ಸಾರಾಂಶ
ರಾಮನಗರ: ಅವಧಿ ಮೀರಿದ ಔಷಧಗಳನ್ನು ಜಿಲ್ಲೆಯ ಔಷಧ ಮಳಿಗೆಗಳಲ್ಲಿ ಆರಂಭವಾಗಿರುವ ನೂತನ ವೈಜ್ಞಾನಿಕ ವಿಲೇವಾರಿ ವ್ಯವಸ್ಥೆಯನ್ನು ಬಳಸಿಕೊಳ್ಳುವಂತೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತದ ಜಿಲ್ಲೆಯ ಸಹಾಯಕ ಔಷಧ ನಿಯಂತ್ರಣಾಧಿಕಾರಿ ನಮ್ರತಾ ಹಳ್ಳೂರ ಕರೆ ನೀಡಿದ್ದಾರೆ.
ನಗರದಲ್ಲಿರುವ ಸಹಾಯಕ ಔಷಧ ನಿಯಂತ್ರಕರ ಕಚೇರಿಯಲ್ಲಿ ಬೆಂಗಳೂರು ದಕ್ಷಿಣ ಔಷಧ ವ್ಯಾಪಾರಿಗಳ ಸಂಘದ ಪರ ನೂತನ ವ್ಯವಸ್ಥೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ಗ್ರಾಹಕರು ಖರೀದಿಸಿದ ಔಷಧಿಗಳು ಅವರ ಮನೆಯಲ್ಲಿ ಅವಧಿ ಮೀರಿದರೆ ಅಂತಹ ಔಷಧಗಳನ್ನು ಪರಿಸರದಲ್ಲಿ ಬಿಸಾಡದೆ ತೀರಾ ಹತ್ತಿರದ ಔಷಧ ಅಂಗಡಿಗಳ ಮೂಲಕ ವೈಜ್ಞಾನಿಕವಾಗಿ ವಿಲೇ ಮಾಡಬಹುದಾಗಿದೆ. ನೂತನ ವ್ಯವಸ್ಥೆಯ ಉಪಯೋಗವನ್ನು ನಾಗರಿಕರು ಬಳಸಿಕೊಳ್ಳಬೇಕು ಎಂದು ಹೇಳಿದರು.
ಇಡೀ ರಾಜ್ಯದಲ್ಲಿ ಇದೇ ಪ್ರಥಮ!:ಈ ನೂತನ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿದ ಬೆಂಗಳೂರು ದಕ್ಷಿಣ ಜಿಲ್ಲೆ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಎಚ್.ಮಂಜುನಾಥ್, ಅವಧಿ ಮೀರಿದ ಔಷಧಗಳನ್ನು ಬಯೋ ಮೆಡಿಕಲ್ ವೇಸ್ಟ್ (ಮ್ಯಾನೇಜ್ಮೆಂಟ್ ಮತ್ತು ಹ್ಯಾಂಡ್ಲಿಂಗ್) ರೂಲ್ಸ್ 2016 ಅಡಿಯಲ್ಲಿ ವಿಲೇ ಮಾಡಬೇಕು. ಆದರೆ, ಸೂಕ್ತ ವ್ಯವಸ್ಥೆಯ ಕೊರತೆ ಇದೆ. ಹೀಗಾಗಿ ಔಷಧ ವ್ಯಾಪಾರಿಗಳು, ಸಂಘದ ಮೂಲಕ ಮರಿಡಿ ಬಯೋ ಇಂಡಸ್ಟ್ರೀಸ್ ಪ್ರೈ.ಲಿ. ನೊಂದಿಗೆ ಒಡಂಬಡಿಕೆ ಮಾಡಿಕೊಂಡು ವಿಲೇವಾರಿ ಮಾಡುವ ಯೋಜನೆಯನ್ನು ಅಳವಡಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಇದರಿಂದ ಔಷಧಿಗಳ ಅವೈಜ್ಞಾನಿಕ ವಿಲೇವಾರಿಯಿಂದ ಪರಿಸರಕ್ಕೆ ಆಗುವ ಹಾನಿಯನ್ನು ತಡೆಗಟ್ಟಬಹುದು. ಈ ಯೋಜನೆಯನ್ನು ರಾಜ್ಯದ ಪ್ರಪ್ರಥಮವಾಗಿ ಬೆಂಗಳೂರು ದಕ್ಷಿಣ ಜಿ ಔಷಧ ವ್ಯಾಪಾರಿಗಳ ಸಂಘ(ನೋ)ದ ಮೂಲಕ ಜಾರಿಗೆ ತರುತ್ತಿವೆ ಎಂದು ಹೇಳಿದರು.ನೀಲಿ ಬಿನ್‌ಗಳಲ್ಲಿ ಬಿಸಾಡಿ :
ಔಷಧ ಪರಿವೀಕ್ಷಕರಾದ ನೇಹಾ ಮರ್ಗಿ ಮಾತನಾಡಿ, ನಾಗರೀಕರಲ್ಲಿ ಅರಿವು ಮೂಡಿಸುವ ಔಷಧ ವ್ಯಾಪಾರಿಗಳು ರಚಿಸಿರುವ ಪೋಸ್ಟರ್ ಗಳನ್ನು ಬಿಡುಗಡೆ ಮಾಡಿ, ಸಾಂಕೇತಿಕವಾಗಿ ಕೆಲವು ವ್ಯಾಪಾರಿಗಳಿಗೆ ಅವಧಿ ಮೀರಿದ ಔಷಧಗಳ ವಿಲೇವರಿಗೆ ಬಳಸುವ ವಹಿಗಳನ್ನು ಹಾಗೂ ನೀಲಿ ಬಣ್ಣದ ಬಿನ್ಗಳನ್ನು ವಿತರಿಸಿದರು. ಸರ್ಕಾರಿ ಔಷಧ ನಿಯಂತ್ರಣಾ ಕಚೇರಿ ವತಿಯಿಂದ ಅಮಲುಕಾರಕ ಔಷಧಗಳ ದುರ್ಬಳಕೆ ತಡೆಗಟ್ಟುವ ನಿಟ್ಟಿನಲ್ಲಿ ಸೂಚನಾ ಪೋಸ್ಟರ್ ಗಳನ್ನು ಔಷಧಿ ಮಾರಾಟ ಪರವಾನಗಿದಾರರಿಗೆ ವಿತರಿಸಿದರು.ಬೆಂಗಳೂರು ದಕ್ಷಿಣ ಜಿ ಔಷಧ ವ್ಯಾಪಾರಿಗಳ ಸಂಘದ ಗೌರವಾಧ್ಯಕ್ಷ ಕೃಷ್ಣ, ಕಾರ್ಯದರ್ಶಿ ಜಿ.ರೂಪೇಶ್ ಕುಮಾರ್, ಖಜಾಂಜಿ ಆರ್.ಕೆ. ಅತಿಖ್ , ರಾಮನಗರ ತಾಲೂಕು ಔಷಧ ವ್ಯಾಪಾರಿಗಳ ಸಂಘದ ಖಜಾಂಜಿ ಸಯ್ಯದ್ ಅಕ್ರಂ, ಚನ್ನಪಟ್ಟಣ ತಾಲೂಕು ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜಯಪ್ರಕಾಶ, ಕಾರ್ಯದರ್ಶಿ ಹರೀಶ, ಖಜಾಂಚಿ ಹರಿಕೃಷ್ಣ, ಮಾಗಡಿ ತಾಲೂಕು ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ನಾಗೇಂದ್ರ, ಕಾರ್ಯದರ್ಶಿ ಶಂಕರ್, ಬಿಡದಿ ಹೋಬಳಿ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಬಿ.ರಾಜ್ ಶೇಖರ್, ಕಾರ್ಯದರ್ಶಿ ಕೆ ಮೋಹನ್ ರಾಜ, ಖಜಾಂಚಿ ಪ್ರಕಾಶ್ ನಾಗವಾರ, ಕುದೂರಿನ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ವೇಣುಗೋಪಾಲ್, ಗುಡಿಮಾರೆನಹಳ್ಳಿ ಹ್ಯಾಂಡ್ ಪೋಸ್ಟ್ ನಾರಾಯಣ, ಬಿಡದಿಯ ಜಯರಾಮ, ರಾಮನಗರದ ಮುಜಿಬಿಖಾನ, ಉಮೇಶ್ ಮತ್ತು ಜಿಯಾ ಉಪಸ್ಥಿತರಿದ್ದರು.
16ಕೆಆರ್ ಎಂಎನ್ 4.ಜೆಪಿಜಿಸರ್ಕಾರಿ ಔಷಧ ನಿಯಂತ್ರಣಾ ಕಚೇರಿಯಿಂದ ಅಮಲುಕಾರಕ ಔಷಧಗಳ ದುರ್ಬಳಕೆ ತಡೆಗಟ್ಟುವ ನಿಟ್ಟಿನಲ್ಲಿ ಸೂಚನಾ ಪೋಸ್ಟರ್‌ಗಳನ್ನು ಔಷಧಿ ಮಾರಾಟ ಪರವಾನಗಿದಾರರಿಗೆ ವಿತರಿಸಲಾಯಿತು.