ನೇಹಾ ಕೊಲೆ ಆರೋಪಿಗೆ ಗಲ್ಲು ಶಿಕ್ಷೆ ಆಗಲಿ

| Published : Apr 22 2024, 02:02 AM IST

ಸಾರಾಂಶ

ಯಾವುದೇ ಸಮಾಜದ ಹೆಣ್ಣುಮಕ್ಕಳಿಗೂ ಈ ರೀತಿ ಅನ್ಯಾಯವಾಗಬಾರದು. ಕಾರಣ ದೇಶದ ಕಾನೂನು ಬಿಗಿಯಾಗಬೇಕು

ಗದಗ: ನಗರದ ಅಖಿಲ ಭಾರತ ಜಂಗಮ ಸೇವಾ ಸಮಿತಿ, ವೀರಶೈವ ಮಹಾಸಭಾ, ಪ್ರಜಾಪರಿವರ್ತನಾ ವೇದಿಕೆ, ಕ್ರಾಂತಿ ಸೇನೆ, ವೀರ ಮದಕರಿ ಸೇನೆ, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘಟನೆ ಹಾಗೂ ವಿವಿಧ ಹಿಂದೂಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ನೇಹಾ ಹಿರೇಮಠರನ್ನು ಹತ್ಯೆಗೈದ ಆರೋಪಿ ಫಯಾಜ್‌ನನ್ನ ಗಲ್ಲಿಗೆರಿಸುವಂತೆ ಆಗ್ರಹಿಸಿ ಶನಿವಾರ ಮುಳಗುಂದ ನಾಕಾದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಇದಕ್ಕೂ ಮುನ್ನ ನಗರದ ಮುಳಗುಂದ ನಾಕಾದಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲಕಾಲ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತ ಪಡಿಸಿದ ಪ್ರತಿಭಟನಾಕಾರರು ಪ್ರತಿಭಟನೆಯುದ್ಧಕ್ಕೂ ಆರೋಪಿಗೆ ಗಲ್ಲು ಶಿಕ್ಷೆ ನೀಡಿ ನ್ಯಾಯ ದೊರಕಿಸಿಕೊಡಿ ಎಂಬ ಘೋಷವ್ಯಾಕ್ಯಗಳು ಕೂಗಿದರು.

ಈ ಸಂದರ್ಭದಲ್ಲಿ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಬಸವರಾಜ ಕೊರ್ಲಹಳ್ಳಿ ಮಾತನಾಡಿ, ಯಾವುದೇ ಸಮಾಜದ ಹೆಣ್ಣುಮಕ್ಕಳಿಗೂ ಈ ರೀತಿ ಅನ್ಯಾಯವಾಗಬಾರದು. ಕಾರಣ ದೇಶದ ಕಾನೂನು ಬಿಗಿಯಾಗಬೇಕು ಎಂದರು.

ಕ್ರಾಂತಿ ಸೇನೆ ಜಿಲ್ಲಾಧ್ಯಕ್ಷ ಬಾಬು ಬಾಕಳೆ ಮಾತನಾಡಿ, ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಅನಿವಾರ್ಯ ಎಂದರು.

ಜಂಗಮ ಸಮಾಜದ ಮುಖಂಡ ವಿ.ಕೆ. ಗುರುಮಠ ಮಾತನಾಡಿ, ವಿವಿಧ ಸಮುದಾಯಗಳನ್ನು ಒಂದುಗೂಡಿಸಿ ಮುಂಬರುವ ದಿನಮಾನದಲ್ಲಿ ಯಾರಿಗೂ ಅನ್ಯಾಯವಾಗದಂತೆ ಸಂಸ್ಕಾರ-ಸಂಸ್ಕೃತಿ ನೀಡಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಸೇನಾ ನಿವೃತ್ತಿ ಹೊಂದಿದ ಯೋಧ ರಾಜು ಹುಲಕೋಟಿ ಮಾತನಾಡಿ, ನಾವೆಲ್ಲ ಒಂದಾಗದಿದ್ದರೆ ಈ ಅನ್ಯಾಯ ನಿರಂತರವಾಗಲಿದೆ ಎಂದರು.

ಅಖಿಲ ಭಾರತ ಜಂಗಮ ಸೇವಾ ಸಮಿತಿ ಅಧ್ಯಕ್ಷ ಪ್ರಭಯ್ಯ ದಂಡಾವತಿಮಠ, ಕ್ರಾಂತಿಸೇನೆಯ ಮಹಿಳಾಧ್ಯಕ್ಷೆ ರಾಣಿ ಚಂದಾವರಿ ಹಾಗೂ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಬಸಲಿಂಗಪ್ಪ ಮಾತನಾಡಿದರು, ವಿ. ಬಿ. ಹಿರೇಮಠ ಮೇಮೊರಿಯಲ್ ಟ್ರಸ್ಟ್‌ನ ವಿ.ವಿ. ಹಿರೇಮಠ, ಸಂಗಮ್ಮ ಹಿರೇಮಠ, ವಿಜಯಕುಮಾರ ಹಿರೇಮಠ, ಮುರುಗೇಶ ಬಡ್ನಿ, ಸಂಗಮೇಶ ಮೆಣಸಿನಕಾಯಿ, ಬಸವರಾಜ ಬ್ಯಾಹಟ್ಟಿ, ಡಾ. ಜಿ.ಎಸ್. ಹಿರೇಮಠ, ಸಂತೋಷ, ಶಿವಕುಮಾರ, ಉಮಾಪತಿ ಭೂಸನೂರಮಠ, ಬಸಯ್ಯ ನಂದಿಲಕೋಲಮಠ ಶ್ರೀಧರ ಜವಳಿ, ಆರ್. ಎಂ. ಹಿರೇಮಠ, ಪ್ರವೀಣ ಹಬೀಬ್‌ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.