ನಾಗರಹಾವು ಅಂತ್ಯಸಂಸ್ಕಾರಕ್ಕೆ ನಿರ್ಲಕ್ಷ್ಯ; ಕುಕ್ಕೆ ದೇವಳದ ಅಧಿಕಾರಿಗಳ ವಿರುದ್ಧ ಆಕ್ರೋಶ

| Published : Jul 13 2024, 01:37 AM IST

ನಾಗರಹಾವು ಅಂತ್ಯಸಂಸ್ಕಾರಕ್ಕೆ ನಿರ್ಲಕ್ಷ್ಯ; ಕುಕ್ಕೆ ದೇವಳದ ಅಧಿಕಾರಿಗಳ ವಿರುದ್ಧ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ಕೆಲ ಹೊತ್ತಿನ ಬಳಿಕ ಅಲ್ಲಿನ ಪ್ರಮುಖರು ಮೃತ ಸರ್ಪವನ್ನು ಆಡಳಿತ ಕಚೇರಿ ಬಳಿ ಇಟ್ಟು ಪ್ರತಿಭಟಿಸಿ ಸಂಬಂಧಿಸಿದವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಘಟನೆಯೂ ನಡೆಯಿತು.

ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ

ವಾಹನದಡಿಗೆ ಸಿಲುಕಿ ಮೃತಪಟ್ಟ ನಾಗರ ಹಾವಿನ ಸಂಸ್ಕಾರಕ್ಕೆ ದೇವಳದದಿಂದ ತುರ್ತು ಸ್ಪಂದನೆ ಸಿಗದ ಘಟನೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಗುರುವಾರ ನಡೆದಿದ್ದು, ಈ ಬಗ್ಗೆ ದೇವಳದ ಅಧಿಕಾರಿಗಳು, ಸಿಬ್ಬಂದಿ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು.

ಕುಕ್ಕೆ ಸುಬ್ರಹ್ಮಣ್ಯದ ಬೈಪಾಸ್ ರಸ್ತೆಯಲ್ಲಿ ವಾಹನದಡಿಗೆ ಬಿದ್ದು ಸರ್ಪವೊಂದು ಮೃತಪಟ್ಟಿತ್ತು. ಇದನ್ನು ಗಮನಿಸಿದ ಸಾರ್ವಜನಿಕರು ಸುಬ್ರಹ್ಮಣ್ಯ ದೇವಳದ ಅಧಿಕಾರಿಗಳ ಗಮನಕ್ಕೆ ತಂದು ಅಂತಿಮ ಕಾರ್ಯಗಳನ್ನು ಮಾಡುವಂತೆ ತಿಳಿಸಲಾಗಿತ್ತು. ಆದರೆ ಅಲ್ಲಿನ ಅಧಿಕಾರಿಗಳು ತಕ್ಷಣಕ್ಕೆ ಸ್ಪಂದಿಸದೆ ಉಡಾಫೆ ಉತ್ತರ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಕೆಲ ಹೊತ್ತಿನ ಬಳಿಕ ಅಲ್ಲಿನ ಪ್ರಮುಖರು ಮೃತ ಸರ್ಪವನ್ನು ಆಡಳಿತ ಕಚೇರಿ ಬಳಿ ಇಟ್ಟು ಪ್ರತಿಭಟಿಸಿ ಸಂಬಂಧಿಸಿದವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಘಟನೆಯೂ ನಡೆಯಿತು.

ಬಳಿಕ ಅಲ್ಲಿಗೆ ಆಗಮಿಸಿದ ದೇವಳದ ಎಇಒ ಯೇಸುರಾಜ್ ಅವರು ಅಹವಾಲು ಆಲಿಸಿ ಅಂತಿಮ ಕಾರ್ಯದ ವ್ಯವಸ್ಥೆ ಮಾಡುವ ಭರವಸೆ ನೀಡಿದರು. ದೇವಳದ ಆಡಳಿತಾಧಿಕಾರಿ ಸ್ಪಂದನೆ: ಘಟನೆ ಬಗ್ಗೆ ದೇವಳದ ಯಾರೂ ಸ್ಪಂದಿಸದ ವೇಳೆ ರಾಜೇಶ್ ಎನ್.ಎಸ್. ಅವರು ಪುತ್ತೂರು ಸಹಾಯಕ ಆಯುಕ್ತ, ದೇವಳದ ಆಡಳಿತಾಧಿಕಾರಿ ಆಗಿರುವ ಜುಬಿನ್ ಮೊಹಪಾತ್ರ ಅವರಿಗೆ ಮಾಹಿತಿ ನೀಡಿದರು. ಕೂಡಲೇ ಸ್ಪಂದಿಸಿದ ಅವರು ದೇವಸ್ಥಾನದ ವತಿಯಿಂದಲೇ, ಸರ್ಪದ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಲು ದೇವಸ್ಥಾನದವರಿಗೆ ಸೂಚಿಸಿದರು. ಸೂಚನೆ ಮೇರೆಗೆ ಸರ್ಪದ ಅಂತಿಮ ಕಾರ್ಯವನ್ನು ದೇವಳದ ವತಿಯಿಂದ ನೆರವೇರಿಸಲಾಯಿತು.