ಹೆಬ್ಬಸಾಲೆ ಗ್ರಾಪಂ ಅಧ್ಯಕ್ಷರಾಗಿ ನೇತ್ರಾವತಿ ಅವಿರೋಧ ಆಯ್ಕೆ

| Published : Nov 06 2024, 11:58 PM IST

ಹೆಬ್ಬಸಾಲೆ ಗ್ರಾಪಂ ಅಧ್ಯಕ್ಷರಾಗಿ ನೇತ್ರಾವತಿ ಅವಿರೋಧ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಹೆಬ್ಬಸಾಲೆ ಗ್ರಾಮ ಪಂಚಾಯಿತಿ ನೂತನ ಅಧಕ್ಷರಾಗಿ ಬಿಜೆಪಿ ಬೆಂಬಲಿತ ನೇತ್ರಾವತಿ ಮೇಘರಾಜ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಒಟ್ಟು ೧೪ ಸದಸ್ಯ ಬಲದ ಹೆಬ್ಬಸಾಲೆ ಗ್ರಾಪಂನಲ್ಲಿ ಬಿಜೆಪಿ ಬೆಂಬಲಿತರು ಹೆಚ್ಚಿನ ಸಂಖ್ಯೆಯಲ್ಲಿದ್ದು ಈ ಹಿಂದಿನ ಅಧ್ಯಕ್ಷರಾದ ಶಿವಕುಮಾರಿ ಆಂತರಿಕ ಒಪ್ಪಂದದಂತೆ ರಾಜೀನಾಮೆ ನೀಡಿದ್ದರಿಂದ ಮಂಗಳವಾರ ಚುನಾವಣೆ ನಡೆದು ನೇತ್ರಾವತಿ ಮೇಘರಾಜ್ ಅವಿರೋಧವಾಗಿ ಆಯ್ಕೆಯಾದರು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ತಾಲೂಕಿನ ಹೆಬ್ಬಸಾಲೆ ಗ್ರಾಮ ಪಂಚಾಯಿತಿ ನೂತನ ಅಧಕ್ಷರಾಗಿ ಬಿಜೆಪಿ ಬೆಂಬಲಿತ ನೇತ್ರಾವತಿ ಮೇಘರಾಜ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಒಟ್ಟು ೧೪ ಸದಸ್ಯ ಬಲದ ಹೆಬ್ಬಸಾಲೆ ಗ್ರಾಪಂನಲ್ಲಿ ಬಿಜೆಪಿ ಬೆಂಬಲಿತರು ಹೆಚ್ಚಿನ ಸಂಖ್ಯೆಯಲ್ಲಿದ್ದು ಈ ಹಿಂದಿನ ಅಧ್ಯಕ್ಷರಾದ ಶಿವಕುಮಾರಿ ಆಂತರಿಕ ಒಪ್ಪಂದದಂತೆ ರಾಜೀನಾಮೆ ನೀಡಿದ್ದರಿಂದ ಮಂಗಳವಾರ ಚುನಾವಣೆ ನಡೆದು ನೇತ್ರಾವತಿ ಮೇಘರಾಜ್ ಅವಿರೋಧವಾಗಿ ಆಯ್ಕೆಯಾದರು.

ಈ ಸಂರ್ಧಭದಲ್ಲಿ ಶಾಸಕ ಸಿಮೆಂಟ್ ಮಂಜು ಪತ್ನಿ ಪ್ರತಿಭಾ ಮಂಜುನಾಥ್ ಮಾತನಾಡಿ, ಹೆಬ್ಬಸಾಲೆ ಗ್ರಾ.ಪಂ ನೂತನ ಅಧಕ್ಷರಾಗಿ ಬಿಜೆಪಿ ಬೆಂಬಲಿತ ನೇತ್ರಾವತಿ ಮೇಘರಾಜ್ ಅವಿರೋಧವಾಗಿ ಆಯ್ಕೆಯಾಗಿದ್ದು ಅವರಿಗೆ ಪಕ್ಷದ ವತಿಯಿಂದ ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ. ಈ ಹಿಂದಿನ ಅಧಕ್ಷರಾದ ಶಿವಕುಮಾರಿಯವರು ಆಂತರಿಕ ಒಪ್ಪಂದದಂತೆ ರಾಜೀನಾಮೆ ನೀಡಿದ್ದರಿಂದ ಇಂದು ಸುಗಮವಾಗಿ ನೂತನ ಅಧಕ್ಷರ ಆಯ್ಕೆ ನಡೆದಿದೆ. ಈ ಹಿನ್ನೆಲೆ ಅವರಿಗೂ ಸಹ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ನೂತನವಾಗಿ ಅಧಕ್ಷರಾಗಿ ಆಯ್ಕೆಯಾದ ನೇತ್ರಾವತಿ ಮಂಜುನಾಥ್ ಮಾತನಾಡಿ, ಶಾಸಕ ಸಿಮೆಂಟ್ ಮಂಜುನಾಥ್‌ರವರ ಮಾರ್ಗದರ್ಶನದಲ್ಲಿ ಹೆಬ್ಬಸಾಲೆ ಗ್ರಾಪಂಯನ್ನು ಮಾದರಿ ಗ್ರಾ.ಪಂಯನ್ನಾಗಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಗ್ರಾಪಂ ಸದಸ್ಯರುಗಳಾದ ದಯಾನಂದ್, ಮಹೇಶ್, ರಘುನಂದನ್, ಕಾರ್ತಿಕ್, ಮಂಜುನಾಥ್, ಭಾಗ್ಯ. ಮಣಿಕುಮಾರಿ, ರೇಣುಕಾ, ಜ್ಯೋತಿ, ನಾಗೇಶ್, ಬಿಜೆಪಿ ಪ್ರಧಾನ ಕಾರ್ಯದರ್ಶಿಯರಾದ ಮಧು ಬೊಮ್ಮನಕೆರೆ, ಅಗ್ನಿ ಸೋಮಶೇಖರ್, ಪಕ್ಷದ ಮುಖಂಡರಾದ ರಾಜ್‌ಕುಮಾರ್, ಯೋಗೇಶ್, ಮೇಘರಾಜ್, ಜಯಶಂಕರ್, ಸಚ್ಚಿನ್, ಲೋಕೇಶ್, ಇಂದನ್, ಗುರುಪ್ರಶಾಂತ್, ಭೂಮೇಶ್, ನವೀನ್ ಶೆಟ್ಟಿ, ಇತರರು ಹಾಜರಿದ್ದರು.ಫೋಟೋ: ಸಕಲೇಶಪುರದ ಹೆಬ್ಬಸಾಲೆ ಗ್ರಾಪಂ ಅಧಕ್ಷರಾಗಿ ಬಿಜೆಪಿ ಬೆಂಬಲಿತ ನೇತ್ರಾವತಿ ಮೇಘರಾಜ್ ಆಯ್ಕೆಯಾದ ಹಿನ್ನೆಲೆ ಬಿಜೆಪಿ ಮುಖಂಡರು ಅಭಿನಂದಿಸಿದರು.