ನೆಲಜಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ರು. ೩೬.೨೯ ಲಕ್ಷ ಲಾಭ

| Published : Sep 04 2024, 01:49 AM IST

ನೆಲಜಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ರು. ೩೬.೨೯ ಲಕ್ಷ ಲಾಭ
Share this Article
  • FB
  • TW
  • Linkdin
  • Email

ಸಾರಾಂಶ

ನೆಲಜಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ೨೦೨೩ -೨೪ ಸಾಲಿನಲ್ಲಿ ೩೬.೨೯ ಲಕ್ಷ ರು. ಲಾಭ ಗಳಿಸಿದೆ . ಸದಸ್ಯರಿಗೆ ಶೇ.12 ಡಿವಿಡೆಂಡ್‌ ನೀಡಲು ಸಂಘ ನಿರ್ಧರಿಸಿದೆ.

ಕನ್ನಡಪ್ರಭ ವಾರ್ತೆ ನಾಪೋಕ್ಲು

ನೆಲಜಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ೨೦೨೩ -೨೪ ಸಾಲಿನಲ್ಲಿ ೩೬.೨೯ ಲಕ್ಷ ರು. ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಮಾಳೆಯಂಡ ಎಂ. ಅಪ್ಪಚ್ಚ ತಿಳಿಸಿದ್ದಾರೆ. ಸಂಘದ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಸದಸ್ಯರಿಗೆ ಶೇ.12 ಡಿವಿಡೆಂಡ್‌ ನೀಡಲು ನಿರ್ಧರಿಸಲಾಯಿತು.

ಸಂಘದಲ್ಲಿ ಗ್ರಾಹಕರಿಗೆ ಗೊಬ್ಬರ ಸೌಲಭ್ಯ ಹಾಗೂ ಕೃಷಿ ಉತ್ಪನ್ನಕ್ಕೆ ಬೇಕಾದ ಸಾಮಾಗ್ರಿಗಳು ದೊರೆಯುತ್ತವೆ, ವಾಣಿಜ್ಯ ಮಳಿಗೆಗಳು ಬಾಡಿಗೆಗೆ ಲಭ್ಯವಿರುತ್ತದೆ ಎಂದು ಮಾಹಿತಿ ನೀಡಿದರು.

ಸಂಘದ ಸದಸ್ಯರ ಮಕ್ಕಳ ಪೈಕಿ 10ನೇ, ದ್ವಿತೀಯ ಪಿಯುಸಿ ಹಾಗೂ ಅಂತಿಮ ಪದವಿ, ಸ್ನಾತಕೋತ್ತರ ಪದವಿ, ವೈದ್ಯಕೀಯ, ಎಂಜಿನಿಯರಿಂಗ್‌, ದಂತ ವೈದ್ಯಕೀಯ ಕೋರ್ಸುಗಳ ಅಂತಿಮ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿ ತೇರ್ಗಡೆಯಾದ ಮೊದಲ ಮೂರು ವಿದ್ಯಾರ್ಥಿಗಳಿಗೆ ಬಹುಮಾನ ನೀಡುತ್ತೇವೆ. ಸೆ.15ರೊಳಗೆ ಸಾಧಕ ವಿದ್ಯಾರ್ಥಿಗಳ ಅಂಕಪಟ್ಟಿ ಸಂಘಕ್ಕೆ ತಲುಪಿಸಬೇಕು ಎಂದು ತಿಳಿಸಿದರು.

ಸೆ.22ರಂದು ಸಂಘದ ಸಭಾಂಗಣದಲ್ಲಿ ಸಂಘದ ಮಹಾಸಭೆ ನಡೆಯಲಿದೆ ಎಂದರು.

ಉಪಾಧ್ಯಕ್ಷ ಚೀಯಕಪೂವಂಡ ವಿ. ರೀನಾ, ನಿರ್ದೇಶಕರಾದ ಬದ್ದಂಜೆಟ್ಟಿರ ಎ ತಿಮ್ಮಯ್ಯ , ಎ ಜಿ ಟಿಂಶ, ಚೀಯಕಪೂವಂಡ ಡಿ ನಾಚಪ್ಪ, ಕರವಂಡ ಜಿ ಅಪ್ಪಣ್ಣ, ಮಚ್ಚುರ ಎಂ ರವೀಂದ್ರ, ಮಣವಟ್ಟೀರ ಬಿ ದೀಪಕ್ ಪೊನ್ನಪ್ಪ, ಮಣವಟ್ಟೀರ ಕೆ ದಯಾ ಚಿಣ್ಣಪ್ಪ, ಚೀಯಕಪೂವಂಡ ಎ ಸುನಿಲ್, ಅಪ್ಪುಮಣಿಯಂಡ ಬಿ ಕಾವೇರಮ್ಮ, ಪಿ ಎಂ ವಿಜು ಹಾಗು ಸಂಘದ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್, ಕೊಡಗು ಡಿಸಿಸಿ ಬ್ಯಾಂಕ್‌ ಮೇಲ್ವಿಚಾರಕ ಎಂ.ಬಿ.ಅಯ್ಯಪ್ಪ ಹಾಗೂ ಸಂಘದಸಿಬ್ಬಂದಿ ಹಾಜರಿದ್ದರು.