ಕಸದ ರಾಶಿಯಲ್ಲಿ ನವಜಾತ ಶಿಶುವಿನ ಕಳೆಬರ ಪತ್ತೆ

| Published : Jun 02 2024, 01:47 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬಾಗಲಕೋಟೆಜಿಲ್ಲೆಯ ಮಹಲಿಂಗಪುರದಲ್ಲಿ ಬೆಳಕಿಗೆ ಬಂದಿರುವ ಗರ್ಭಪಾತ ಪ್ರಕರಣ ಮಾಸುವ ಮುನ್ನವೇ ಕಸದ ರಾಶಿಯೊಂದರಲ್ಲಿ ನವಜಾತ ಶಿಶುವಿನ ಕಳೆಬರಹವೊಂದು ಪತ್ತೆಯಾಗಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.ನಗರದ ಕಸ ವಿಲೇವಾರಿ ಘಟಕದಲ್ಲಿ ಕಸದ ರಾಶಿ ಬೇರ್ಪಡಿಸುವ ವೇಳೆ ನವಜಾತ ಶಿಶುವಿನ ಕಳೆಬರ ಪತ್ತೆಯಾಗಿದೆ. ನಗರದ ಹೊರ ವಲಯದಲ್ಲಿರುವ ಮಲ್ಲಾಪೂರ ರಸ್ತೆಯಲ್ಲಿರುವ ಕಸ ವಿಲೇವಾರಿ ಘಟಕದಲ್ಲಿ ಇದು ಪತ್ತೆಯಾಗಿದೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜಿಲ್ಲೆಯ ಮಹಲಿಂಗಪುರದಲ್ಲಿ ಬೆಳಕಿಗೆ ಬಂದಿರುವ ಗರ್ಭಪಾತ ಪ್ರಕರಣ ಮಾಸುವ ಮುನ್ನವೇ ಕಸದ ರಾಶಿಯೊಂದರಲ್ಲಿ ನವಜಾತ ಶಿಶುವಿನ ಕಳೆಬರಹವೊಂದು ಪತ್ತೆಯಾಗಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.ನಗರದ ಕಸ ವಿಲೇವಾರಿ ಘಟಕದಲ್ಲಿ ಕಸದ ರಾಶಿ ಬೇರ್ಪಡಿಸುವ ವೇಳೆ ನವಜಾತ ಶಿಶುವಿನ ಕಳೆಬರ ಪತ್ತೆಯಾಗಿದೆ. ನಗರದ ಹೊರ ವಲಯದಲ್ಲಿರುವ ಮಲ್ಲಾಪೂರ ರಸ್ತೆಯಲ್ಲಿರುವ ಕಸ ವಿಲೇವಾರಿ ಘಟಕದಲ್ಲಿ ಇದು ಪತ್ತೆಯಾಗಿದೆ. ಇದೀಗ ತಾನೆ ಜನಿಸಿದೆ ಎನ್ನಲಾದ ಗಂಡು ಶಿಶುವಿನ ಮೃತದೇಹ ಪತ್ತೆಯಾಗಿ ಆತಂಕ ಮೂಡಿಸಿದೆ. ಕಸ ವಿಲೇವಾರಿ ಘಟಕಕ್ಕೆ ಡಬ್ಬಿಯಲ್ಲಿ ಕೂಸಿನ ಕಳೆಬರ ತಂದು ದುರುಳರು ಬಿಸಾಡಿ ಹೋಗಿದ್ದಾರೆ. ಬೆಳಗ್ಗೆ ಕಸದಲ್ಲಿ ಬಿಸಾಕಿರುವ ಶಂಕೆ ವ್ಯಕ್ತವಾಗಿದ್ದು, ಮಧ್ಯಾಹ್ನ ಕಸ ಬೇರ್ಪಡಿಸುವ ವೇಳೆ ಹಸುಗೂಸಿನ ಮೃತದೇಹ ಕಂಡು ಬಂದಿದೆ. ಬಳಿಕ ವಿಷಯ ತಿಳಿದು ಸ್ಥಳಕ್ಕೆ ಬಾಗಲಕೋಟೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು.