ಮುಂಗಾರು ಮಳೆಯ ಕ್ಷೀಣಿಸುವಿಕೆಂದಾಗಿ ಸೊರಗಿ ಹೋಗಿದ್ದ ನೇತ್ರಾವತಿ ನದಿಯಲ್ಲಿ ಶುಕ್ರವಾರ ಮತ್ತೆ ಜೀವಕಳೆ ಮೂಡಿದ್ದು, ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿ ತನ್ನ ಒಡಲು ಆವರಿಸಿ ಹರಿಯತೊಡಗಿದೆ. ಗುರುವಾರ ರಾತ್ರಿಯುದ್ದಕ್ಕೂ ಪಶ್ಚಿಮಘಟ್ಟ ಪರಿಸರದಲ್ಲಿ ಭಾರೀ ಮಳೆಯಾದ ಕಾರಣಕ್ಕೆ ಶುಕ್ರವಾರ ನದಿಯಲ್ಲಿ ನೀರಿನ ಪ್ರಮಾಣದಲ್ಲಿ ಹೆಚ್ಚಳವುಂಟಾಯಿತು.

ಉಪ್ಪಿನಂಗಡಿ: ಮುಂಗಾರು ಮಳೆಯ ಕ್ಷೀಣಿಸುವಿಕೆಂದಾಗಿ ಸೊರಗಿ ಹೋಗಿದ್ದ ನೇತ್ರಾವತಿ ನದಿಯಲ್ಲಿ ಶುಕ್ರವಾರ ಮತ್ತೆ ಜೀವಕಳೆ ಮೂಡಿದ್ದು, ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿ ತನ್ನ ಒಡಲು ಆವರಿಸಿ ಹರಿಯತೊಡಗಿದೆ. ಗುರುವಾರ ರಾತ್ರಿಯುದ್ದಕ್ಕೂ ಪಶ್ಚಿಮಘಟ್ಟ ಪರಿಸರದಲ್ಲಿ ಭಾರೀ ಮಳೆಯಾದ ಕಾರಣಕ್ಕೆ ಶುಕ್ರವಾರ ನದಿಯಲ್ಲಿ ನೀರಿನ ಪ್ರಮಾಣದಲ್ಲಿ ಹೆಚ್ಚಳವುಂಟಾಯಿತು.

ಶುಕ್ರವಾರ ಮುಂಜಾನೆ ನದಿಯ ನೀರಿನ ಮಟ್ಟದಲ್ಲಿ ಹೆಚ್ಚಳ ಕಂಡಿದ್ದು, ನೀರು ತಿಳಿಯಾಗಿತ್ತು. ಆದರೆ ಮಧ್ಯಾಹ್ನದ ಬಳಿಕ ಮಣ್ಣು ಮಿಶ್ರಿತ ನೀರಿನ ಹರಿಯುವಿಕೆ ಕಾಣಿಸಿತ್ತು. ಹೆಚ್ಚಿದ ಉಷ್ಣಾಂಶದಿಂದ ಅತಿಯಾದ ಸೆಕೆಯಿಂದ ಬಸವಳಿದಿದ್ದ ಜನತೆ ಶುಕ್ರವಾರ ಮುಂಜಾನೆಯಿಂದ ಲಘುವಾಗಿ ಸುರಿಯುತ್ತಿದ್ದ ಮಳೆಯಿಂದಾಗಿ ತಂಪಿನ ಅನುಭವಕ್ಕೆ ಒಳಗಾದರು.