ಕವಿತಾಳದಲ್ಲಿ ನೀರಿನ ಸಮಸ್ಯೆ ಪರಿಹಾರ ಕೈಗೊಳ್ಳದ ನಿರ್ಲಕ್ಷ್ಯ; ಆರೋಪ

| Published : Apr 17 2024, 01:22 AM IST

ಕವಿತಾಳದಲ್ಲಿ ನೀರಿನ ಸಮಸ್ಯೆ ಪರಿಹಾರ ಕೈಗೊಳ್ಳದ ನಿರ್ಲಕ್ಷ್ಯ; ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಕವಿತಾಳ ಪಪಂ ಮುಖ್ಯಾಧಿಕಾರಿ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿ ನೀರಿನ ಸಮಸ್ಯೆ ಕುರಿತು ಮಾಹಿತಿ ಪಡೆದರು.

ಕವಿತಾಳ: ಪಟ್ಟಣದ ಕೆಲವು ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿದ್ದು, ಪಪಂ ಅಧಿಕಾರಿಗಳು ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದರು.

ಇಲ್ಲಿನ 12 ಮತ್ತು 14ನೇ ವಾರ್ಡ್‌ಗಳಲ್ಲಿ ಕಳೆದ ಆರು ದಿನಗಳಿಂದ ನೀರು ಸರಬರಾಜು ಸ್ಥಗಿತವಾಗಿದೆ. ಹೀಗಾಗಿ ಬಳಕೆ ನೀರಿಗೆ ಪರದಾಡುವಂತಾಗಿದೆ. ಮಂಗಳವಾರ ಪಪಂ ಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಪಟ್ಟಣ ಪಂಚಾಯತಿ ಸಿಬ್ಬಂದಿ, ಪಿಎಸ್ಐ ಎಚ್.ನಾಗಪ್ಪ ಮತ್ತು ಉಪತಹಸೀಲ್ದಾರರಿಗೆ ವಾರ್ಡ್ ನಿವಾಸಿಗಳು ಲಿಖಿತ ಮನವಿ ಸಲ್ಲಿಸಿದರು.

ಮನವಿ ಸಲ್ಲಿದ ನಂತರ ಸಾರ್ವಜನಿಕರು, ಪಪಂ ಅಧಿಕಾರಿಗಳನ್ನು ಠಾಣೆಗೆ ಕರೆಯಿಸಿದ ಪೊಲೀಸರು ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು. ಈ ವೇಳೆ ಮಾಹಿತಿ ಪಡೆದು ಕಚೇರಿಗೆ ಆಗಮಿಸಿದ ಮುಖ್ಯಾಧಿಕಾರಿ ದುರುಗಣ್ಣ ಕೆ, ಅವರು ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿ ನೀರಿನ ಸಮಸ್ಯೆ ಕುರಿತು ಸಾರ್ವಜನಿಕರಿಂದ ಮಾಹಿತಿ ಪಡೆದರು.

ನೀರು ನಿರ್ವಹಣೆಯಲ್ಲಿ ಲೋಪವಾದರೆ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ವಿದ್ಯುತ್ ಸಮಸ್ಯೆ, ಪೈಪ್‌ಲೈನ್ ದುರಸ್ತಿಗೆ ಬಿಡಿ ಭಾಗಗಳ ಖರೀದಿಗೆ ಹಣ ನೀಡುವುದು ಸೇರಿ ಕೆಲವು ಸಮಸ್ಯೆ ಸಿಬ್ಬಂದಿ ಹೇಳಿಕೊಂಡರು.

ಮಾಜಿ ಸದಸ್ಯ ಮೌನೇಶ ಹಿರೇಕುರಬರ, ಶರಬಣ್ಣ ರೊಟ್ಟಿ, ಚನ್ನರಡ್ಡಿ ಸಾಹುಕಾರ ಭಾವಿಕಟ್ಟಿ, ಶೈಲೇಶ ಮಿಶ್ರಾ, ಮಹಾದೇವ ನಾಡಗೌಡ, ಅಯ್ಯಣ್ಣ ಗಡ್ಡಿ, ಬಸವರಾಜ ರೊಟ್ಟಿ, ಶರಣಪ್ಪ ರೊಟ್ಟಿ, ರಡ್ಡೆಪ್ಪ ಕಸಬಿ, ಪ್ರಕಾಶ ಹೂಗಾರ, ವಿರೇಶ ರೊಟ್ಟಿ, ಶರಣಪ್ಪ, ರಘು ಪಾಟೀಲ, ಉಪಸ್ಥಿತರಿದ್ದರು.