ಗ್ರಾಪಂ ಸದಸ್ಯರ ನಿರ್ಲಕ್ಷ್ಯ<bha>;</bha> ಪಿಡಿಒ ಅಮಾನತಿಗೆ ಆಗ್ರಹ

| Published : Jan 13 2024, 01:36 AM IST

ಸಾರಾಂಶ

ಗ್ರಾಮಾ ಠಾಣಾ ವ್ಯಾಪ್ತಿಯಿಂದ ಹೋಗಿರುವ ಕಂದಾಯ ಭೂಮಿಯಲ್ಲಿನ ಮನೆಗಳಿಗೆ ಅಕ್ರಮವಾಗಿ ಇ-ಸ್ವತ್ತು ಗಳ ಮಾಡುತ್ತಾ ಗ್ರಾ.ಪಂ ವ್ಯಾಪ್ತಿಯ ಮನೆಗಳಿಗೆ ಇ-ಸ್ವತ್ತು ಮಾಡಲು ಸಂಬಂಧ ಪಟ್ಟ ದಾಖಲೆಗಳನ್ನು ನೀಡಿದರೂ ಸಹಾ ಇ ಸ್ವತ್ತು ಮಾಡುತ್ತಿಲ್ಲ. ಇಂತಹ ಹಲವು ಹಗರಣಗಳ ಮಾಡುತ್ತಿರುವ ಪಿಡಿಒ ವಿರುದ್ದ ಈ ಹಿಂದೆ ಗ್ರಾ.ಪಂ ಎದುರು ಪ್ರತಿಭಟನೆ ನಡೆಸಿದರೂ ಪ್ರಯೋಜನವಾಗಿಲ್ಲ.

ತಾಲೂಕು ಪಂಚಾಯಿತಿ ಕಚೇರಿ ಎದುರು ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ

ಕನ್ನಡಪ್ರಭ ವಾರ್ತೆ ಚನ್ನಗಿರಿ

ತಾಲೂಕಿನ ತಾವರೆಕೆರೆ ಗ್ರಾಮ ಪಂಚಾಯಿತಿ ಪಿಡಿಒ, ಗ್ರಾಪಂ ಚುನಾಯಿತ ಸದಸ್ಯರ ನಿರ್ಲಕ್ಷಿಸಿ ಸರ್ವಾಧಿಕಾರಿ ಧೋರಣೆ ಆಡಳಿತ ನಡೆಸುತ್ತಿದ್ದು ಇವರ ತಕ್ಷಣ ಅಮಾನತುಗೊಳಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ತಾಲೂಕು ಪಂಚಾಯಿತಿ ಕಚೇರಿ ಎದುರು ಜಿಲ್ಲಾ ದಲಿತ ಸಂಘರ್ಷ ಸಮಿತಿ ಪ್ರಧಾನ ಸಂಚಾಲಕ ಬಿ.ದುಗ್ಗಪ್ಪ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಮಾತನಾಡಿದ ಬಿ.ದುಗ್ಗಪ್ಪ 15ನೇ ಹಣಕಾಸು ಯೋಜನೆಯಡಿ ಕಾಮಗಾರಿಗಳಿಗೆ ಹೆಚ್ಚುವರಿಯಾಗಿ ಜಿಎಸ್.ಟಿ, ರಾಯಲ್ಟಿಯ ಸರ್ಕಾರಕ್ಕೆ ಕಟ್ಟಬೇಕು ಒಂದು ಕಾಮಗಾರಿ ಕೆಲಸಕ್ಕೆ ಎರಡು ಬಾರಿ ಹಣ ಪಡೆಯುವ ಜೊತೆಗೆ ಚುನಾಯಿತ ಸದಸ್ಯರು ಕೇಳುವ ದಾಖಲೆಗಳ ನೀಡದೆ ನಿರಾಕರಿಸುತ್ತಾರೆ ಎಂದು ದೂರಿದರು.

ಗ್ರಾಪಂ ಸಭೆಯಲ್ಲಿ ಅಧ್ಯಕ್ಷರು-ಉಪಾಧ್ಯಕ್ಷರು, ಸದಸ್ಯರು ಅಂಗಿಕಾರ ಮಾಡಿದ ಕಾಮಗಾರಿಗಳ ಮಾಡಿಸದೆ ಇವರಿಗೆ ತಿಳಿದ ಒಬ್ಬ ಸದಸ್ಯರ ಮಾತು ಕೇಳಿ ಇವರಿಗೆ ತಿಳಿದಂತೆ ಕೆಲಸ ಮಾಡಿಸುತ್ತಾರೆ ಎಂದು ಆರೋಪಿಸಿದರು.

ಗ್ರಾಮಾ ಠಾಣಾ ವ್ಯಾಪ್ತಿಯಿಂದ ಹೋಗಿರುವ ಕಂದಾಯ ಭೂಮಿಯಲ್ಲಿನ ಮನೆಗಳಿಗೆ ಅಕ್ರಮವಾಗಿ ಇ-ಸ್ವತ್ತು ಗಳ ಮಾಡುತ್ತಾ ಗ್ರಾ.ಪಂ ವ್ಯಾಪ್ತಿಯ ಮನೆಗಳಿಗೆ ಇ-ಸ್ವತ್ತು ಮಾಡಲು ಸಂಬಂಧ ಪಟ್ಟ ದಾಖಲೆಗಳನ್ನು ನೀಡಿದರೂ ಸಹಾ ಇ ಸ್ವತ್ತು ಮಾಡುತ್ತಿಲ್ಲ. ಇಂತಹ ಹಲವು ಹಗರಣಗಳ ಮಾಡುತ್ತಿರುವ ಪಿಡಿಒ ವಿರುದ್ದ ಈ ಹಿಂದೆ ಗ್ರಾ.ಪಂ ಎದುರು ಪ್ರತಿಭಟನೆ ನಡೆಸಿದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.

ಈ ವಿಷಯ ಕುರಿತು ತಾ.ಪಂ ಕಾರ್ಯನಿರ್ವಾಹಣಾಧಿಕಾರಿ ಬಿ.ಕೆ.ಉತ್ತಮ ಪ್ರತಿಕ್ರಿಯೆ ನೀಡಿ ಈ ಹಿಂದೆ ಗ್ರಾ.ಪಂ ಎದುರು ಪ್ರತಿಭಟನೆ ನಡೆಸಿದಾಗಲೇ ತನಿಖೆ ನಡೆಸಿ ಮೇಲಾಧಿಕಾರಿಗಳಿಗೆ ವರದಿ ಮಂಡಿಸಲಾಗಿದೆ ನಾನು 16ರಂದು ದಾವಣಗೆರೆ ಜಿ.ಪಂ ನ ಅಧಿಕಾರಿಗಳ ಬಳಿ ಈ ಬಗ್ಗೆ ವರದಿ ಮಾಡಲಾಗುವುದು. ನಾನು ಯಾವುದೇ ತೀರ್ಮಾನಗಳ ತೆಗೆದುಕೊಳ್ಳುವುದು ನನ್ನಲಿಲ್ಲ. ಮೇಲಾಧಿಕಾರಿಗಳು ತೆಗೆದುಕೊಳ್ಳಬೇಕು ಈ ದಿನದಿಂದ ಪಿಡಿಒ ರನ್ನು ಸ್ಥಳಾಂತರಿಸಿ ಬೇರೆ ಪಿಡಿಒ ನಿಯೋಜಿಸಿದ್ದೇನೆ ಒಂದು ವಾರ ಸಮಯ ನೀಡಿ ಎಂದು ಪ್ರತಿಭಟನಾ ನಿರತರಿಗೆ ತಿಳಿಸಿದ ನಂತರ ಪ್ರತಿಭಟನೆ ನಿಲ್ಲಿಸಿದರು.

ಈ ಪ್ರತಿಭಟನೆಯಲ್ಲಿ ಜಿಲ್ಲಾ ಡಿ.ಎಸ್.ಎಸ್ ನ ಮುಖಂಡರಾದ ನಾಗಪ್ಪ, ಮಂಜುನಾಥ್, ಗಣೇಶ್, ತಿಪ್ಪೇಶ್, ದೀಪಕ್ ಕುಮಾರ್, ಮಂಜುನಾಥ್, ಜಗದೀಶ್, ಮಧು, ಮಹೇಂದ್ರ ಸೇರಿದಂತೆ ಡಿ.ಎಸ್.ಎಸ್ ನ ಕಾರ್ಯಕರ್ತರು, ಗ್ರಾಮಸ್ಥರು ಹಾಜರಿದ್ದರು.