ಸಾರಾಂಶ
ನರೇಂದ್ರ ಮೋದಿ ಅವರನ್ನು 3ನೇ ಬಾರಿಗೆ ಪ್ರಧಾನಿಯನ್ನಾಗಿಮಾಡಲು, ಎಸ್. ಬಾಲರಾಜು, ಎಚ್.ಡಿ. ಕುಮಾರಸ್ವಾಮಿ ಹಾಗೂ ಯದುವೀರ್ ಅವರ ಗೆಲುವಿಗೆ ನಮ್ಮ ಭಾಗದಲ್ಲಿ ಹೆಚ್ಚಿನಮತ ಕೊಡಿಸಲು ಕೈಲಾದ ಅಳಿಲು ಸೇವೆ ಮಾಡಲಿದ್ದು, ಮೂವರು ಅಭ್ಯರ್ಥಿಗಳು ಜಯ ಸಾಧಿಸಲಿದ್ದಾರೆ
ಕನ್ನಡಪ್ರಭ ವಾರ್ತೆ ಟಿ. ನರಸೀಪುರ
ಸಿದ್ದರಾಮಯ್ಯರ ನಂತರ ಭವಿಷ್ಯದಲ್ಲಿ ಮುಖ್ಯಮಂತ್ರಿಯಾಗುವ ಅವಕಾಶ ಇದೆ ಎಂದರೆ ಅದು ಬಿ.ವೈ. ವಿಜಯೇಂದ್ರ ಅವರಿಗೆ ಮಾತ್ರ ಎಂದು ಬಿಜೆಪಿ ಮುಖಂಡ ಗುರುಪಾದಸ್ವಾಮಿ ಭವಿಷ್ಯ ನುಡಿದರು.ಕಾಂಗ್ರೆಸ್ ನಿಂದ ಬಿಜೆಪಿಗೆ ಸೇರ್ಪಡೆಯಾದ ನಂತರ ಮೊದಲ ಬಾರಿಗೆ ಪಟ್ಟಣಕ್ಕೆ ಭೇಟಿ ನೀಡಿ ಬಿಜೆಪಿ ಕಚೇರಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನಾಯಕತ್ವದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದೇನೆ. ಭವಿಷ್ಯದಲ್ಲಿ ಬಿ.ವೈ.ವಿಜಯೇಂದ್ರ ಅವರಿಗೆ ಮುಖ್ಯಮಂತ್ರಿಯಾಗುವ ಅವಕಾಶಗಳಿದ್ದು, ಅದಕ್ಕಾಗಿ ನನ್ನೆಲ್ಲಾ ಶಕ್ತಿಯನ್ನು ಬಳಸಿ ಕೆಲಸ ಮಾಡುತ್ತೇನೆ ಎಂದರು.ನರೇಂದ್ರ ಮೋದಿ ಅವರನ್ನು 3ನೇ ಬಾರಿಗೆ ಪ್ರಧಾನಿಯನ್ನಾಗಿಮಾಡಲು, ಎಸ್. ಬಾಲರಾಜು, ಎಚ್.ಡಿ. ಕುಮಾರಸ್ವಾಮಿ ಹಾಗೂ ಯದುವೀರ್ ಅವರ ಗೆಲುವಿಗೆ ನಮ್ಮ ಭಾಗದಲ್ಲಿ ಹೆಚ್ಚಿನಮತ ಕೊಡಿಸಲು ಕೈಲಾದ ಅಳಿಲು ಸೇವೆ ಮಾಡಲಿದ್ದು, ಮೂವರು ಅಭ್ಯರ್ಥಿಗಳು ಜಯ ಸಾಧಿಸಲಿದ್ದಾರೆ ಎಂಬ ನಂಬಿಕೆ ನನ್ನದಾಗಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಈಗ ಬಿಜೆಪಿ ಸೇರ್ಪಡೆಯಾಗಿದ್ದೇನೆ. ಅಧಿಕಾರ ಸಿಗಲಿ, ಸಿಗದಿರಲಿ ಪ್ರಾಮಾಣಿಕವಾಗಿ ಪಕ್ಷದ ಕೆಲಸ ಮಾಡಲಿದ್ದೇನೆ. ನನ್ನ ಸೇವೆಯನ್ನು ಪಕ್ಷಕ್ಕೆ ಮುಡಿಪಾಗಿಡಲಿದ್ದು, ಬಿಜೆಪಿ ಪಕ್ಷದೊಂದಿಗೆ ನನ್ನ ರಾಜಕಾರಣ ಮುಕ್ತಾಯಗೊಳಿಸಲು ಬಯಸುತ್ತೇನೆ ಎಂದರು.ಮುಖಂಡರಾದ ಎನ್.ಎಸ್. ರಾಜೇಂದ್ರ, ರಂಗನಾಥ, ಓಬಿಸಿ ಜಿಲ್ಲಾ ಕಾರ್ಯದರ್ಶಿ ಮಹೇಶ್, ಶ್ರೀನಿವಾಸ್, ಮಹೇಶ್, ಪುರಸಭೆ ಸದಸ್ಯ ಕಿರಣ್, ಜಯಣ್ಣ, ನಾಗೇಶ್, ಎನ್. ಲೋಕೇಶ್, ಸಿ.ಬಿ. ಹುಂಡಿ ಸಿದ್ದು, ಮಹದೇವ್, ರಾಜಶೇಖರ್, ವಕೀಲ ಪರಮೇಶ್, ಗುರುಪಾದ ಇದ್ದರು.