ಸೃಜನ್‌ ಆರ್‌. ಗುರಿಕಾರ್, ಯಶ್ಮಿತಾ ಕೆ., ಚರಣ್‌ ಜಿ.ಎಂ., ಚಿನ್ಮಯಿ ಆರ್., ಹರ್ಷ ಎಸ್‌. ಗೌಡ, ಜೀವಿತ ಜಿ.ಆರ್., ಮಾನಸಿ ಪಿ., ನವ್ಯ ಕೆ.ಆರ್., ಪೂರ್ವಿಕ್ ಕೆ.ಸಿ., ಪ್ರಾಪ್ತಿ ಎಂ. ಗೌಡ, ರಕ್ಷಾ, ಸುಖಿ ಆರ್. ಗೌಡ, ವಿಕಾಸ್ ಡಿ.ಸಿ. ತೇರ್ಗಡೆಗೊಂಡ ವಿದ್ಯಾರ್ಥಿಗಳು.

ಕನ್ನಡಪ್ರಭ ವಾರ್ತೆ ಕಾರ್ಕಳ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ನಡೆಸುವ ರಾಷ್ಟ್ರಮಟ್ಟದ ಎನ್‌ಐಎಫ್‌ಟಿ ಮೊದಲ ಹಂತದ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ೧೩ ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಮುಂದಿನ ಹಂತಕ್ಕೆ ಆಯ್ಕೆಯಾಗಿದ್ದಾರೆ.ಸೃಜನ್‌ ಆರ್‌. ಗುರಿಕಾರ್, ಯಶ್ಮಿತಾ ಕೆ., ಚರಣ್‌ ಜಿ.ಎಂ., ಚಿನ್ಮಯಿ ಆರ್., ಹರ್ಷ ಎಸ್‌. ಗೌಡ, ಜೀವಿತ ಜಿ.ಆರ್., ಮಾನಸಿ ಪಿ., ನವ್ಯ ಕೆ.ಆರ್., ಪೂರ್ವಿಕ್ ಕೆ.ಸಿ., ಪ್ರಾಪ್ತಿ ಎಂ. ಗೌಡ, ರಕ್ಷಾ, ಸುಖಿ ಆರ್. ಗೌಡ, ವಿಕಾಸ್ ಡಿ.ಸಿ. ತೇರ್ಗಡೆಗೊಂಡ ವಿದ್ಯಾರ್ಥಿಗಳು.ಪಿಯು ವಿದ್ಯಾರ್ಥಿಗಳು ಎದುರಿಸುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕ್ರಿಯೇಟಿವ್ ಶಿಕ್ಷಣ ಸಂಸ್ಥೆ ಅತ್ಯುತ್ತಮ ತರಬೇತಿಯನ್ನು ನೀಡುತ್ತಾ ಬಂದಿದ್ದು, ಎಲ್ಲಾ ವಿಭಾಗದಲ್ಲೂ ಯಶಸ್ವಿ ಫಲಿತಾಂಶ ನೀಡುತ್ತಿದೆ. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳನ್ನು ಸಂಸ್ಥೆಯ ಸಂಸ್ಥಾಪಕರು, ಪ್ರಾಂಶುಪಾಲರು, NIFT ಪರೀಕ್ಷೆಯ ಸಂಯೋಜಕ ರಕ್ಷಿತ್, ಸುಮಂತ್‌ ದಾಮ್ಲೆ, ಶರತ್‌ ಅಭಿನಂದಿಸಿದ್ದಾರೆ.

-------------------------------

ಜ್ಞಾನಸುಧಾ: ಉಚಿತ ಶಿಕ್ಷಣಕ್ಕೆ ಅರ್ಜಿ ಆಹ್ವಾನ

ಕಾರ್ಕಳ: ಅಜೆಕಾರು ಪದ್ಮಗೋಪಾಲ್‌ ಎಜುಕೇಶನ್‌ ಟ್ರಸ್ಟ್‌ ಆಡಳಿತಕ್ಕೊಳಪಟ್ಟ ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯು ಪ್ರತೀ ವರ್ಷದಂತೆ ಈ ಬಾರಿಯೂ ೨೦೨೫-೨೬ನೇ ಸಾಲಿಗೆ ಕಾರ್ಕಳ ತಾಲೂಕಿನ ಅರ್ಹ ಪ್ರತಿಭಾವಂತ ಹಾಗೂ ಬಡ ವಿದ್ಯಾರ್ಥಿಗಳಿಗೆ ಪ್ರತೀ ತರಗತಿಗೆ ಐದು ವಿದ್ಯಾರ್ಥಿಗಳಂತೆ ೬, ೭, ೮ ಹಾಗೂ ೯ನೇ ತರಗತಿಗೆ ಉಚಿತ ಶಿಕ್ಷಣಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿದೆ.ಉಚಿತ ಶಿಕ್ಷಣಕ್ಕೆ ಅರ್ಜಿಯನ್ನು ಪೋಷಕರು ಖುದ್ದಾಗಿ ಬಂದು ಸಂಸ್ಥೆಯ ಕಚೇರಿಯಲ್ಲಿ ಮೇ ೧೦ರ ಒಳಗೆ ಸಲ್ಲಿಸುವಂತೆ ಟ್ರಸ್ಟ್‌ ಪ್ರಕಟಣೆ ತಿಳಿಸಿದೆ.