ನೆಲಮಂಗಲ ತಾಲೂಕು ಬಿಜೆಪಿ ನಾಯಕರಿಂದ ಧರ್ಮಸ್ಥಳ ಚಲೋ

| Published : Sep 01 2025, 01:03 AM IST

ನೆಲಮಂಗಲ ತಾಲೂಕು ಬಿಜೆಪಿ ನಾಯಕರಿಂದ ಧರ್ಮಸ್ಥಳ ಚಲೋ
Share this Article
  • FB
  • TW
  • Linkdin
  • Email

ಸಾರಾಂಶ

ನೆಲಮಂಗಲ: ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುತ್ತಿರುವುದನ್ನು ಖಂಡಿಸಿ ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ್‌ ಚೌಧರಿ ನೇತೃತ್ವದಲ್ಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸೋಲೂರು ಬಳಿ ಧರ್ಮಸ್ಥಳ ಚಲೋಗೆ ಚಾಲನೆ ನೀಡಿದರು.

ನೆಲಮಂಗಲ: ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುತ್ತಿರುವುದನ್ನು ಖಂಡಿಸಿ ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ್‌ ಚೌಧರಿ ನೇತೃತ್ವದಲ್ಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸೋಲೂರು ಬಳಿ ಧರ್ಮಸ್ಥಳ ಚಲೋಗೆ ಚಾಲನೆ ನೀಡಿದರು.ಸೋಲೂರು ಗ್ರಾಮದ ಶ್ರೀ ಕೃಷ್ಣ ನೈವೇದ್ಯ ಹೋಟೆಲ್ ಮುಂಭಾಗದಲ್ಲಿ ಧರ್ಮಸ್ಥಳ ಚಲೋ ಕಾರು ರ್ಯಾಲಿ ಸಮಾವೇಶಗೊಂಡು ಮುಖಂಡರು, ಕಾರ್ಯಕರ್ತರು ಪೂಜಾ ವಿಧಿ-ವಿಧಾನ ನೆರವೇರಿಸಿ 500ಕ್ಕೂ ಹೆಚ್ಚು ಕಾರುಗಳಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಧರ್ಮಸ್ಥಳಕ್ಕೆ ತೆರಳಿದರು.

ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ್‌ ಚೌಧರಿ ಮಾತನಾಡಿ, ಕಳೆದ ಒಂದೂವರೆ ತಿಂಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಕೆಲ ಕಿಡಿಗೇಡಿಗಳು ಅಪಪ್ರಚಾರ ಮಾಡುತ್ತಿರುವುದು ಬೇಸರ ಸಂಗತಿ. ಧರ್ಮಸ್ಥಳ ಅಪಪ್ರಚಾರ ಸಾಕಷ್ಟು ಭಕ್ತರಿಗೆ ನೋವುಂಟು ಮಾಡಿದೆ. ಆದ್ದರಿಂದ ಎನ್ಐಎ ತನಿಖೆ ನಡೆಸಿ ಸತ್ಯಾಸತ್ಯವನ್ನು ನಾಡಿನ ಜನತೆಗೆ ತಿಳಿಸುವ ಕೆಲಸ ರಾಜ್ಯ ಸರ್ಕಾರ ಮಾಡಬೇಕು ಎಂದರು.

ಮಾಜಿ ಶಾಸಕ ಎಂ.ವಿ.ನಾಗರಾಜು ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳದ ಬಗ್ಗೆ ನಾಡಿನ ಜನತೆ ವಿಶೇಷ ಗೌರವ ಇಟ್ಟುಕೊಂಡಿದ್ದಾರೆ. ಕೆಲವರು ಹಿಂದೂಗಳ ಭಾವನೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದು ಶ್ರೀ ಮಂಜುನಾಥಸ್ವಾಮಿಯೇ ತಕ್ಕಪಾಠ ಕಲಿಸುತ್ತಾರೆ ಎಂದರು.

ಮುಖಂಡ ಸಪ್ತಗಿರಿ ಶಂಕರನಾಯಕ್, ಬಿಜೆಪಿ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ, ಜಿಲ್ಲಾ ಉಪಾಧ್ಯಕ್ಷ ಎಸ್.ಮಲ್ಲಯ್ಯ, ರಾಹುಲ್‌ ಗೌಡ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಬೃಂಗೇಶ್, ತಾಲೂಕು ಪ್ರಧಾನ ಕಾರ್ಯದರ್ಶಿ ಸತೀಶ್, ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾಸುರೇಶ್, ಎಸ್ಸಿ ಮೋರ್ಚಾ ತಾಲೂಕು ಅಧ್ಯಕ್ಷ ಉಮೇಶ್, ಎಸ್ಟಿಮೋರ್ಚಾ ಅಧ್ಯಕ್ಷ ಕೆಂಪರಾಮಯ್ಯ, ಒಬಿಸಿ ಮೋರ್ಚಾ ಅಧ್ಯಕ್ಷ ಲೋಕೇಶ್, ಯುವ ಮೋರ್ಚಾ ಅಧ್ಯಕ್ಷ ಮಹೇಶ್, ನಗರಸಭೆ ಹೆಚ್ಚುವರಿ ಸದಸ್ಯ ಮುನಿರಾಜು, ಕೃಪಾನಂದ್, ಅಂಜನಮೂರ್ತಿ, ರಾಮಮೂರ್ತಿ, ಪುರಸಭೆ ಮಾಜಿ ಅಧ್ಯಕ್ಷ ರವಿ, ಮುಖಂಡ ಅಶ್ವತ್ಥ್, ಉಮೇಶ್, ರಮೇಶ್, ಅರುಣ್‌ಗೌಡ, ಸಿದ್ದರಾಜು, ಗಿರೀಶ್, ಚಂದ್ರಶೆಟ್ಟಿ, ರಾಜಮ್ಮಪ್ರಕಾಶ್, ವೇದಾವತಿ, ಶೀಲಾ, ಸುಮ, ಶಾಂತಕುಮಾರಿ ಮತ್ತಿತರರು ಉಪಸ್ಥಿತರಿದ್ದರು.

ಪೊಟೊ-31ಕೆ ಎನ್ಎಲ್ ಎಮ್ 1-

ನೆಲಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸೋಲೂರು ಬಳಿ ಧರ್ಮಸ್ಥಳ ಕ್ಷೇತ್ರದ ಮೇಲಿನ ಅಪಪ್ರಚಾರ ಖಂಡಿಸಿ ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ್‌ ಚೌಧರಿ ನೇತೃತ್ವದಲ್ಲಿ ಧರ್ಮಸ್ಥಳ ಚಲೋ ಕಾರು ರ್ಯಾಲಿಗೆ ಚಾಲನೆ ನೀಡಲಾಯಿತು.