ಸ್ವತಂತ್ರ ಪೂರ್ವದಲ್ಲಿಯೇ ದೇಶದ ಭವಿಷ್ಯ ಮಕ್ಕಳಲ್ಲಿ ಇದೇ ಎಂದು ಕಂಡವರು ನೆಹರು. ಅವರಿಗೆ ಮಕ್ಕಳನ್ನು ಕಂಡರೆ ಬಲು ಪ್ರೀತಿ. ಮಕ್ಕಳೊಂದಿಗೆ ಮಕ್ಕಳಾಗಿ ಬದುಕಿದವರು ನೆಹರು. ಭಾರತದ ಪ್ರಥಮ ಪ್ರಧಾನಿಯಾಗಿ ದೇಶದ ಜಟಿಲ ಸಮಸ್ಯೆ ನಿವಾರಿಸಿದರು.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ದೇಶದ ಅಮೂಲ್ಯ ಆಸ್ತಿ ಎಂದು ಭಾವಿಸಿ ನೆಹರು ಮಕ್ಕಳನ್ನು ಪ್ರೀತಿಸುತ್ತಿದ್ದರು ಎಂದು ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲೆ ಎಂ.ಶಾಂತಿ ಹೇಳಿದರು.

ಮಾದಾಪುರ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಜರುಗಿದ ಮಕ್ಕಳ ದಿನಾಚರಣೆಯಲ್ಲಿ ಮಾತನಾಡಿ, ಮಕ್ಕಳನ್ನು ಪ್ರೀತಿಸುತ್ತಿದ್ದ ನೆಹರು ಅವರನ್ನು ಮಕ್ಕಳು ಸೇರಿದಂತೆ ನಾಡಿನ ಜನತೆ ಚಾಚಾ ಎಂದು ಕರೆಯುತ್ತಿದ್ದರು. ಮಕ್ಕಳಲ್ಲಿ ಸರ್ವಸ್ವ ಅಡಗಿದೆ. ಜೋಪಾನ ಮಾಡಿದರೆ ಸುಭದ್ರ ನಾಡು-ನಮ್ಮ ದೇಶವಾಗಲಿದೆ ಎನ್ನುತ್ತಿದ್ದರು ಎಂದರು.

ಸ್ವತಂತ್ರ ಪೂರ್ವದಲ್ಲಿಯೇ ದೇಶದ ಭವಿಷ್ಯ ಮಕ್ಕಳಲ್ಲಿ ಇದೇ ಎಂದು ಕಂಡವರು ನೆಹರು. ಅವರಿಗೆ ಮಕ್ಕಳನ್ನು ಕಂಡರೆ ಬಲು ಪ್ರೀತಿ. ಮಕ್ಕಳೊಂದಿಗೆ ಮಕ್ಕಳಾಗಿ ಬದುಕಿದವರು ನೆಹರು. ಭಾರತದ ಪ್ರಥಮ ಪ್ರಧಾನಿಯಾಗಿ ದೇಶದ ಜಟಿಲ ಸಮಸ್ಯೆ ನಿವಾರಿಸಿದರು. ನಾಡಿನ ಐಕ್ಯತೆ, ಒಗ್ಗಟ್ಟು ಮೂಡಲು ಮಕ್ಕಳಿಗೆ ಶಿಕ್ಷಣದ ಅರಿವು ಬಲು ಅವಶ್ಯವಿದೆ ಎಂದು ನೆಹರು ಪ್ರಾಣಕ್ಕಿಂತ ಮಕ್ಕಳನ್ನು ಹೆಚ್ಚು ಪ್ರೀತಿಸುತ್ತಿದ್ದರು ಎಂದರು.

ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನೀಯರಲ್ಲಿ ನೆಹರು ಒಬ್ಬರು. ಶ್ರೀಮಂತ ಕುಟುಂಬದಲ್ಲಿ ಹುಟ್ಟಿದರೂ ಎಂದು ಅಹಂ ಪ್ರದರ್ಶನ ನೀಡದೆ ಬದುಕು ಸಾಗಿಸಿದ ಸರಳ ವ್ಯಕ್ತಿತ್ವ ಇವರದಾಗಿದೆ. ಮಕ್ಕಳನ್ನು ಸ್ವಚ್ಛಂದ, ಸಂಸ್ಕಾರಯುತ ಮಕ್ಕಳನ್ನಾಗಿ ರೂಪಿಸಿದರೆ ಮಾತ್ರ ಸದೃಢ ದೇಶ ನಮ್ಮದಾಗಲು ಸಾಧ್ಯ ಎಂದು ಭವಿಷ್ಯದ ಮಕ್ಕಳಲ್ಲಿ ಅದಮ್ಯ ಪ್ರೀತಿಯನ್ನು ನೆಹರು ಹೊಂದಿದ್ದರು. ಇವರ ಹುಟ್ಟಿದ ದಿನವನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸಲು ಮುಂದಾದ ಇವರ ವ್ಯಕ್ತಿತ್ವ ಮಕ್ಕಳ ಮೇಲೆ ಇಟ್ಟಿದ್ದ ಮಮತೆಗೆ ಸಾಕ್ಷಿಯಾಗಿದೆ ಎಂದು ನುಡಿದರು.

ಮಕ್ಕಳಿಗೆ ವಿವಿಧ ಸ್ಪರ್ಧೆ ಹಮ್ಮಿಕೊಂಡು ಬಹುಮಾನ ವಿತರಿಸಲಾಯಿತು. ನೆಹರು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಸ್ಮರಿಸಲಾಯಿತು. ರಾಘವೇಂದ್ರ, ಸಂಜೀವ್, ಧರಣೇಶ್, ಸೌಮ್ಯ, ಜಯಲಕ್ಷ್ಮೀ, ಸೌಮ್ಯ, ವೀಣಾ, ಲೀಲಾವತಿ, ಭೂಮಿಕಾ ಭಾಗವಹಿಸಿದ್ದರು.ಹಿಂದುಳಿದ ಶೋಷಿತ ವರ್ಗಗಳ ಸಂಘಟನೆಗೆ ಹೆಚ್ಚಿನ ಆದ್ಯತೆ: ಸಾವಿತ್ರಮ್ಮನಾಗಮಂಗಲ:ಹಿಂದುಳಿದ ಶೋಷಿತ ವರ್ಗಗಳ ಸಂಘಟನೆ ಹೆಚ್ಚಿನ ಆದ್ಯತೆ ನೀಡುವ ಮುಖಾಂತರ ಅವರ ಶ್ರೇಯೋಭಿವೃದ್ಧಿಗೆ ಹೆಚ್ಚಿನ ಆಸಕ್ತಿ ನೀಡುವುದಾಗಿ ತಾಲೂಕು ಅಹಿಂದ ಘಟಕದ ನೂತನ ಅಧ್ಯಕ್ಷೆ ಸಾವಿತ್ರಮ್ಮ ತಿಳಿಸಿದರು.

ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ತಾಲೂಕು ಅಹಿಂದ ಸಮಿತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯದಲ್ಲಿ ಅಹಿಂದ ಬಲವರ್ಧನೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಸಂಘಟನಾತ್ಮಕ ಬೆಳವಣಿಗೆಗೆ ಹೆಚ್ಚಿನ ಆದ್ಯತೆ ನೀಡುವ ಮುಖಾಂತರ ತಾಲೂಕು ಅಧ್ಯಕ್ಷರಾಗಿ ನೇಮಕ ಮಾಡಿದ್ದು, ಸಂಘಟನಾತ್ಮಕ ಬೆಳವಣಿಗೆಗೆ ಆದ್ಯತೆ ಕೊಡುವುದಾಗಿ ಹೇಳಿದರು.ಕಾರ್ಯದರ್ಶಿ ಎನ್.ಆರ್.ಚಂದ್ರಶೇಖರ್ ಮಾತನಾಡಿ, ಅಹಿಂದ ಮತ ಬ್ಯಾಂಕ್ ಮಾಡಿಕೊಳ್ಳದೆ ಇವರ ಸಂಘಟನಾತ್ಮಕ ಬೆಳವಣಿಗೆಗೆ ಸಮಬಾಳು, ಸಮಪಾಲು ಸಮಾನತೆಗೆ ಅಧಿಕಾರಸ್ತರು ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.

ಈ ವೇಳೆ ನೂತನ ಪದಾಧಿಕಾರಿಗಳಾದ ತಾಲೂಕು ಉಪಾಧ್ಯಕ್ಷ ದೇವಲಾಪುರ ಶಾಂತಮ್ಮ. ನಾಗಮಂಗಲ ನೂರ್ ಮೊಹಮ್ಮದ್. ತುಪ್ಪದ ಮಡು ರಾಣಿ ಉಪಸ್ಥಿತರಿದ್ದರು.