ಸಾರಾಂಶ
ಐಗೂರು ಗ್ರಾಮದ ಶ್ರೀ ಆದಿಶಕ್ತಿ ಮಹಾತಾಯಿ ಹಾಗೂ ಪಾಷಾಣಮೂರ್ತಿ ಅಮ್ಮನವರ ದೇವಾಲಯದಲ್ಲಿ ನೇಮೋತ್ಸವ ನಡೆಯಿತು.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ತಾಲೂಕಿನ ಐಗೂರು ಗ್ರಾಮದ ಶ್ರೀ ಆದಿಶಕ್ತಿ ಮಹಾತಾಯಿ ಹಾಗೂ ಪಾಷಾಣಮೂರ್ತಿ ಅಮ್ಮನವರ ದೇವಾಲಯದಲ್ಲಿ ಈಚೆಗೆ 49ನೇ ವರ್ಷದ ನೇಮೋತ್ಸವ 6 ದಿನಗಳ ಕಾಲ ನಡೆಯಿತು.ಗುರುವಾರ ಬೆಳಗ್ಗೆ ಶ್ರೀ ಗಣಪತಿ ಹೋಮ, ಕಳಸದ ಮೆರವಣಿಗೆ, ಬೆಳಗ್ಗೆ 10ಕ್ಕೆ ಮಹಾಪೂಜೆ ನಡೆಯಿತು. 11.30ಕ್ಕೆ ಆಧಿಶಕ್ತಿ ಮಹಾತಾಯಿ ದರ್ಶನ ನಡೆಯಿತು. ಪಾಷಾಣಮೂರ್ತಿ ಮತ್ತು ಕಲ್ಲಡ ದೈವಗಳ ಕೋಲ, ಕುಪ್ಪೆ ಪಂಜುರ್ಲಿ ದೈವದ ಕೋಲ, ಕೊರತಿ ದೈವದ ಕೋಲ, ಕೊರಗಜ್ಜ ದೈವದ ಕೋಲ, ಧರ್ಮ ದೈವದ ಕೋಲ, ನಂತರ ಬಂಡಾರ ನಿರ್ಗಮನ ಮಹಾಪೂಜೆ ನಡೆಯಿತು.ಈ ಸಂದರ್ಭ ದೇವಾಲಯದ ಪದಾಧಿಕಾರಿಗಳಾದ ಆನಂದ ಪೂಜಾರಿ, ಧರ್ಮಪ್ಪ, ಸಂದೇಶ್ ಕುಮಾರ್, ಇಂದ್ರೇಶ್, ಸೀನ ಇದ್ದರು.