ಸಾರಾಂಶ
ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ ನಮ್ಮ ಪಕ್ಷದ ಆಸ್ತಿ. ನಿಖಿಲ್ ನಾಯಕತ್ವದಲ್ಲಿ ಪಕ್ಷ ರಾಜ್ಯದಲ್ಲಿ ಮತ್ತೆ ಬಲಿಷ್ಠವಾಗಲಿದೆ. ನಾಡಿನ ಅಸಂಖ್ಯಾತ ಯುವಕರು ನಿಖಿಲ್ ನಾಯಕತ್ವದಲ್ಲಿ ಭರವಸೆ ಹೊಂದಿದ್ದಾರೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿಯವರ 37ನೇ ವರ್ಷ ಹುಟ್ಟುಹಬ್ಬವನ್ನು ಶಾಸಕ ಎಚ್.ಟಿ.ಮಂಜು ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಆಚರಿಸಿದರು.ಶಾಸಕ ಎಚ್.ಟಿ.ಮಂಜು ನೇತೃತ್ವದಲ್ಲಿ ಪಟ್ಟಣದ ಹೊರವಲಯದ ವೃದ್ಧಾಶ್ರಮ ವಾಸಿಗಳಿಗೆ ಅನ್ನಸಂತರ್ಪಣೆ ನಡೆಸಿದ ಜೆಡಿಎಸ್ ಕಾರ್ಯಕರ್ತರು, ನಂತರ ಶ್ರೀಮತಿ ದುಂಡುಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆ ಒಳ ರೋಗಿಗಳಿಗೆ ಹಣ್ಣು ಹಂಪಲು ಹಂಚಿ ನಿಖಿಲ್ ಹುಟ್ಟುಹಬ್ಬಕ್ಕೆ ಶುಭಕೋರಿದರು.
ಈ ವೇಳೆ ಮಾತನಾಡಿದ ಶಾಸಕ ಎಚ್.ಟಿ.ಮಂಜು, ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ ನಮ್ಮ ಪಕ್ಷದ ಆಸ್ತಿ. ನಿಖಿಲ್ ನಾಯಕತ್ವದಲ್ಲಿ ಪಕ್ಷ ರಾಜ್ಯದಲ್ಲಿ ಮತ್ತೆ ಬಲಿಷ್ಠವಾಗಲಿದೆ. ನಾಡಿನ ಅಸಂಖ್ಯಾತ ಯುವಕರು ನಿಖಿಲ್ ನಾಯಕತ್ವದಲ್ಲಿ ಭರವಸೆ ಹೊಂದಿದ್ದಾರೆ. ನಿಖಿಲ್ ಕುಮಾರಸ್ವಾಮಿ ಅವರಿಗೆ ಭಗವಂತ ಆಯಸ್ಸು, ಆರೋಗ್ಯ ಮತ್ತು ಜನಸೇವೆಗೆ ಮತ್ತಷ್ಟು ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು.ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕೀರಾಂ, ಶಾಸಕರ ಸಹೋದರ ಎಚ್.ಟಿ.ಲೋಕೇಶ್, ಪುರಸಭಾ ಸದಸ್ಯ ಯೋಗೇಶ್, ಮುಖಂಡರಾದ ರವಿಕುಮಾರ್, ಟಿ.ಬಲದೇವ್, ಅಲೋಕ, ಶೀಳನೆರೆ ಸಿದ್ದೇಶ್, ಮಹದೇವೇಗೌಡ, ತೋಂಟಪ್ಪಶೆಟ್ಟಿ, ಹೊಸಹೊಳಲು ಬಾಬು, ಶಾಸಕರ ಆಪ್ತ ಸಹಾಯಕರಾದ ಅರಳಕುಪ್ಪೆ ಪ್ರತಾಪ್, ಮಾಕವಳ್ಳಿ ಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ.ಅಜಿತ್, ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಶಶಿಧರ್ ಸೇರಿದಂತೆ ಹಲವರಿದ್ದರು.