ಸಾರಾಂಶ
ಚಿಕ್ಕ ಹಳ್ಳಿ, ಕಡಿಮೆ ಜನಸಂಖ್ಯೆ ಹೊಂದಿದ್ದರೂ ಸಹ ಗಣಪತಿ ಪೆಂಡಾಲ್ ಎಂಬ ಭವ್ಯ ಕಟ್ಟಡ ತಲೆ ಎತ್ತಿರುವುದು ಪುಟ್ಟ ಗ್ರಾಮದ ಸಾಧನೆಯಾಗಿದೆ ಎಂದು ಶಾಸಕ ಹುಲ್ಲಳ್ಳಿ ಸುರೇಶ್ ಹೇಳಿದರು. ತಾಲೂಕಿನ ಅರೇಹಳ್ಳಿ ಹೋಬಳಿಯ ತುಂಬದೇವನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗುಜ್ಜನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಗಣಪತಿ ಪೆಂಡಾಲ್ ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಸ್ಕಾರ, ಸಹಬಾಳ್ವೆ ಹಾಗೂ ಸಹಬಾಳ್ವೆಯ ಪ್ರತೀಕವಾಗಿ ಪೆಂಡಾಲ್ ನಿರ್ಮಿಸಿರುವುದು ಶ್ಲಾಘನೀಯ. ಇದೇ ರೀತಿ ಗ್ರಾಮವು ವಿನಾಯಕನ ಅನುಗ್ರಹದಿಂದ ಸರ್ವಾಂಗೀಣ ಅಭಿವೃದ್ಧಿ ಸಾಧಿಸಲಿ ಎಂದು ಹಾರೈಸಿದರು.
ಕನ್ನಡಪ್ರಭ ವಾರ್ತೆ ಅರೇಹಳ್ಳಿಚಿಕ್ಕ ಹಳ್ಳಿ, ಕಡಿಮೆ ಜನಸಂಖ್ಯೆ ಹೊಂದಿದ್ದರೂ ಸಹ ಗಣಪತಿ ಪೆಂಡಾಲ್ ಎಂಬ ಭವ್ಯ ಕಟ್ಟಡ ತಲೆ ಎತ್ತಿರುವುದು ಪುಟ್ಟ ಗ್ರಾಮದ ಸಾಧನೆಯಾಗಿದೆ ಎಂದು ಶಾಸಕ ಹುಲ್ಲಳ್ಳಿ ಸುರೇಶ್ ಹೇಳಿದರು.
ತಾಲೂಕಿನ ಅರೇಹಳ್ಳಿ ಹೋಬಳಿಯ ತುಂಬದೇವನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗುಜ್ಜನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಗಣಪತಿ ಪೆಂಡಾಲ್ ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಸ್ಕಾರ, ಸಹಬಾಳ್ವೆ ಹಾಗೂ ಸಹಬಾಳ್ವೆಯ ಪ್ರತೀಕವಾಗಿ ಪೆಂಡಾಲ್ ನಿರ್ಮಿಸಿರುವುದು ಶ್ಲಾಘನೀಯ. ಇದೇ ರೀತಿ ಗ್ರಾಮವು ವಿನಾಯಕನ ಅನುಗ್ರಹದಿಂದ ಸರ್ವಾಂಗೀಣ ಅಭಿವೃದ್ಧಿ ಸಾಧಿಸಲಿ ಎಂದು ಹಾರೈಸಿದರು.ಗ್ರಾಮದ ಹಿರಿಯ ಮುಖಂಡ ಯು.ಪಿ. ಮಲ್ಲೇಶ್ ಮಾತನಾಡುತ್ತಾ ದಾನಿಗಳು, ಗ್ರಾಮ ಪಂಚಾಯ್ತಿಯ ಅಲ್ಪ ಅನುದಾನ, ಆನೆ ಹಾವಳಿ ಹಾಗೂ ಹವಾಮಾನ ವೈಪರೀತ್ಯದಿಂದ ಅನುಭವಿಸುತ್ತಿರುವ ನಷ್ಟದ ನಡುವೆಯೂ ಗ್ರಾಮಸ್ಥರು ಕಷ್ಟಪಟ್ಟು ನೀಡಿದ ಹಣಕಾಸಿನ ನೆರವು ಇವೆಲ್ಲವುಗಳ ಪರಿಣಾಮದಿಂದಾಗಿ ಅಂದಾಜು ೧೪ ಲಕ್ಷ ರು. ವೆಚ್ಚದಲ್ಲಿ ಗಣಪತಿ ಪೆಂಡಾಲ್ ಇಂದು ನಿರ್ಮಾಣವಾಗಿದೆ ಎಂದರು.
ಈ ವೇಳೆ ಗ್ರಾಪಂ ಅಧ್ಯಕ್ಷ ಯೋಗೇಶ್, ವಿದ್ಯಾ ಗಣಪತಿ ಸೇವಾ ಸಮಿತಿ ಅಧ್ಯಕ್ಷ ಶೇಖರ್ ಪೂಜಾರಿ, ಮುಖಂಡರಾದ ಶಿವಾನಂದ, ಎಚ್.ಡಿ ತುಳಸಿದಾಸ್, ಅಮಿತ್ ಶೆಟ್ಟಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.