ಮದ್ವೆ ಆಗೋದಾಗಿ ಹೇಳಿ ವಂಚನೆ, ನೈಜಿರಿಯಾ ವ್ಯಕ್ತಿ ಸೆರೆ

| Published : Sep 05 2025, 01:01 AM IST

ಮದ್ವೆ ಆಗೋದಾಗಿ ಹೇಳಿ ವಂಚನೆ, ನೈಜಿರಿಯಾ ವ್ಯಕ್ತಿ ಸೆರೆ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಬಾಗಲಕೋಟೆ ತಾನು ಲಂಡನ್‌ನಲ್ಲಿ ನೆಲೆಸಿದ್ದು ಭಾರತೀಯ ಮಹಿಳೆಯನ್ನು ಮದುವೆಯಾಗುತ್ತೇನೆ ಎಂದು ಹೇಳಿ ಬಾಗಲಕೋಟೆ ಜಿಲ್ಲೆಯ ಇಳಕಲ್ಲ ಮೂಲದ ಯುವತಿಗೆ ಮೋಸ ಮಾಡಿದ್ದ ನೈಜಿರಿಯಾ ಮೂಲದ ವ್ಯಕ್ತಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ತಾನು ಲಂಡನ್‌ನಲ್ಲಿ ನೆಲೆಸಿದ್ದು ಭಾರತೀಯ ಮಹಿಳೆಯನ್ನು ಮದುವೆಯಾಗುತ್ತೇನೆ ಎಂದು ಹೇಳಿ ಬಾಗಲಕೋಟೆ ಜಿಲ್ಲೆಯ ಇಳಕಲ್ಲ ಮೂಲದ ಯುವತಿಗೆ ಮೋಸ ಮಾಡಿದ್ದ ನೈಜಿರಿಯಾ ಮೂಲದ ವ್ಯಕ್ತಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ನೈಜಿರಿಯಾದ ವ್ಯಕ್ತಿ ಅಲಿವರ್ ವುಗುವೊ ಒಕಿಚಿಕು ಬಂಧಿತ ಆರೋಪಿ. ಸದ್ಯ ಈತ ಮುಂಬೈನಲ್ಲಿ ನೆಲೆಸಿದ್ದಾನೆ. ಮಾತ್ರವಲ್ಲ, ಆರೋಪಿಯಿಂದ 4 ಮೊಬೈಲ್‌ಗಳು, 1 ಲ್ಯಾಪ್‌ಟಾಪ್, ಪಾಸ್‌ಪೋರ್ಟ್‌, ಯುಎಸ್ ಡಾಲರ್ ಇರುವ ಹಾಳೆಯ ಬಂಡಲ್‌ಗಳನ್ನು ಬಾಗಲಕೋಟೆ ಸಿಇಎನ್‌ ಪೊಲೀಸರು ಜಪ್ತಿ ಮಾಡಿದ್ದಾರೆ.

ನೈಜಿರಿಯಾ ಮೂಲದ ಈ ಆರೋಪಿತ ವ್ಯಕ್ತಿ ಇಳಕಲ್ ಮಹಿಳೆಯನ್ನು ಮದುವೆ ಮಾಡಿಕೊಳ್ಳುವುದಾಗಿ ಹೇಳಿ ಲಕ್ಷಾಂತರ ರುಪಾಯಿ ವಂಚನೆ ಮಾಡಿದ್ದಾನೆ. ಈತನಿಗೆ ಈಗಾಗಲೇ ಮದುವೆ ಆಗಿ ಡಿವೋರ್ಸ್‌ ಕೂಡ ಆಗಿದೆ. ಮ್ಯಾಟ್ರಿಮೋನಿ ಮೂಲಕ ಮಹಿಳೆಗೆ ಪರಿಚಯ ಆಗಿದ್ದ, ಮದುವೆ ಆಗೋದಾಗಿ ನಂಬಿಸಿದ್ದ.

ಏನಿದು ಘಟನೆ?:

ನೈಜಿರಿಯಾದ ಅಲಿವರ್ ವುಗುವೊ ಒಕಿಚಿಕು ಎಂಬಾತ ಸತ್ಯ ಅಮಿತ್ ಎಂದು ಹೆಸರು ಬದಲಿಸಿಕೊಂಡಿದ್ದ. ಲಂಡನ್ ನಿವಾಸಿ ಎಂದು ಮ್ಯಾಟ್ರಿಮೋನಿಯಲ್ಲಿ ವಿವರ ಹಾಕಿಕೊಂಡಿದ್ದ. ಭಾರತೀಯ ಮಹಿಳೆಯನ್ನು ಮದುವೆಯಾಗುವುದಾಗಿ ಹೇಳಿ ನಂಬಿಸಿದ್ದ. ಲಂಡನ್‌ನಿಂದ ಒಂದು ಕೋಟಿ ಯುಎಸ್ ಡಾಲರ್ ತಂದಿದ್ದೇನೆ. ದೆಹಲಿ ಕಸ್ಟಮ್ಸ್ ಆಫೀಸ್‌ನಲ್ಲಿ ಹಣ ಸೀಜ್ ಮಾಡಿದ್ದಾರೆ. ಬಿಡಿಸಿಕೊಳ್ಳಲು ಇಂಡಿಯನ್ ಕರೆನ್ಸಿ ಬೇಕಾಗಿದೆ ಎಂದು ₹ 5,55,000 ಹಣ ಹಾಕಿಸಿಕೊಂಡು ವಂಚನೆ ಮಾಡಿದ್ದಾನೆ.

ಹಾಲಿ ಮುಂಬೈ ನಿವಾಸಿಯಾಗಿರುವ ನೈಜೀರಿಯನ್ ಪ್ರಜೆಯಾದ ಈತ 2024 ರಲ್ಲಿ ವಂಚನೆ ಮಾಡಿದ್ದ. ಮೊದಲು ಇಳಕಲ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಬಾಗಲಕೋಟೆ ಸಿಇಎನ್ ಪೊಲೀಸ್ ಠಾಣೆಗೆ ಪ್ರಕರಣ ವರ್ಗಾವಣೆಯಾಗಿತ್ತು.