ನಕಾರಾತ್ಮಕ ಮನಸ್ಸಿನಿಂದ ಸಮಾಜದ ಹಿತಕ್ಕೆ ಧಕ್ಕೆ: ಗುರುನಾಥ ಗವಾಣಿಕರ

| Published : Aug 21 2025, 02:00 AM IST

ನಕಾರಾತ್ಮಕ ಮನಸ್ಸಿನಿಂದ ಸಮಾಜದ ಹಿತಕ್ಕೆ ಧಕ್ಕೆ: ಗುರುನಾಥ ಗವಾಣಿಕರ
Share this Article
  • FB
  • TW
  • Linkdin
  • Email

ಸಾರಾಂಶ

ನಕಾರಾತ್ಮಕ ಚಿಂತನೆಗಳು ಸಮಾಜದ ಹಿತಕ್ಕೆ ಧಕ್ಕೆ ತರುತ್ತಿವೆ. ಭವಿಷ್ಯದ ಮಕ್ಕಳಿಗೆ ಶರಣ ಸಂದೇಶಗಳು, ಸಂತರು ಸತ್ಪುರುಷ ಶುಭ ನುಡಿಗಳ ಅಗತ್ಯವಿದೆ.

ಹಾನಗಲ್ಲ: ಬಹುದೊಡ್ಡ ನೈತಿಕತೆ ಹಿನ್ನಡೆಯೇ ಸಾಮಾಜಿಕ ಅಸಮತೋಲನಕ್ಕೆ ಸಾಕ್ಷಿಯಾಗುತ್ತಿದ್ದು, ಶರಣ ಸಂತರ ತತ್ವ ಸಂದೇಶಗಳು ಮನೆ ಮಂದಿಗೆಲ್ಲ ಪ್ರೇರಣೆಯಾಗಲು ಸಾಧ್ಯವಾದರೆ ಅದೇ ನಿಜವಾದ ಸಾಮಾಜಿಕ ಯಶಸ್ಸು ಎಂದು ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಗುರುನಾಥ ಗವಾಣಿಕರ ತಿಳಿಸಿದರು.ಪಟ್ಟಣದ ಕುಮಾರೇಶ್ವರ ವಿರಕ್ತಮಠದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕ ಹಾಗೂ ಕದಳಿ ಮಹಿಳಾ ವೇದಿಕೆ ಆಯೋಜಿಸಿದ್ದ ಶರಣ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿಕೃತ ರಕ್ಕಸ ಮನಸ್ಸುಗಳು ಮಾನವ ಕುಲಕ್ಕೆ ಕಂಟಕವಾಗುತ್ತಿವೆ. ನಕಾರಾತ್ಮಕ ಚಿಂತನೆಗಳು ಸಮಾಜದ ಹಿತಕ್ಕೆ ಧಕ್ಕೆ ತರುತ್ತಿವೆ. ಭವಿಷ್ಯದ ಮಕ್ಕಳಿಗೆ ಶರಣ ಸಂದೇಶಗಳು, ಸಂತರು ಸತ್ಪುರುಷ ಶುಭ ನುಡಿಗಳ ಅಗತ್ಯವಿದೆ. ಸಮಾಜ ನಿರ್ಮಾಣದ ಕಾರ್ಯದಲ್ಲಿ ಸಂಘ- ಸಂಸ್ಥೆಗಳ ಪಾತ್ರ ಮಹತ್ತರವಾದುದು. ನಮ್ಮ ಆದ್ಯತೆ ಸಮಾಜ ಹಿತದ ಕಡೆಗೆ ಇರಲಿ ಎಂದರು.ಪ್ರಾಚಾರ್ಯ ಚಿರಂಜೀವಿ ಆಡೂರ ಮಾತನಾಡಿ, ಭಯ, ಭಕ್ತಿರಹಿತ ಮಾನವ ಕಲ್ಯಾಣ ಸಾಧ್ಯವಿಲ್ಲ. ದೇವರಲ್ಲಿ ಭಕ್ತಿ, ನಮ್ಮ ಸೇವೆಯಲ್ಲಿ ಶ್ರದ್ಧೆ ಅತ್ಯಂತ ಮುಖ್ಯವಾದುದು. ಕಾಲ ದೇಶ ಮೀರಿದ ಪ್ರೀತಿಯ ಅಗತ್ಯವಿದೆ. ಅದು ನಮ್ಮೆಲ್ಲರ ಬಂಧುತ್ವ ಕಟ್ಟುವಂತಹದ್ದಾಗಿರಬೇಕು. ಬದುಕಿನ ಪ್ರಾಮಾಣಿಕತೆ ಬೋಧಿಸಿದ ಶರಣರು ಜಾತ್ಯತೀತ ಸಮಾಜದ ಕಲ್ಪನೆಯನ್ನು ಸಾಕಾರಗೊಳಿಸಿದರು ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಶಂಭುಲಿಂಗಯ್ಯ ಹೇಮಗಿರಿಮಠ, ಧರ್ಮ ಸಂಸ್ಕಾರಗಳೇ ಮಾಯವಾಗುತ್ತಿರುವ ಈ ದಿನಗಳಲ್ಲಿ ಉತ್ತಮ ಸಮಾಜ ನರ್ಮಾಣ ಕೇವಲ ಮಾತಾಗುತ್ತಿದೆ. ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬಿತ್ತಲು ಈಗಲೇ ಸಾಧ್ಯವಾದರೆ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.

ಸಾಹಿತಿ ಸುಭಾಸ ಹೊಸಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸರಸ್ವತಿ ಮಹಳಾ ಮಂಡಳದ ಗೌರವಾಧ್ಯಕ್ಷೆ ನೀಲಮ್ಮ ಉದಾಸಿ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಶಿವಗಂಗಕ್ಕ ಪಟ್ಟಣದ, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಾರುತಿ ಶಿಡ್ಲಾಪೂರ, ತಾಲೂಕು ಉಪಾಧ್ಯಕ್ಷ ಅಶೋಕ ದಾಸರ, ಅಕ್ಕಮ್ಮ ಕುಂಬಾರಿ, ಸವಿತಾ ಉದಾಸಿ, ಜ್ಯೋತಿ ಬೆಲ್ಲದ, ಸುಮಂಗಲಾ ಕಟ್ಟಿಮಠ, ವಿಜಯಕ್ಕ ಕಬ್ಬೂರ, ಶಾರದಾ ಉದಾಸಿ, ಕಮಲಾಕ್ಷಿ ಕೊಂಡೋಜಿ, ಶ್ರೀದೇವಿ ಕೋಟಿ, ಸುನಂದಾ ಉದಾಸಿ, ರೂಪಾ ಸವದತ್ತಿ, ಪಂಕಜಾ ಅರಳಲಿಮಠ, ಉಷಾ ಕಬ್ಬೂರ, ಲಕ್ಷ್ಮಿ ಸಿಂದೂರ, ರೂಪಾ ಗೌಳಿ, ಸುಜಾತಾ ಸಿಂಧೂರ, ಸುನಿತಾ ಸವದತ್ತಿ, ದಾಕ್ಷಾಯಿಣಿ ಯರಗಟ್ಟಿ, ಯಲ್ಲಕ್ಕ ಕಬ್ಬೂರ, ಸವಿತಾ ಕುಂಬಾರಿ, ಕಲಾ ಶೀಲವಂತ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.