ನೇಹಾ ಕೊಲೆ ಪ್ರಕರಣ ಸಿಬಿಐಗೆ ವಹಿಸಿ: ನಟಿ ಮಾಳವಿಕಾ ಅವಿನಾಶ್

| Published : Apr 26 2024, 12:52 AM IST

ನೇಹಾ ಕೊಲೆ ಪ್ರಕರಣ ಸಿಬಿಐಗೆ ವಹಿಸಿ: ನಟಿ ಮಾಳವಿಕಾ ಅವಿನಾಶ್
Share this Article
  • FB
  • TW
  • Linkdin
  • Email

ಸಾರಾಂಶ

ಕಾಲೇಜು ಕ್ಯಾಂಪಸ್‌ನಲ್ಲೆ ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲ, ಹೀಗಾದರೆ ಪಾಲಕರು ಮಕ್ಕಳನ್ನು ಹೇಗೆ ಕಾಲೇಜಿಗೆ ಕಳುಹಿಸಲು ಧೈರ್ಯ ಮಾಡುತ್ತಾರೆ.

ಹುಬ್ಬಳ್ಳಿ:

ನೇಹಾ ಕೊಲೆ ಪ್ರಕರಣವನ್ನು ಸಿಬಿಐಗೆ ನೀಡಿದಾಗ ಮಾತ್ರ ನ್ಯಾಯ ಸಿಗುತ್ತದೆ ಎಂದು ನಟಿ, ಬಿಜೆಪಿ ನಾಯಕಿ ಮಾಳವಿಕಾ ಅವಿನಾಶ್ ಹೇಳಿದರು.

ಬಿಡನಾಳದಲ್ಲಿನ ನೇಹಾ ಮನೆಗೆ ಗುರುವಾರ ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಕಾಲೇಜು ಕ್ಯಾಂಪಸ್‌ನಲ್ಲೆ ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲ, ಹೀಗಾದರೆ ಪಾಲಕರು ಮಕ್ಕಳನ್ನು ಹೇಗೆ ಕಾಲೇಜಿಗೆ ಕಳುಹಿಸಲು ಧೈರ್ಯ ಮಾಡುತ್ತಾರೆ. ಈಗಾಗಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸಹ ಈ ಪ್ರಕರಣ ಸಿಬಿಐ ತನಿಖೆಗೆ ಆಗ್ರಹಿಸಿದ್ದಾರೆ. ಎಲ್ಲವೂ ಸುದೀರ್ಘವಾಗಿ ತನಿಖೆ ಆಗಬೇಕು ಎಂದರು.

ಕಾಂಗ್ರೆಸ್‌ ಎಲ್ಲವನ್ನೂ ರಾಜಕೀಯಗೊಳಿಸುತ್ತಿದೆ. ಅಲ್ಪಸಂಖ್ಯಾತರ ಓಲೈಕೆಗಾಗಿ ಅದು ಈ ರೀತಿ ಮಾಡುತ್ತಿದೆ. ಹಂತಕನಿಗೆ ಶಿಕ್ಷೆ ಆಗುವವರೆಗೂ ಪಕ್ಷದಿಂದ ಹೋರಾಟ ನಡೆಯುತ್ತದೆ. ಸಿಐಡಿ ತನಿಖೆಯಲ್ಲಿ ನಮಗೆ ನಂಬಿಕೆ ಇಲ್ಲ, ಗುರುವಾರ ನಡೆದ ಘಟನೆಗೆ ಮಂಗಳವಾರ ಮುಖ್ಯಮಂತ್ರಿ ಮಾತನಾಡುತ್ತಾರೆ. ಅವರಿಗೆ ಅಷ್ಟು ಪುರುಸೊತ್ತು ಇಲ್ಲ. ಮುಖ್ಯಮಂತ್ರಿಗಳು ಎಲ್ಲವನ್ನು ರಾಜಕೀಯವಾಗಿ ನೋಡುತ್ತಾರೆ ಎಂದು ಹರಿಹಾಯ್ದರು.