ಹೊಸ ವರ್ಷದ ಸ್ಮರಣಾರ್ಥವಾಗಿ ಕಾಲೇಜು ಆವರಣದಲ್ಲಿ ಗುಲಾಬಿ ಹೂವಿನ ಗಿಡಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಅರ್ಥ ತುಂಬಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಆರ್‌. ಟಿ. ದ್ಯಾವೇಗೌಡರು ಮಾತನಾಡಿ, 2026ರ ಹೊಸ ವರ್ಷ ಎಲ್ಲರಿಗೂ ಶುಭಕರವಾಗಲಿ ಎಂದು ಹಾರೈಸಿದರು. ಈ ವರ್ಷ ನಿವೃತ್ತರಾಗುವ ನೌಕರರು ತಮ್ಮ ಸೇವೆಯ ಸ್ಮರಣಾರ್ಥವಾಗಿ ಕಾಲೇಜು ಆವರಣದಲ್ಲಿ ಗಿಡಗಳನ್ನು ನೆಟ್ಟಿರುವುದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದ್ದು, ಅವರಿಗೆ ಅಭಿನಂದನೆಗಳು ಎಂದರು. ನೌಕರರು ಸಂಸ್ಥೆಯ ಅಭಿವೃದ್ಧಿಗೆ ಇನ್ನೂ ಉತ್ತಮವಾಗಿ ಸೇವೆ ಸಲ್ಲಿಸಬೇಕು ಎಂದು ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಹಾಸನ

ನಗರದ ಮಲೆನಾಡು ಎಂಜಿನಿಯರಿಂಗ್ ಕಾಲೇಜಿನ ನೌಕರರ ಕಲ್ಯಾಣ ಸಂಘದ ವತಿಯಿಂದ ಕಾಲೇಜು ಆವರಣದಲ್ಲಿ ನೂತನ ಹೊಸ ವರ್ಷದ ಆಚರಣಾ ಕಾರ್ಯಕ್ರಮವನ್ನು ಸಂಭ್ರಮದಿಂದ ಆಯೋಜಿಸಲಾಗಿತ್ತು.

ಹೊಸ ವರ್ಷದ ಸ್ಮರಣಾರ್ಥವಾಗಿ ಕಾಲೇಜು ಆವರಣದಲ್ಲಿ ಗುಲಾಬಿ ಹೂವಿನ ಗಿಡಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಅರ್ಥ ತುಂಬಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಆರ್‌. ಟಿ. ದ್ಯಾವೇಗೌಡರು ಮಾತನಾಡಿ, 2026ರ ಹೊಸ ವರ್ಷ ಎಲ್ಲರಿಗೂ ಶುಭಕರವಾಗಲಿ ಎಂದು ಹಾರೈಸಿದರು. ಈ ವರ್ಷ ನಿವೃತ್ತರಾಗುವ ನೌಕರರು ತಮ್ಮ ಸೇವೆಯ ಸ್ಮರಣಾರ್ಥವಾಗಿ ಕಾಲೇಜು ಆವರಣದಲ್ಲಿ ಗಿಡಗಳನ್ನು ನೆಟ್ಟಿರುವುದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದ್ದು, ಅವರಿಗೆ ಅಭಿನಂದನೆಗಳು ಎಂದರು. ನೌಕರರು ಸಂಸ್ಥೆಯ ಅಭಿವೃದ್ಧಿಗೆ ಇನ್ನೂ ಉತ್ತಮವಾಗಿ ಸೇವೆ ಸಲ್ಲಿಸಬೇಕು ಎಂದು ಸಲಹೆ ನೀಡಿದರು.

ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳು ಮಾತನಾಡಿ, ಹೊಸ ವರ್ಷದ ಅಂಗವಾಗಿ ನೌಕರರ ಕಲ್ಯಾಣ ಸಂಘವು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಸಂತೋಷ ತಂದಿದೆ. ಎಲ್ಲರಿಗೂ ಹೊಸ ವರ್ಷ ಶುಭ ಹಾಗೂ ಯಶಸ್ಸು ತರಲಿ ಎಂದು ಶುಭಾಶಯ ಕೋರಿದರು.ಮಲೆನಾಡು ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರು ಹಾಗೂ ನೌಕರರ ಕಲ್ಯಾಣ ಸಂಘದ ಅಧ್ಯಕ್ಷರಾದ ಡಾ. ಎಚ್.ಜೆ. ಅಮರೇಂದ್ರ ಅವರು ಮಾತನಾಡಿ, ಹೊಸ ವರ್ಷ ಎಲ್ಲರ ಬದುಕಿಗೆ ಹರುಷ ಹಾಗೂ ನೆಮ್ಮದಿ ತರಲಿ. ಹಿಂದಿನ ನೆನಪುಗಳನ್ನು ಸ್ಮರಿಸಿಕೊಂಡು ಮುಂದಿನ ದಿನಗಳಲ್ಲಿ ನಮ್ಮ ಕಾರ್ಯಗಳು ಯಶಸ್ವಿಯಾಗಲಿ ಎಂದು ಆಶಿಸಿದರು.ಕಾರ್ಯಕ್ರಮದಲ್ಲಿ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಖಜಾಂಚಿ ಎಚ್.ಡಿ. ಪಾರ್ಶನಾಥ್, ನಿರ್ದೇಶಕರಾದ ಬಿ. ಆರ್‌. ರಾಜಶೇಖರ್, ಶಾಂತಿಗ್ರಾಮ ಶಂಕರ್, ಎಚ್. ಸುರೇಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಮಲೆನಾಡು ಎಂಜಿನಿಯರಿಂಗ್ ಕಾಲೇಜು ನೌಕರರ ಕಲ್ಯಾಣ ಸಂಘದ ಕಾರ್ಯದರ್ಶಿ ಜಿ. ಪಾಂಡುಕುಮಾರ್, ಸಂಘದ ಪದಾಧಿಕಾರಿಗಳು, ನೌಕರರು ಹಾಗೂ 2026ರಲ್ಲಿ ನಿವೃತ್ತರಾಗುವ ನೌಕರರು ಹೂವಿನ ಗಿಡಗಳನ್ನು ನೆಡುವ ಮೂಲಕ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಈ ಮೂಲಕ ಪರಿಸರ ಸಂರಕ್ಷಣೆ ಮತ್ತು ಹೊಸ ವರ್ಷದ ಸಂಭ್ರಮ ಎರಡನ್ನೂ ಒಟ್ಟಾಗಿ ಆಚರಿಸಿದಂತೆ ಆಯಿತು.