ಸಾರಾಂಶ
ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿರುವ ಅವರು , ‘ಘಟನೆ ಸಂಭವಿಸಿದ ದಿನದಿಂದಲೂ ಈ ಪ್ರಕರಣವನ್ನು ಎನ್‌ಐಎಗೆ ವಹಿಸುವಂತೆ ನಾವು ನಿರಂತರವಾಗಿ ಒತ್ತಾಯಿಸುತ್ತಿದ್ದೆವು. ಅಂತಹ ಸಂದರ್ಭದಲ್ಲಿಯೇ ಈ ನಿರ್ಧಾರ ನಮ್ಮ ಆಕ್ಷೇಪಗಳಿಗೆ ನ್ಯಾಯ ಒದಗಿಸುತ್ತದೆ’ ಎಂದು ಹೇಳಿದ್ದಾರೆ.
ಕಾರ್ಕಳ: ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ವಹಿಸಲಾಗಿರುವುದನ್ನು ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಸ್ವಾಗತಿಸಿದ್ದಾರೆ.ಶನಿವಾರ ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿರುವ ಅವರು , ‘ಘಟನೆ ಸಂಭವಿಸಿದ ದಿನದಿಂದಲೂ ಈ ಪ್ರಕರಣವನ್ನು ಎನ್‌ಐಎಗೆ ವಹಿಸುವಂತೆ ನಾವು ನಿರಂತರವಾಗಿ ಒತ್ತಾಯಿಸುತ್ತಿದ್ದೆವು. ಅಂತಹ ಸಂದರ್ಭದಲ್ಲಿಯೇ ಈ ನಿರ್ಧಾರ ನಮ್ಮ ಆಕ್ಷೇಪಗಳಿಗೆ ನ್ಯಾಯ ಒದಗಿಸುತ್ತದೆ’ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರದ ತನಿಖಾ ಕ್ರಮಗಳ ಮೇಲೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಆರಂಭದಿಂದಲೇ ಸರ್ಕಾರದ ತನಿಖಾ ದೃಷ್ಟಿಕೋನ ಏಕಪಕ್ಷೀಯವಾಗಿತ್ತು. ಯಾವುದೇ ಸಾಬೀತುಗಳಿಲ್ಲದೆ ಹಿಂದೂ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸು, ದ್ವೇಷದ ನೆಲೆಯಲ್ಲಿ ಕ್ರಮ ಕೈಗೊಳ್ಳುವುದು ಸರ್ಕಾರದ ಅಭ್ಯಾಸವಾಗಿದೆ. ಮಂಗಳೂರಿಗೆ ಆಗಮಿಸಿದ ಕಾಂಗ್ರೆಸ್ ನಾಯಕರೂ ಹಿಂದೂ ಸಂಘಟನೆಗಳ ವಿರುದ್ಧ ಆರೋಪ ಮಾಡಿ, ಪ್ರಕರಣವನ್ನು ರಾಜಕೀಯಗೊಳಿಸಿದರು ಎಂದು ಹೇಳಿದರು.ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಡೆಗಳನ್ನೂ ಅವರು ತೀವ್ರವಾಗಿ ಟೀಕಿಸಿ, ಸುಹಾಸ್ ಶೆಟ್ಟಿಯ ಮೇಲೆ ಆರೋಪಗಳ ಪಟ್ಟಿಯನ್ನೇ ಬಿಡುಗಡೆ ಮಾಡಿದ ಮುಖ್ಯಮಂತ್ರಿ, ಈ ಪ್ರಕರಣದಲ್ಲಿ ನ್ಯಾಯ ದೊರೆಯುವ ಬಗ್ಗೆ ಜನರಲ್ಲಿ ಸಂಶಯ ಹುಟ್ಟಿಸಿದರು ಎಂದರು.
ಅಂತಿಮವಾಗಿ, ಎನ್‌ಐಎ ತನಿಖೆಯ ಮೂಲಕ ನಿಜ ಹೇಳಿಕೆ ಹೊರಬೀಳುವ ವಿಶ್ವಾಸ ವ್ಯಕ್ತಪಡಿಸಿರುವ ಸುನಿಲ್ ಕುಮಾರ್, ಸುಹಾಸ್ ಶೆಟ್ಟಿಯ ಹಂತಕರಿಗೆ ಕಠಿಣ ಶಿಕ್ಷೆಯಾಗಲಿ ಎಂದು ಆಶಿಸಿದ್ದಾರೆ.