ನವಜಾತ ಶಿಶು ಹತ್ಯೆ ಪ್ರಕರಣ: ಮೂವರ ಬಂಧನ

| Published : Nov 16 2024, 12:32 AM IST

ಸಾರಾಂಶ

ಚೆರಿಯಪರಂಬು ನಿವಾಸಿಯಾಗಿರುವ ಅಪ್ರಾಪ್ತ ಬಾಲಕಿಗೆ ಜನಿಸಿದ್ದ ಮಗು ಹುಟ್ಟಿದ ಬಳಿಕ ನಿಗೂಢವಾಗಿ ನಾಪತ್ತೆಯಾಗಿದ್ದು, ನವಜಾತ ಶಿಶು ಮೃತದೇಹ ಪತ್ತೆ ಹಿನ್ನೆಲೆ ಮಗುವಿನ ತಾಯಿ, ಅಜ್ಜಿ, ತಾತ ಸಹಿತ ಮೂವರನ್ನು ನಾಪೋಕ್ಲು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಶಿಶು ಹುಟ್ಟಿ ವಾರದ ಬಳಿಕ ಆರೋಪಿಗಳ ಮನೆಯಿಂದ ಅನತಿ ದೂರದಲ್ಲಿ ಕೊಳೆತ ಸ್ಥಿತಿಯಲ್ಲಿ ಕಳೇಬರವನ್ನು ಪೊಲೀಸರು ಪತ್ತೆ ಹಚ್ಚಿದ್ದರು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಇಲ್ಲಿಗೆ ಸಮೀಪದ ಚೆರಿಯಪರಂಬು ನಿವಾಸಿಯಾಗಿರುವ ಅಪ್ರಾಪ್ತ ಬಾಲಕಿಗೆ ಜನಿಸಿದ್ದ ಮಗು ಹುಟ್ಟಿದ ಬಳಿಕ ನಿಗೂಢವಾಗಿ ನಾಪತ್ತೆಯಾಗಿದ್ದು, ನವಜಾತ ಶಿಶು ಮೃತದೇಹ ಪತ್ತೆ ಹಿನ್ನೆಲೆ ಮಗುವಿನ ತಾಯಿ, ಅಜ್ಜಿ, ತಾತ ಸಹಿತ ಮೂವರನ್ನು ನಾಪೋಕ್ಲು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಶಿಶು ಹುಟ್ಟಿ ವಾರದ ಬಳಿಕ ಆರೋಪಿಗಳ ಮನೆಯಿಂದ ಅನತಿ ದೂರದಲ್ಲಿ ಕೊಳೆತ ಸ್ಥಿತಿಯಲ್ಲಿ ಕಳೇಬರವನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಪತ್ತೆಯಾಗಿದ್ದ ಮಗುವಿನ ಶರೀರವನ್ನು ಮಗುವಿನ ಅಜ್ಜಿಯೇ ಕೊಂದು ಬಿಸಾಡಿರುವ ಶಂಕೆ ಇದೆ ಎಂದು ಆರೋಗ್ಯ ಕಾರ್ಯಕರ್ತರೊಬ್ಬರು ಪೊಲೀಸರಿಗೆ ದೂರು ನೀಡಿದ್ದರು.

ಈ ದೂರಿನ ಅನ್ವಯ ಚೆರಿಯಪರಂಬು ನಿವಾಸಿ ಮಗುವಿನ ತಾಯಿ (ಅಪ್ರಾಪ್ತ), ತಾತ ಹಾಗೂ ಅಜ್ಜಿಯನ್ನು ಶುಕ್ರವಾರ ಅವರ ಮನೆಯಿಂದಲೇ ನಾಪೋಕ್ಲು ಪೊಲೀಸ್‌ ಠಾಣಾಧಿಕಾರಿ ಮಂಜುನಾಥ್ ಹಾಗೂ ಸಿಬ್ಬಂದಿ ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಸರಸರನೆ ಮರವೇರಿದ ಭಾರಿ ಗಾತ್ರದ ಹೆಬ್ಬಾವು:ಬೃಹತ್ ಗಾತ್ರದ ಹೆಬ್ಬಾವೊಂದು ಸರಸರನೆ ಮರವೇರಿದ ಘಟನೆ ಕೊಡಗು ಜಿಲ್ಲೆ ನಾಣಚ್ಚಿ ಹಾಡಿಯಲ್ಲಿ ಇತ್ತೀಚೆಗೆ ನಡೆದಿದ್ದು, ಈ ದೃಶ್ಯ ಈಗ ವೈರಲ್‌ ಆಗಿದೆ

ರಸ್ತೆ ಬದಿ ಕುರುಚಲು ಗಿಡ ಕಡಿಯುವಾಗ ಪ್ರತ್ಯಕ್ಷವಾದ ಹೆಬ್ಬಾವು ಅಂದಾಜು 10 ಕೆ. ಜಿ ತೂಕ ಇದೆ. ಅರಣ್ಯ ಇಲಾಖೆ ಸಿಬ್ಬಂದಿ, ತೋಟ ಕಾರ್ಮಿಕರು ಗಿಡ ಕಡಿಯುವಾಗ ಹೆಬ್ಬಾವು ಪ್ರತ್ಯಕ್ಷವಾಗಿದೆ. ಬೃಹತ್ ಗಾತ್ರದ ಹೆಬ್ಬಾವು ಕಂಡು ಜನರು ಭಯಭೀತರಾಗಿದ್ದಾರೆ. ಹೆದರಿ ಕೆಲವು ಜನರು ಓಡಿದರೆ ಮತ್ತೆ ಕೆಲವರು ಹೆಬ್ಬಾವು ಬಳಿಗೆ ಹೋಗಿ ಸೆಲ್ಫಿ ತೆಗೆದುಕೊಂಡಿದ್ದಾರೆ.