ಸಾರಾಂಶ
ಕೊಲೆಗಡುಕನಿಗೆ ಗಲ್ಲು ಶಿಕ್ಷೆ ವಿಧಿಸುವ ಮೂಲಕ ಕೊಲೆಗಾರರಿಗೆ ಸೂಕ್ತ ಸಂದೇಶ ರವಾನಿಸಬೇಕು 
ಬಳ್ಳಾರಿ: ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ್ ರನ್ನು ಹತ್ಯೆ ಮಾಡಿದ ಕೊಲೆಗಡುಕ ಫಯಾಜ್ ಎಂಬುವನಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಹಾಗೂ ಪ್ರಕರಣದ ತನಿಖೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿ ಬಳ್ಳಾರಿ ಜಿಲ್ಲಾ ವೀರಶೈವ ಮಹಾಸಭಾ ಪ್ರಜ್ಞಾವಂತ ನಾಗರಿಕರ ವೇದಿಕೆ ಹಾಗೂ ವೀರಶೈವ ನೌಕರರ ಸಂಘದಿಂದ ನಗರದಲ್ಲಿ ಮೇಣಬತ್ತಿ ಮೆರವಣಿಗೆ ನಡೆಸಿ ಪ್ರತಿಭಟಿಸಲಾಯಿತು.
ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ್ ಅವರನ್ನು ಹುಬ್ಬಳ್ಳಿಯ ಕಾಲೇಜು ಆವರಣದಲ್ಲಿಯೇ ಕೊಲೆ ಮಾಡಲಾಗಿದೆ. ಈ ಸಂಬಂಧ ಫಯಾಜ್ ಎಂಬಾತನನ್ನು ಬಂಧಿಸಲಾಗಿದೆ. ಆದರೆ, ಪ್ರಕರಣ ತ್ವರಿತವಾಗಿ ತನಿಖೆ ನಡೆಸುವ ಕೆಲಸವಾಗಿಲ್ಲ. ಘಟನೆ ನಡೆದು ಒಂದು ವರ್ಷ ಕಳೆದರೂ ಈ ಬಗ್ಗೆ ಸರ್ಕಾರ ಸೂಕ್ತ ಕ್ರಮದ ಹೆಜ್ಜೆ ಇಟ್ಟಿಲ್ಲ. ಮುಖ್ಯಮಂತ್ರಿಗಳು ತ್ವರಿತ ನ್ಯಾಯಾಲಯ ರಚನೆ ಮಾಡುವ ಮೂಲಕ ಕೊಲೆಗಡಕರಿಗೆ 90 ದಿನದಲ್ಲಿ ಶಿಕ್ಷೆ ಕೊಡಿಸುವುದಾಗಿ ಹೇಳಿದ್ದರು. ಆದರೆ ಈವರೆಗೆ ವಿಶೇಷ ನ್ಯಾಯಾಲಯ ರಚನೆಯಾಗಿಲ್ಲ. ಈ ಕೂಡಲೇ ತ್ವರಿತ ನ್ಯಾಯಾಲಯದ ರಚನೆಗೆ ಸರ್ಕಾರ ಮುಂದಾಗಬೇಕು. ಕೊಲೆಗಡುಕನಿಗೆ ಗಲ್ಲು ಶಿಕ್ಷೆ ವಿಧಿಸುವ ಮೂಲಕ ಕೊಲೆಗಾರರಿಗೆ ಸೂಕ್ತ ಸಂದೇಶ ರವಾನಿಸಬೇಕು ಎಂದು ಒತ್ತಾಯಿಸಿದರು.ನಗರದ ಗಡಗಿಚನ್ನಪ್ಪ ವೃತ್ತದಿಂದ ಮೆರವಣಿಗೆ ಆರಂಭಿಸಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಗಾಂಧಿ ಪ್ರತಿಮೆ ಮುಂದೆ ಕೆಲ ಹೊತ್ತು ಧರಣಿ ನಡೆಸಿದರು. ಇದೇ ವೇಳೆ ಮೃತ ನೇಹಾ ಹಿರೇಮಠ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಜನಪರ ಹೋರಾಟಗಾರ ಕೆ.ಎಂ. ಮಹೇಶ್ವರ ಸ್ವಾಮಿ, ವೀರಶೈವ ಮಹಾಸಭಾದ ಕೋರಿ ವಿರೂಪಾಕ್ಷಪ್ಪ, ಕರಿಗೌಡ, ಗಂಗಾವತಿ ವೀರೇಶ್, ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಪಂಚಾಕ್ಷರಿ, ನೌಕರ ಸಂಘದ ಅಧ್ಯಕ್ಷ ಚನ್ನಬಸವ ಸ್ವಾಮಿ, ವಕೀಲ ಬಂಡ್ರಾಳು ಮೃತ್ಯುಂಜಯ ಸ್ವಾಮಿ, ಗೋನಾಳ್ ನಾಗಭೂಷಣ್ ಗೌಡ ಹಾಗೂ ಸುಮಾ ರೆಡ್ಡಿ ಮಾತನಾಡಿದರು.ವೀರಶೈವ ಸಂಘಟನೆಗಳ ಮುಖಂಡ ಪಿ.ಬಂಡೇಗೌಡ, ಎಣ್ಣೆ ಎರ್ರಿಸ್ವಾಮಿ, ಎಚ್.ಕೆ.ಗೌರಿಶಂಕರಸ್ವಾಮಿ, ಪುಟ್ಟು, ಬಿಸಲಳ್ಳಿ ಬಸವರಾಜ್, ಕೆ.ಪಿ ಚನ್ನಬಸವರಾಜ್, ಎರ್ರಿಸ್ವಾಮಿ, ಎ.ಪಿ.ಉಮೇಶ್, ಬಸವರಾಜ್, ಉಪ್ಪಾರ್ ಹೊಸಳ್ಳಿ ಸುರೇಶ್ ಗೌಡ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))