ತೆಲಂಗಾಣದ ದಂಪತಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು: ಮಹಿಳೆ ಕೊಡಗು ಮೂಲದವರು

| Published : Mar 29 2024, 12:47 AM IST / Updated: Mar 29 2024, 12:48 AM IST

ತೆಲಂಗಾಣದ ದಂಪತಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು: ಮಹಿಳೆ ಕೊಡಗು ಮೂಲದವರು
Share this Article
  • FB
  • TW
  • Linkdin
  • Email

ಸಾರಾಂಶ

ಜ.4ರಂದು ಸೋಮವಾರಪೇಟೆಗೆ ಆಗಮಿಸಿದ್ದ ದಂಪತಿ, ಪಟ್ಟಣದ ಸುವೀದ್ ಲಾಡ್ಜ್‌ನಲ್ಲಿ ರೂಂ ಬಾಡಿಗೆಗೆ ಪಡೆದಿದ್ದರು. ಇನ್‌ಸ್ಪೆಕ್ಟರ್‌ ವಸಂತ್ ಕುಮಾರ್ ಮಾರ್ಗದರ್ಶನದಲ್ಲಿ ಪಿಎಸ್‍ಐ ಪ್ರಹ್ಲಾದ್ ತನಿಖೆ ಕೈಗೊಂಡಿದ್ದಾರೆ. ರಾಜು ಅವರ ಮೃತದೇಹವನ್ನು ಮಡಿಕೇರಿ ಶವಗಾರದಲ್ಲಿ ಇರಿಸಲಾಗಿದೆ.

ಕನ್ನ‍ಡಪ್ರಭ ವಾರ್ತೆ ಸೋಮವಾರಪೇಟೆ

ಪಟ್ಟಣದ ಸುವೀದ್ ಲಾಡ್ಜ್‌ನಲ್ಲಿ ಬುಧವಾರ ತೆಲಂಗಾಣದ ದಂಪತಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಮಹಿಳೆ ಕೊಡಗು ಮೂಲದವರು ಎಂಬುದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.ತಾಲೂಕಿನ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೂರ್ಲಬ್ಬಿ ಗ್ರಾಮದ ದಿ.ಪೊನ್ನಪ್ಪ ಎಂಬವರ ಪುತ್ರಿ ಆಲ್ಬರ್ಟ್ ಸ್ವಾತಿ (59) ಆತ್ಮಹತ್ಯೆ ಮಾಡಿಕೊಂಡವರು.

ಕಳೆದ ಮೂವತ್ತು ವರ್ಷಗಳ ಹಿಂದೆ ಮನೆಬಿಟ್ಟು ಆಂಧ್ರಪ್ರದೇಶಕ್ಕೆ ಹೋದವರು ವಾಪಾಸ್‌ ಬಂದಿರುವುದಿಲ್ಲ ಎಂದು ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮೃತೆಯ ಓರ್ವ ಅಣ್ಣ ಬೆಂಗಳೂರಿನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಪೊಲೀಸರಿಂದ ಮಾಹಿತಿ ಪಡೆದು ಮಡಿಕೇರಿಗೆ ಆಗಮಿಸಿ, ತಂಗಿಯ ಶವವನ್ನು ಹುಟ್ಟೂರಿಗೆ ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ನಡೆಸಿದ್ದಾರೆ.

ತೆಲಂಗಾಣ ರಾಜ್ಯದ ನಿಜಾಮಬಾದ್‍ನ ಕೊಟಾಕಲ್ಲಿ ಗಾಯಿತ್ರಿನಗರ ನಿವಾಸಿ ನಿವೃತ್ತ ಪೊಲೀಸ್ ಜಾನಕಿ ರಾಮಯ್ಯ ಎಂಬವರ ಪುತ್ರ ಮೇದವರಪ್ಪು ರಾಜು (62) ಆತ್ಮಹತ್ಯೆಗೆ ಶರಣಾದವರು.

ಮೃತ ರಾಜು ಅವರ ತಂಗಿ ಭಾರತಿ ಪೊಲೀಸ್ ಸಂಪರ್ಕಕ್ಕೆ ಸಿಕ್ಕಿದ್ದು, ಅವರ ಮಗ ಶರತ್ ಶನಿವಾರ ಕೊಡಗಿಗೆ ಬರಲಿದ್ದು, ಪೂರ್ಣ ಮಾಹಿತಿ ಸಿಗಲಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.