ಸಾರಾಂಶ
ಮಲೆ ಮಹದೇಶ್ವರ ಬೆಟ್ಟದಲ್ಲಿ ವರ್ಷಾಚರಣೆ ಆಚರಿಸಲು ರಾಜ್ಯದ ನಾನಾ ಭಾಗಗಳಿಂದ ಅಪಾರ ಸಂಖ್ಯೆಯ ಭಕ್ತರು ಮಾದಪ್ಪನ ದರ್ಶನ ಪಡೆಯಲು ಸಾಲುಗಟ್ಟಿನಿಂತು ದೇವರ ದರ್ಶನ ಪಡೆದರು
ಕನ್ನಡಪ್ರಭ ವಾರ್ತೆ ಹನೂರು
ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ದೈವ ಸನ್ನಿಧಿಯಲ್ಲಿ 2024ರ ವರ್ಷಾಚರಣೆ ಆಚರಿಸಲು ಭಕ್ತ ಸಮೂಹ ನೆರೆದಿದೆ.ಮಲೆ ಮಹದೇಶ್ವರ ಬೆಟ್ಟದಲ್ಲಿ ವರ್ಷಾಚರಣೆ ಆಚರಿಸಲು ರಾಜ್ಯದ ನಾನಾ ಭಾಗಗಳಿಂದ ಅಪಾರ ಸಂಖ್ಯೆಯ ಭಕ್ತರು ಮಾದಪ್ಪನ ದರ್ಶನ ಪಡೆಯಲು ಸಾಲುಗಟ್ಟಿನಿಂತು ದೇವರ ದರ್ಶನ ಪಡೆದರು. ವಿಶೇಷ ಪೂಜೆ ಹಾಗೂ ಉತ್ಸವಗಳಲ್ಲಿ ಪಾಲ್ಗೊಳ್ಳುವ ಮೂಲಕ ಉಫೇ ಉಫೇ ಎಂಬ ಜೈಕಾರ ಮುಗಿಲು ಮುಟ್ಟಿತ್ತು.
ಹರಕೆ ಹೊತ್ತ ಮಲೆ ಮಹದೇಶ್ವರನ ಭಕ್ತರಿಂದ ರುದ್ರಾಕ್ಷಿ ಮಂಟಪೋತ್ಸವ ಹುಲಿವಾಹನ ಉತ್ಸವ ಮಲೆ ಮಹದೇಶ್ವರನ ಉತ್ಸವ ದೂಪದ ಸೇವೆ ಉರುಳು ಸೇವೆ ಪಂಜಿನ ಸೇವೆ ವಿವಿಧ ಉತ್ಸವಗಳು ಧಾರ್ಮಿಕವಾಗಿ ನಡೆದವು.ಮಲೆ ಮಹದೇಶ್ವರ ಬೆಟ್ಟಕ್ಕೆ ನೂತನ ವರ್ಷಾಚರಣೆಗೆ ಬರುತ್ತಿರುವ ಭಕ್ತಾದಿಗಳ ಅನುಕೂಲಕ್ಕಾಗಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಸಕಲ ಸಿದ್ಧತೆಯ ಕ್ರಮ ಕೈಗೊಂಡಿದೆ. ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯಗಳ ವ್ಯವಸ್ಥೆ ಹಾಗೂ ದಾಸೋಹ ವ್ಯವಸ್ಥೆಗೆ ಮಾದಪ್ಪನ ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ದೇವಾಲಯದ ಆಡಳಿತ ಮಂಡಳಿ, ಅಧಿಕಾರಿ ವರ್ಗದವರು ಕ್ರಮ ಕೈಗೊಂಡಿದ್ದಾರೆ.
------------31ಸಿಎಚ್‌ಎನ್55
ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ನೂತನ ವರ್ಷಾಚರಣೆಗೆ ನೆರೆದಿರುವ ಭಕ್ತ ಸಮೂಹ.----------------
31ಸಿಎಚ್‌ಎನ್54ಹನೂರು ಮಲೆ ಮಹದೇಶ್ವರ ಬೆಟ್ಟದಲ್ಲಿ ಚಿನ್ನದ ತೇರು.-----------------