ಸಾರಾಂಶ
ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಉಪಯೋಗವನ್ನು ಪಡೆದುಕೊಂಡು ಹೆಚ್ಚಿನ ಜ್ಞಾನವನ್ನು ಪಡೆದುಕೊಳ್ಳಬೇಕು.
ಭಟ್ಕಳ: ಇಲ್ಲಿನ ಶ್ರೀಗುರು ಸುಧೀಂದ್ರ ಕಾಲೇಜಿನಲ್ಲಿ ನೆದರ್ಲ್ಯಾಂಡ್''''''''ನ ಮ್ಯಾಚ್ ಸ್ಟ್ರೀಚ್ ವಿಶ್ವವಿದ್ಯಾಲಯದ ಸಂಪನ್ಮೂಲ ವಿದ್ಯಾರ್ಥಿಗಳ ಸಮಾಗಮ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನೈಜೀರಿಯಾ ಮೂಲದ ಅಮೀರಾ ಮುಸ್ತಫಾ ಹಾಗೂ ಲಕ್ಸಂಬರ್ಗ್ ಮೂಲದ ರೀನಾ ಮರಿನಾ ನೆದರ್ಲ್ಯಾಂಡ್''''''''ನ ಶಿಕ್ಷಣ ಕ್ರಮ ಹಾಗೂ ವಿಶ್ವವಿದ್ಯಾಲಯದಲ್ಲಿ ಇರುವಂತಹ ವಿವಿಧ ಅವಕಾಶಗಳ ಬಗ್ಗೆ ವಿಸ್ತೃತವಾಗಿ ವಿವರಿಸಿದರು.
ನೆದರ್ಲ್ಯಾಂಡ್''''''''ನಲ್ಲಿ ಅಧ್ಯಯನ ಮಾಡುತ್ತಿರುವ ಭಾರತದ ಡಾ. ಪ್ರಿನ್ಸಿಟಾ ಭಾರತೀಯ ಶಿಕ್ಷಣ ಪದ್ಧತಿ ಹಾಗೂ ನೆದರ್ಲ್ಯಾಂಡ್''''''''ನ ಶಿಕ್ಷಣ ಪದ್ಧತಿಯ ಸಾಮ್ಯತೆ-ವ್ಯತ್ಯಾಸ ತಿಳಿಸುತ್ತಾ ವಿವಿಧ ಅವಕಾಶಗಳ ಬಗ್ಗೆ ವಿಸ್ತೃತವಾಗಿ ಮಾಹಿತಿ ನೀಡಿದರು.ಭಟ್ಕಳ ಎಜುಕೇಶನ್ ಟ್ರಸ್ಟಿನ ಅಧ್ಯಕ್ಷ ಡಾ.ಸುರೇಶ್ ನಾಯಕ ಮಾತನಾಡಿ, ಇದೊಂದು ವಿಶೇಷ ಹಾಗೂ ಅಪರೂಪದ ಕಾರ್ಯಕ್ರಮವಾಗಿದೆ. ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಉಪಯೋಗವನ್ನು ಪಡೆದುಕೊಂಡು ಹೆಚ್ಚಿನ ಜ್ಞಾನವನ್ನು ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಶ್ರೀನಾಥ್ ಪೈ ಸ್ವಾಗತಿಸಿದರು. ಟ್ರಸ್ಟಿ ನಾಗೇಶ್ ಭಟ್ಟ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮದ ಮಹತ್ವ ತಿಳಿಸಿದರು. ಕಾಲೇಜಿನ ವಿದ್ಯಾರ್ಥಿಗಳು ನಮ್ಮ ದೇಶ, ರಾಜ್ಯ, ಕರಾವಳಿ ಕರ್ನಾಟಕದ ಬಗ್ಗೆ, "ಸಿಲಿಕಾನ್ ಬ್ಲೂ ಆಫ್ ಇಂಡಿಯಾ " ಮಂಗಳೂರು ಕ್ಲಸ್ಟರ್ ನ ಉತ್ತರ ಕನ್ನಡ ಜಿಲ್ಲೆಯ ಶ್ರೀ ಗುರು ಸುಧೀಂದ್ರ ಕಾಲೇಜಿನ ಹಿನ್ನೋಟ ಹಾಗೂ ಸಾಧಿಸಿದ ಮೈಲುಗಲ್ಲಿನ ಕುರಿತು ವಿಶೇಷ ಪ್ರಸ್ತುತಿಯನ್ನು ಸಾದರ ಪಡಿಸಿದರು.ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದು, ಕಾಲೇಜಿನ ಹಾಗೂ
ನೆದರ್ಲ್ಯಾಂಡ್ ಮ್ಯಾಚ್ ಸ್ಟ್ರೀಚ್ ವಿಶ್ವವಿದ್ಯಾಲಯದ ಪರಸ್ಪರ ಜ್ಞಾನ ಮಂಥನಕ್ಕೆ ಕಾರಣವಾಗಿ, ಭವಿಷ್ಯದಲ್ಲಿ ಹೊಸ ಅವಕಾಶಗಳನ್ನು ಸಾಕ್ಷೀಕರಿಸಿದ್ದು ವಿಶೇಷವಾಗಿತ್ತು.ಭಟ್ಕಳದ ಗುರು ಸುಧೀಂದ್ರ ಕಾಲೇಜಿನಲ್ಲಿ ನೆದರ್ಲ್ಯಾಂಡ್''''''''ನ ಮ್ಯಾಚ್ ಸ್ಟ್ರೀಚ್ ವಿಶ್ವವಿದ್ಯಾಲಯದ ಸಂಪನ್ಮೂಲ ವಿದ್ಯಾರ್ಥಿಗಳ ಸಮಾಗಮ ಕಾರ್ಯಕ್ರಮ ನಡೆಯಿತು.