ಸಾರಾಂಶ
ಕೇವಲ 22 ದಿನಗಳ ಹಿಂದೆ ಮನೆಯವರ ವಿರೋಧದ ನಡುವೆಯೂ ಗುಬ್ಬಿ ಪೊಲೀಸ್ ಠಾಣೆಯಲ್ಲಿ ನಿಟ್ಟೂರು ಹೋಬಳಿಯ ಹಾರನಹಳ್ಳಿ ಗ್ರಾಮದ ಯಶಸ್ವಿನಿ ಎಂಬ ಯುವತಿಯೊಂದಿಗೆ ಸಿದ್ದೇಶ್ ಪ್ರೇಮ ವಿವಾಹ ಆಗಿದ್ದನು.
ಗುಬ್ಬಿ: ಸ್ನೇಹಿತನ ಸಂಬಂಧಿಕರ ಮನೆಗೆ ತೆರಳಿ ಊಟ ಮಾಡಿ ಬರುವಾಗ ಹೃದಯಾಘಾತಕ್ಕೆ ನವ ವಿವಾಹಿತನೊಬ್ಬ ಸಾವನ್ನಪ್ಪಿದ ಘಟನೆ ಮಂಗಳವಾರ ನಡೆದಿದೆ. ತಾಲೂಕಿನ ಹೊಸಕೆರೆ ಸಮೀಪದ ಅರೇಹಳ್ಳಿ ಗ್ರಾಮದ ನಿವಾಸಿ 23 ವರ್ಷದ ಸಿದ್ದೇಶ್ ಮೃತ ವ್ಯಕ್ತಿ. ಈತನು ಚಿಕ್ಕನಾಯಕನಹಳ್ಳಿ ಬಳಿ ತನ್ನ ಸ್ನೇಹಿತನ ಅಕ್ಕನ ಮನೆಗೆ ಊಟಕ್ಕೆಂದು ಹೋಗಿ ಬರುವಾಗ ಹಠಾತ್ ಎದೆನೋವು ಕಾಣಿಸಿ ತೀವ್ರಗೊಂಡು ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾನೆ. ಕೇವಲ 22 ದಿನಗಳ ಹಿಂದೆ ಮನೆಯವರ ವಿರೋಧದ ನಡುವೆಯೂ ಗುಬ್ಬಿ ಪೊಲೀಸ್ ಠಾಣೆಯಲ್ಲಿ ನಿಟ್ಟೂರು ಹೋಬಳಿಯ ಹಾರನಹಳ್ಳಿ ಗ್ರಾಮದ ಯಶಸ್ವಿನಿ ಎಂಬ ಯುವತಿಯೊಂದಿಗೆ ಸಿದ್ದೇಶ್ ಪ್ರೇಮ ವಿವಾಹ ಆಗಿದ್ದನು. ಗುಬ್ಬಿ ಸರ್ಕಾರಿ ಆಸ್ಪತ್ರೆಯಲ್ಲಿ ಮೃತ ಸಿದ್ದೇಶ್ ಶವವನ್ನು ಮರಣೋತ್ತರ ಪರೀಕ್ಷೆ ನಡೆಸಿ ನಂತರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.