ಶ್ರೀರಂಗಪಟ್ಟಣ ತಾಲೂಕು ಸಾರ್ವಜನಿಕ ಆಸ್ಪತ್ರೆ ಸುಮಾರು 100 ಹಾಸಿಗೆ ಹೊಂದಿದ್ದು, ಕೋವಿಡ್ ಸಮಯದಲ್ಲಿ ರಾಜ್ಯ ಪ್ರಶಸ್ತಿ ಲಭಿಸಿ ಉತ್ತಮ ಹೆಸರು ಪಡಿಸಿದ್ದ ಆಸ್ಪತ್ರೆ ಇತ್ತೀಚೆಗೆ ರೋಗಿಗಳಿಗೆ ಚಿಕಿತ್ಸೆ ನೀಡಿದೆ. ರೋಗಿಗಳಿಂದ ಹಣ ವಸೂಲಿ, ಸೂಕ್ತ ಮೂಲ ಸೌಲಭ್ಯ ಹಾಗೂ ಆಸ್ಪತ್ರೆಯಲ್ಲಿನ ಅಶುಚಿತ್ವ ತಾಂಡವವಾಡುತ್ತಿದೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಬರುವ ರೋಗಿಗಳ ಬಗ್ಗೆ ನಿರ್ಲಕ್ಷ್ಯ ಸೇರಿದಂತೆ ಇಲ್ಲಿನ ಅವ್ಯವಸ್ಥೆ ಖಂಡಿಸಿ ಜೆಡಿಎಸ್, ಬಿಜೆಪಿ ಪಕ್ಷಗಳು ಸೇರಿದಂತೆ ವಿವಿಧ ಸಂಘಟನೆಗಳು ಜೊತೆಗೂಡಿ ಪ್ರತಿಭಟನೆ ನಡೆಸಿದರು.ತಾಲೂಕು ಸಾರ್ವಜನಿಕ ಆಸ್ಪತ್ರೆ ಸುಮಾರು 100 ಹಾಸಿಗೆ ಹೊಂದಿದ್ದು, ಕೋವಿಡ್ ಸಮಯದಲ್ಲಿ ರಾಜ್ಯ ಪ್ರಶಸ್ತಿ ಲಭಿಸಿ ಉತ್ತಮ ಹೆಸರು ಪಡಿಸಿದ್ದ ಆಸ್ಪತ್ರೆಗೆ ಪ್ರತಿನಿತ್ಯ ನೂರಾರು ಬಡ ರೋಗಿಗಳು ಹಾಗೂ ಅಪಘಾತ ಪ್ರಕರಣಗಳಿಗೆ ಸಂಬಂಧಿಸಿದತೆ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಆದರೆ, ಇತ್ತೀಚೆಗೆ ಸುಮಾರು ಒಂದುವರೆ ವರ್ಷಗಳಿಂದ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಿದೆ. ರೋಗಿಗಳಿಂದ ಹಣ ವಸೂಲಿ, ಸೂಕ್ತ ಮೂಲ ಸೌಲಭ್ಯ ಹಾಗೂ ಆಸ್ಪತ್ರೆಯಲ್ಲಿನ ಅಶುಚಿತ್ವ ತಾಂಡವವಾಡುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.ಅಲ್ಲದೇ, ಆಸ್ಪತ್ರೆಯ ಡಯಾಲಿಸಿಸ್ ಘಟಕದ ಜನರೆಟರ್ ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸದೇ ಡಯಾಜಿಸ್ ರೋಗಿಗಳು ಜೀವನ್ಮರಣದ ನಡುವೆ ಹೋರಾಟ ಮಾಡುವ ಗಂಭೀರ ಪರಿಸ್ಥಿತಿಗೆ ಬಂದಿದೆ. ಕೆಲವು ವೈದ್ಯರು, ಲ್ಯಾಬ್ ಸಿಬ್ಬಂದಿ, ಪ್ಯಾರ ಮೆಡಿಕಲ್ ಶೂಶ್ರತದಾರರು ಮತ್ತು ಗುತ್ತಿಗೆ ಆಧಾರಿತ ಸಿಬ್ಬಂದಿ, ಸರಿಯಾದ ಸಮಯ ಕರ್ತವ್ಯಕ್ಕೆ ಹಾಜರಾಗದೆ ನಿರ್ಲಕ್ಷ್ಯ ವಹಿಸುತ್ತಿರುವ ಜೊತೆಗೆ ಅಸ್ಪತ್ರೆಗೆ ಬರುವ ರೋಗಿಗಳೊಂದಿಗೆ ಬಹಳ ನಿಷ್ಟೂರವಾಗಿ ವರ್ತಿಸುತ್ತಿದ್ದಾರೆ. ಪ್ರಸುತಿ ಮತ್ತು ಹೆರಿಗೆಗಾಗಿ ಬರುವ ಮಹಿಳೆಯರೊಂದಿಗೆ ಹಣದ ಅಮಿಷಕ್ಕೆ ಬೇಡಿಕೆ ಇಡುತ್ತಿರುವುದಾಗಿ ಬೇಸರ ವ್ಯಕ್ತಪಡಿಸಿದರು.
ರೋಗಿಗಳ ತುರ್ತು ಸಂದರ್ಭ ಹಾಗೂ ಹೃದಾಯಘಾತಕ್ಕೆ ಸಂಬಂಧಿಸಿದತೆ ಸರಿಯಾದ ಸುಸ್ರರ್ಜಿತ ಇಸಿಜಿ ಯಂತ್ರ ಆಳವಡಿಸಿಲ್ಲ. ಕಣ್ಣಿನ ವೈದ್ಯರು ಕಣ್ಣಿನ ಅಪರೇಷನ್ ಮಾಡುವುದಾಗಿ ಹಣ ಬೇಡಿಕೆ ಇಡುತ್ತಿದ್ದಾರೆ. 1 ಕೋಟಿ ರು. ವೆಚ್ಚದಲ್ಲಿ ಅಳವಡಿಸಿರುವ ನ್ಯಾಚುರಲ್ ಆಕ್ಸಿಜನ್ ಘಟಕವನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಎಂದರು.17 ಹಾಸಿಗೆಯಳ್ಳ ಸುಸ್ರಜಿತಾ ತೀವ್ರ ನಿಗಾ ಘಟಕ ಇದ್ದರೂ ಸಹ ತುರ್ತು ಸಂದರ್ಭಗಳಲ್ಲಿ ಹಾಗೂ ಆಘಾತ, ಅಪಘಾತ ಪ್ರಕರಣಗಳಲ್ಲಿ ಮೈಸೂರು ಸೇರಿದಂತೆ ಇತರೆ ನಗರಗಳ ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸ್ಸು ಮಾಡುತ್ತಿದ್ದಾರೆ. ಅಲ್ಲದೇ, ಹೆರಿಗೆ ಮತ್ತು ತುರ್ತು ಸಂದರ್ಭಗಳಲ್ಲಿ ಹಾಗೂ ಅಪಘಾತ ಪ್ರಕರಣಗಳಲ್ಲಿ ರೋಗಿಗಳಿಗೆ ತುರ್ತಾಗಿ ರಕ್ತ ಅವಶ್ಯಕತೆಯಿದ್ದರೂ ಸಹ 30 ಯೂನಿಟ್ ಇರುವ ಬ್ಲಡ್ ಬ್ಯಾಂಕ್‌ನ ಇಡ್‌ನ್ನು ಉಪಯೋಗಿಸದೇ ಇರುವುದು, ಹಾಗೂ30 ಯೂನಿಟ್ ಇರುವ ಇಡ್ ಬ್ಯಾಂಕಿನ ವಿವರ ನಾಮಫಲಕವನ್ನು ಸಾರ್ವಜನಿಕವಾಗಿ ಅಳವಡಿಸಿಲ್ಲ.
ಈ ಹಿಂದೆ ಗುತ್ತಿಗೆ ಆಧಾರಿತ ಕೆಲ ಸಿಬ್ಬಂದಿಗಳು ನಕಲಿ ಬಿಲ್ ತಯಾರಿಸಿ ಅಂದಾಜು 3 ಲಕ್ಷಕ್ಕೂ ಹೆಚ್ಚು ಬಡರೋಗಿಗಳ ಹಣವನ್ನು ವಂಚನೆ ಮಾಡಿದ್ದರೂ ಸಹ ಸರಿಯಾದ ತನಿಖೆ ಮಾಡದೇ ಶಾಸಕರ ಪ್ರಭಾವದಿಂದ ವಂಚನೆ ಮಾಡಿದ ಸಿಬ್ಬಂದಿ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣ ದಾಖಲಿಸಿಲ್ಲ ಎಂದು ಆರೋಪಿಸಿದರು.ಇತ್ತೀಚೆಗೆ ತಾಲೂಕಿನ ಅರಕೆರೆ ಪ್ರಾಥಮಿಕ ಸರ್ಕಾರಿ ಆಸ್ಪತ್ರೆ ಮುಖ್ಯ ಕೊಠಡಿಯನ್ನು ಶಾಸಕರ ಖಾಸಗಿ ಕಾರ್ಯಕ್ರಮಕ್ಕೆ ದುರುಪಯೋಗ ಮಾಡಿಕೊಂಡಿರುವ ವ್ಯಕ್ತಿಗಳ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ. ಶೀಘ್ರ ಕ್ರಮ ಕೈಗೊಳ್ಳುವ ಜೊತೆಗೆ ತಾಲೂಕು ವ್ಯಾಪ್ತಿ ಆಸ್ಪತ್ರೆಗಳ ನಿರುಪಯುಕ್ತ ವೈದ್ಯಕೀಯ ಉಪಕರಣವನ್ನು ಎಲ್ಲೆಂದರಲ್ಲಿ ಬಿಸಾಡಿ ಸಾರ್ವಜನಿಕರ ಆರೋಗ್ಯರಕ್ಕೆ ಮತ್ತು ಪರಿಸರಕ್ಕೆ ಮಾರಕವಾಗುತ್ತಿದೆ ಎಂದರು.
ಈ ಎಲ್ಲಾ ವಿಷಯಗಳ ಬಗ್ಗೆ ಸೂಕ್ತ ತನಿಖೆ ಕೈಗೊಂಡು, ತುರ್ತಾಗಿ ಕ್ರಮ ಕೈಗೊಳ್ಳುವಂತೆ ತಾಲೂಕು ಆರೋಗ್ಯಾಧಿಕಾರಿಗಳ ಮೂಲಕ ಜಿಲ್ಲಾ ಮುಖ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಈ ವೇಳೆ ಪುರಸಭಾ ಮಾಜಿ ಸದಸ್ಯರಾದ ನಳಿನಿ ಸತ್ಯರಾಜ್, ವೆಂಕಟೇಶ್, ರೈತ ಹೋರಾಟಗಾರ ಕೆ.ಎಸ್ ನಂಜುಂಡೇಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ ದಶರಥ, ಬಿಜೆಪಿ ಶ್ರೀಧರ್, ಚಂದನ್, ವಕೀಲ ಬಾಲು, ಸುಧಾಕರ್, ಗಂಜಾಂ ನಾರಾಯಣಪ್ಪ, ಸಂಜಯ್, ಅಶ್ವಥ್ ನಾರಾಯಣ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಇದ್ದರು.