ಸಾರಾಂಶ
ಬೇಲೂರು ಪಟ್ಟಣದ ಜೆಪಿನಗರದ ನಿವಾಸಿ ಡಾ.ಬಿ.ಎನ್.ನಿಖಿಲ್ ಇತ್ತೀಚೆಗೆ ಭಾರತ ಮಟ್ಟದ ಎಐಐಎಂಎಸ್ (ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ) ಪರೀಕ್ಷೆಯಲ್ಲಿ ರಾಷ್ಟ್ರಕ್ಕೆ ಪ್ರಥಮ ಸ್ಥಾನ ಪಡೆಯುವ ಮೂಲಕ ವಿಶ್ವವಿಖ್ಯಾತ ಬೇಲೂರಿನ ಕೀರ್ತಿಯನ್ನು ಹೆಚ್ಚಿಸುವ ಜೊತೆಗೆ ರಾಜ್ಯದ ಘನತೆಗೆ ಗೌರವ ತಂದಿದ್ದಾರೆ ಎಂದು ಗಣ್ಯರು ವಿದ್ಯಾರ್ಥಿ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.
ಬೇಲೂರು: ಪಟ್ಟಣದ ಜೆಪಿನಗರದ ನಿವಾಸಿ ಡಾ.ಬಿ.ಎನ್.ನಿಖಿಲ್ ಇತ್ತೀಚೆಗೆ ಭಾರತ ಮಟ್ಟದ ಎಐಐಎಂಎಸ್ (ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ) ಪರೀಕ್ಷೆಯಲ್ಲಿ ರಾಷ್ಟ್ರಕ್ಕೆ ಪ್ರಥಮ ಸ್ಥಾನ ಪಡೆಯುವ ಮೂಲಕ ವಿಶ್ವವಿಖ್ಯಾತ ಬೇಲೂರಿನ ಕೀರ್ತಿಯನ್ನು ಹೆಚ್ಚಿಸುವ ಜೊತೆಗೆ ರಾಜ್ಯದ ಘನತೆಗೆ ಗೌರವ ತಂದಿದ್ದಾರೆ ಎಂದು ಗಣ್ಯರು ವಿದ್ಯಾರ್ಥಿ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.
ಬೆಣ್ಣೂರು ಗ್ರಾಮದ ಜೆಪಿ ನಗರದ ನಿವಾಸಿ ನಿವೃತ್ತ ಸೈನಿಕರಾದ ನಾಗಭೂಷಣ್ ಮತ್ತು ನೀಲಾ ಅವರ ಪುತ್ರ ನಿಖಿಲ್, ಪ್ರಾಥಮಿಕದಿಂದ ಎಸ್‌ಎಸ್ಎಲ್‌ಸಿ ತನಕ ಪಟ್ಟಣದ ಪೂರ್ಣಪ್ರಜ್ಞಾ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದು, ಚಿಕ್ಕಮಗಳೂರಿನ ಸಾಯಿ ಏಂಜೆಲ್ಸ್ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡಿ, ಹಾಸನ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಎಂಬಿಬಿಎಸ್ ಪದವಿ ಪಡೆದುಕೊಂಡು, ಪಾಂಡಿಚೇರಿ ಜವಹಾರಲಾಲ್ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಎಂಎಸ್ (ಜನರಲ್ ಸರ್ಜನ್) ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. ಇತ್ತೀಚೆಗೆ ಅಖಿಲ ಭಾರತ ಮಟ್ಟದ ಪರೀಕ್ಷೆಯಾದ ಎಐಐಎಂಎಸ್‌ನಲ್ಲಿ ರಾಷ್ಟ್ರಕ್ಕೆ ಪ್ರಥಮ ಸ್ಥಾನ ಗಳಿಸುವ ಮೂಲಕ ಆಂಕೊಲಜಿ ಸೂಪರ್ ಸ್ಪೆಷಾಲಿಟಿ ಉನ್ನತ ವ್ಯಾಸಂಗಕ್ಕೆ ಡಾ.ನಿಖಿಲ್ ಅವರು ಆಯ್ಕೆಯಾಗಿದ್ದಾರೆ.ಏಮ್ಸ್ ನಡೆಸಿದ ರಾಷ್ಟ್ರಮಟ್ಟದ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದಿರುವ ಬೇಲೂರಿನ ಡಾ. ಬಿ.ಎನ್. ನಿಖಿಲ್ ಅವರ ಸಾಧನೆಯನ್ನು ಬೇಲೂರು ಶಾಸಕ ಎಚ್ ಕೆ ಸುರೇಶ್, ಪುರಸಭೆ ಅಧ್ಯಕ್ಷ ಎ ಆರ್ ಅಶೋಕ್, ಯಕಶೆಟ್ಟಿಹಳ್ಳಿ ಗ್ರಾಮ ನಿವೃತ್ತ ಉಪನ್ಯಾಸಕರಾದ ನಾಗೇಶ್, ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ತಾಲೂಕು ಘಟಕ ಅಧ್ಯಕ್ಷ ಎ.ಎಸ್. ಬಸವರಾಜು, ಮಾಜಿ ಅಧ್ಯಕ್ಷರಾದ ಬಲ್ಲೇನಹಳ್ಳಿ ರವಿಕುಮಾರ್ ಮುಂತಾದವರು ಅಭಿನಂದಿಸಿದ್ದಾರೆ.