.ಬೆಳೆವಿಮೆ ನೀಡುವಲ್ಲಿ ನಿರ್ಲಕ್ಷ್ಯ: ರೈತರ ಧರಣಿ

| Published : May 03 2024, 01:12 AM IST

ಸಾರಾಂಶ

ರೈತರಿಗಾದ ನಷ್ಟವನ್ನು ಸರಿಪಡಿಸಬೇಕು. ಇಲ್ಲವಾದಲ್ಲಿ ಈ ವಿಚಾರವನ್ನು ವಿಧಾನಸೌಧದ ವರೆವಿಗೂ ತೆಗೆದುಕೊಂಡು ಹೋಗಲಾಗುತ್ತದೆ ಎಂದು ರೈತಸಂಘ ಎಚ್ಚರಿಸಿದೆ. ಇಂದೇ ಜಿಲ್ಲಾಧಿಕಾರಿ ಜತೆ ಚರ್ಚಿಸುವುದಾಗಿ ಗೌರಿಬಿದನೂರು ತಾಪಂ ಇಒ ಹೊನ್ನಯ್ಯ ಹೇಳಿದ್ದಾರೆ

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ತಾಲೂಕಿನಲ್ಲಿ 9 ಪಂಚಾಯಿತಿ ರೈತರಿಗೆ ಬೆಳೆವಿಮೆ ನಷ್ಟ ಪರಿಹಾರ ಅಧಿಕಾರಿಗಳ ಬೇಜವಾಬ್ದಾರಿ ತನದಿಂದ ಸರಿಯಾಗಿ ನೀಡಲಿಲ್ಲ ಎಂದು ತಾಲೂಕಿನ ಬಹುತೇಕ ರೈತರು ತಾಲೂಕು ಪಂಚಾಯಿತ ಕಾರ್ಯಾಲಯದ ಮುಂದೆ ಇಂದು ಬೆಳಿಗ್ಗೆ ಯಿಂದ ಧರಣಿ ಮಾಡಿದರು. ತಾಲೂಕಿನದ್ಯಂತ ಇಡಗೂರು, ಸೊನಗಾನಹಳ್ಳಿ, ಬೇವಿನಹಳ್ಳಿ, ಅಲೀಪುರ, ಜಿ.ಬೊಮ್ಮಸಂದ್ರ, ಗಂಗಸಂದ್ರ ಕಲ್ಲಿನಾಯಕನಹಳ್ಳಿ, ಮಿಣಕನಗುರ್ಕಿ, ಅಲಕಾಪುರ ಗ್ರಾಮಗಳ 9 ಪಂಚಾಯುತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪಿ.ಡಿ.ಓ ಅಧಿಕಾರಿಗಳು ಸರಿಯಾ ಬೆಳೆನಷ್ಟ ಸಮೀಕ್ಷೆ ನಡೆಸದೆ ವರದಿ ಮಾಡಿ ತಾಲೂಕಿನ ರೈತರಿಗೆ ಮೋಸ ಮಾಡಿದ್ದಾರೆಂದು ರೈತಸಂಘ, ಹಸಿರುಸೇನೆ ನೇತೃತ್ವದಲ್ಲಿ ಧರಣಿ ಮಾಡಿದರು. ರೈತರಿಂದ ವಿಮೆ ಕಂತು ಪಾವತಿಈ ಸಂದರ್ಭದಲ್ಲಿ ರೈತ ನಾಯಕರಾದ ಲಾಯರ್ ಲಕ್ಷ್ಮೀನಾರಾಯಣರವರು ಮಾತನಾಡಿ ಗ್ರಾ.ಪಂ.ಗಳಲ್ಲಿ ಪಿಡಿಒ ಗಳು ಸರಿಯಾಗಿ ಅವರ ಕರ್ತವ್ಯವನ್ನು ಮಾಡದೆ ಜವಾಬ್ದಾರಿತನದಿಂದ ವರ್ತಿಸಿದ್ದಾರೆ. ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿ ಹೆಚ್ಚು ವಿಮೆ ಪ್ರೀಮಿಯಮ್ ವಸೂಲಾಗಿರುವುದು ನಮ್ಮ ತಾಲೂಕಿನಿಂದ ಎಂದು ಹೇಳಿದ್ದರುಈಗ ರೈತರಿಗೆ ನ್ಯಾಯವಾದ ಬೆಳೆ ನಷ್ಟ ಕೈಸೇರುತ್ತಿಲ್ಲ. ಅದ್ದರಿಂದ ತಪ್ಪಿತಸ್ತ ಅಧಿಕಾರಿಗಳನ್ನು ತಕ್ಷಣ ಅಮಾನತು ಮಾಡಿಬೇಕು. ನಂತರ ಅವರ ಮೇಲೆ ಕಾನೂನು ಕ್ರಮ ಜರಿಗಿಸಬೇಕೆಂದು ರೈತ ಸಂಘದ ನಾಯಕರು ತಾ.ಪಂ.ಇ.ಓ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡಿದರು.

9 ಪಿಡಿಒಗಳ ವಿರುದ್ಧ ದೂರುರೈತಸಂಘದ ತಾಲ್ಲೂಕು ಅಧ್ಯಕ್ಷರಾದ ಲೋಕೇಶ್ ಗೌಡ ಮಾತನಾಡಿ, ತಾಲ್ಲೂಕಿನಲ್ಲಿ ರೈತರಿಗಾದ ನಷ್ಟವನ್ನು ಸರಿಪಡಿಸಬೇಕು. ಇಲ್ಲವಾದಲ್ಲಿ ಈ ವಿಚಾರವನ್ನು ವಿಧಾನಸೌಧದ ವರೆವಿಗೂ ತೆಗೆದುಕೊಂಡು ಹೋಗಲಾಗುತ್ತದೆ. ನಾಳೆ ಬೆಳಿಗ್ಗೆ ಪರಿಹಾರ ಸಿಗದ ಪ್ರತಿಯೊಬ್ಬ ರೈತರು ಗ್ರಾಮಾಂತರ ಠಾಣೆಯಲ್ಲಿ ಪ್ರತ್ಯೇಕವಾಗಿ 9 ಮಂದಿ ಪಿ.ಡಿ.ಓ ಗಳ ವಿರುದ್ದ ದೂರು ದಾಖಲಿಸಲಿದ್ದಾರೆಂದು ಎಂದು ತಿಳಿಸಿದ್ದಾರೆ.

ಡೀಸಿ ಜತೆ ಚರ್ಚಿಸುವ ಭರವಸೆಇ.ಓ. ಹೊನ್ನಯ್ಯ.ಗೌರಿಬಿದನೂರು ತಾಲ್ಲೂಕು ಪಂಚಾಯಿತಿ ಅಧಿಕಾರಿ ಮಾತನಾಡಿ, ತಾಲೂಕಿನಾದ್ಯಂತ ರೈತರಿಗಾಗಿರುವ ಅನ್ಯಾಯವನ್ನು ಈ ದಿನವೇ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಮತ್ತು ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡುತ್ತೇವೆ ಎಂದು ತಿಳಿಸಿದರು.

ರೈತ ಪ್ರತಿಭಟನೆಯಲ್ಲಿ ರೈತಸಂಘದ ತಾಲ್ಲೂಕು ಅಧ್ಯಕ್ಷರಾದ ಲೋಕೇಶ್ ಗೌಡ, ರೈತ ನಾಯಕ ಲಾಯರ್ ಲಕ್ಷ್ಮೀನಾರಾಯಣ, ರಾಜಣ್ಣ, ನರಸಿಂಹಮೂರ್ತಿ, ಸುರೇಶ್, ಹರಿಪ್ರಕಾಶ್, ಸನತ್ ಕುಮಾರ್, ಲಕ್ಷ್ಮೀಪತಿ ಜಕ್ಕೆನಹಳ್ಳಿ, ಸೊನಗಾನಹಳ್ಳಿ ತಿಮ್ಮೇಗೌಡ, ನಾರಾಯಣಪ್ಪ ಮತ್ತು ಇನ್ನೂ ಮುಂತಾದ ರೈತ ಮುಖಂಡರು ಹಾಜರಾಗಿದ್ದರು.