾರ 2023-24ನೇ ಸಾಲಿನ ಮುಖ್ಯಮಂತ್ರಿಗಳ ವಿಶೇಷ ಅಭಿವೃದ್ಧಿ ಯೋಜನೆಯಡಿ ₹70 ಲಕ್ಷ ವೆಚ್ಚದಲ್ಲಿ ನೀರಲಗಿ - ಆಡೂರು - ಮಾಸನಕಟ್ಟಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಶ್ರೀನಿವಾಸ ಮಾನೆ ಭೂಮಿಪೂಜೆ ನೆರವೇರಿಸಿದರು.

ಬಳಿಕ ಗ್ರಾಮಸ್ಥರ ಸಮಸ್ಯೆ, ಅಹವಾಲು ಆಲಿಸಿದರು. ಗ್ರಾಪಂ ವಾಟರ್‌ಮನ್ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಗಮನ ಸೆಳೆದಾಗ ಸೂಕ್ತ ಕ್ರಮಕ್ಕೆ ಸ್ಥಳದಲ್ಲಿದ್ದ ಮಾಸನಕಟ್ಟಿ ಪಿಡಿಒ ಆರ್.ವೈ. ಹನಕನಹಳ್ಳಿ ಅವರಿಗೆ ಸೂಚಿಸಿದರು. ಗ್ರಾಮದ ಸ್ಮಶಾನ ಸ್ವಚ್ಛತೆ ಕುರಿತು ಮನವಿಗೆ ಸ್ಪಂದಿಸಿ, ಉದ್ಯೋಗ ಖಾತ್ರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಕಾಳಜಿ ವಹಿಸಿದರೆ ಗ್ರಾಮಾಭಿವೃದ್ಧಿ ಸಾಧ್ಯವಿದೆ ಎಂದು ಹೇಳಿದ ಶಾಸಕ ಮಾನೆ, ತಾಲೂಕಿನಲ್ಲಿ ಗ್ರಾಮ, ಗ್ರಾಮಗಳನ್ನು ಸಂಪರ್ಕಿಸುವ ರಸ್ತೆಗಳನ್ನು ಸುಧಾರಿಸಲಾಗುತ್ತಿದೆ. ತಾಲೂಕಿನಲ್ಲಿ ಹತ್ತಾರು ವರ್ಷಗಳಿಂದ ಸುಧಾರಣೆ ಕಾಣದ ರಸ್ತೆಗಳನ್ನು ಸುಧಾರಿಸಿ, ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ಗಮನ ನೀಡಲಾಗಿದೆ ಎಂದು ತಿಳಿಸಿದರು.

ಮಾಸನಕಟ್ಟಿ ಗ್ರಾಪಂ ಅಧ್ಯಕ್ಷ ಗಂಗಪ್ಪ ಹಿರಗಪ್ಪನವರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ನೀಲಪ್ಪ ಮಾಳಗಿಮನಿ, ಸದಸ್ಯರಾದ ಜಾಫರಸಾಬ್‌ ನದಾಫ್, ಜಾಯಿದಾ ಹುರುಳಿಕುಪ್ಪಿ, ಚಂದ್ರಪ್ಪ ಜೈನರ, ಈಶ್ವರ ಚೌಟಿ, ಮುಖಂಡರಾದ ಬಸವರಾಜ ಹೊಸಮನಿ, ಮಹಬಳೇಶ್ವರ ಚಿಕ್ಕಮಠ, ಚಂದ್ರು ಕಲ್ಲವಡ್ಡರ, ಸುರೇಶ ಗೊದಮನಿ, ಆನಂದ ಬೇವಿನಕಟ್ಟಿ, ಪುಟ್ಟರಾಜ ಹೊಸಮನಿ, ಶಂಭುಲಿಂಗ ಕಮ್ಮಾರ, ಬಸವಣ್ಣೆಪ್ಪ ದೇವಗಿರಿ, ಚಂದ್ರಶೇಖರ ಕುಂಕರ, ಬಸನಗೌಡ ಪಾಟೀಲ, ಅಶೋಕ ಹೆಳವರ, ಚಂದ್ರಶೇಖರ ದೇವಗಿರಿ ಉಪಸ್ಥಿತರಿದ್ದರು.