ಸಾರಾಂಶ
ಶಾಸಕ ಶ್ರೀನಿವಾಸ ಮಾನೆ ಅವರ ಇಲ್ಲಿನ ಜನಸಂಪರ್ಕ ಕಚೇರಿಯಲ್ಲಿ ಭಾನುವಾರ ಕ್ರಾಂತಿಯೋಗಿ, ನಿಜಶರಣ ಅಂಬಿಗರ ಚೌಡಯ್ಯರ ಜಯಂತಿ ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ಹಾನಗಲ್ಲ
ಶಾಸಕ ಶ್ರೀನಿವಾಸ ಮಾನೆ ಅವರ ಇಲ್ಲಿನ ಜನಸಂಪರ್ಕ ಕಚೇರಿಯಲ್ಲಿ ಭಾನುವಾರ ಕ್ರಾಂತಿಯೋಗಿ, ನಿಜಶರಣ ಅಂಬಿಗರ ಚೌಡಯ್ಯರ ಜಯಂತಿ ಆಚರಿಸಲಾಯಿತು.ಅಂಬಿಗರ ಚೌಡಯ್ಯರ ಭಾವ ಚಿತ್ರಕ್ಕೆ ಪೂಜೆ, ಪುಷ್ಪ ನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕೆಎಂಎಫ್ ನಿರ್ದೇಶಕ ಚಂದ್ರಪ್ಪ ಜಾಲಗಾರ ಮಾತನಾಡಿ, ೧೨ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರ ಸಮಕಾಲೀನರಾದ ನಿಜಶರಣ ಅಂಬಿಗರ ಚೌಡಯ್ಯ ಆ ಕಾಲದ ಶರಣ ಸಂಕುಲದಲ್ಲಿ ವಿಭಿನ್ನ ವ್ಯಕ್ತಿತ್ವ ಹೊಂದಿದ್ದ ಶ್ರೇಷ್ಠ ವಚನಕಾರರು. ಮುಚ್ಚು ಮರೆ ಇಲ್ಲದೇ ಬಿಚ್ಚು ಮನಸ್ಸಿನಿಂದ ಇದ್ದಿದ್ದನ್ನು ಇದ್ದಂತೆ ಹೇಳುತ್ತಿದ್ದ ಅಂಬಿಗರ ಚೌಡಯ್ಯ ನಮ್ಮ ಹಾವೇರಿ ಜಿಲ್ಲೆಯವರು ಎನ್ನುವುದು ಹೆಮ್ಮೆಯ ಸಂಗತಿಯಾಗಿದೆ ಎಂದ ಅವರು ಮಹಾತ್ಮರ ಜಯಂತಿಯ ಸಂದರ್ಭದಲ್ಲಿ ಮಾತ್ರ ಅವರನ್ನು ನೆನಪಿಸಿಕೊಳ್ಳಲಾಗುತ್ತಿದೆ. ಅವರ ತತ್ವಾದರ್ಶಗಳ ಬೆಳಕಿನಲ್ಲಿ ಸಾಗುವ ಸಂಕಲ್ಪಗೈಯ್ದಾಗ ಮಾತ್ರ ಜಯಂತಿ, ಆಚರಣೆಗಳಿಗೂ ಅರ್ಥ ಬರಲಿದೆ ಎಂದು ಹೇಳಿದರು.
ಕೆಪಿಸಿಸಿ ಸದಸ್ಯ ಟಾಕನಗೌಡ ಪಾಟೀಲ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ, ನಗರ ಕಾಂಗ್ರೆಸ್ ಅಧ್ಯಕ್ಷ ಮತೀನ್ ಶಿರಬಡಗಿ, ಪ್ರದೇಶ ಯುವ ಕಾಂಗ್ರೆಸ್ ಕಾರ್ಯದರ್ಶಿ ಮಂಜು ನೀಲಗುಂದ, ಪುರಸಭೆ ಸದಸ್ಯರಾದ ಅನಂತವಿಕಾಸ ನಿಂಗೋಜಿ, ಮಮತಾ ಆರೆಗೊಪ್ಪ, ಪರಶುರಾಮ್ ಖಂಡೂನವರ, ಖುರ್ಷಿದ್ ಅಹ್ಮದ್ ಹುಲ್ಲತ್ತಿ, ಮಹಿಳಾ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೀತಾ ಪೂಜಾರ, ಯುವ ಕಾಂಗ್ರೆಸ್ ಅಧ್ಯಕ್ಷರಾದ ಶಿವು ತಳವಾರ, ಶಿವು ಭದ್ರಾವತಿ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರಾಜೇಂದ್ರ ಬಾರ್ಕಿ, ಮಾಜಿ ಸದಸ್ಯರಾದ ಫಯಾಜ್ ಲೋಹಾರ, ಮಧು ಪಾಣಿಗಟ್ಟಿ, ಮುಖಂಡರಾದ ವಸಂತ ವೆಂಕಟಾಪೂರ, ವಿನಯ ಬಂಕನಾಳ, ರೇಣುಕಾ ಚಾಕಾಪೂರ, ಸತ್ತಾರಸಾಬ ಅರಳೇಶ್ವರ ಸೇರಿದಂತೆ ಇತರರು ಈ ಸಂದರ್ಭದಲ್ಲಿದ್ದರು.