ಸಾರಾಂಶ
ನರಗುಂದ: ಇಲ್ಲಿಯ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ 15ನೇ ವಾರ್ಡಿನ ಮಹಿಳಾ ಸದಸ್ಯೆ ನೀಲವ್ವ ಪವಾಡೆಪ್ಪ ವಡ್ಡಿಗೇರಿ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು.
ಚುನಾವಣಾ ಅಧಿಕಾರಿ ಶ್ರೀಶೈಲ ತಳವಾರ ಅವರು 17 ಸದಸ್ಯರ ಬೆಂಬಲ ಪಡೆದ ನೀಲವ್ವ ಪವಾಡೆಪ್ಪ ವಡ್ಡಿಗೇರಿ ಅವರನ್ನು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಣೆ ಮಾಡಿದರು.ಮಾರ್ಚ್- 19ರಂದು ಅಧ್ಯಕ್ಷ ಸ್ಥಾನಕ್ಕೆ ಅನ್ನಪೂರ್ಣ ಯಲಿಗಾರ ರಾಜೀನಾಮೆ ನೀಡಿದ್ದರು. ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.ಶಾಸಕ ಸಿ. ಸಿ. ಪಾಟೀಲ ಮಾತನಾಡಿ, ಬಾಕಿ ಉಳಿದಿರುವ ಆರೇಳು ತಿಂಗಳ ಅವಧಿಯಲ್ಲಿ ಪಟ್ಟಣದಲ್ಲಿ ನಿರ್ಮಾಣ ಹಂತದಲ್ಲಿರುವ ಕಾಯಿಪಲ್ಲೆ ಮಾರುಕಟ್ಟೆ ಹಾಗೂ ನೂತನ ಪುರಸಭೆ ಕಟ್ಟಡಗಳ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೊಳ್ಳಲಿ. ಬೇಸಿಗೆ ಬಿಸಿಲು ಏರುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕಾರ್ಯನಿರ್ವಹಿಸಬೇಕಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಕಾಶವ್ವ ಮಳಗಿ, ಸದಸ್ಯರಾದ ಅನ್ನಪೂರ್ಣ ಯಲಿಗಾರ, ಭಾವನಾ ಪಾಟೀಲ, ರಾಜೇಶ್ವರಿ ಹವಾಲ್ದಾರ, ಪ್ರೇಮಾ ಅರ್ಬಾಣದ, ಪ್ರಶಾಂತ ಜೋಶಿ, ದೇವಣ್ಣ ಕಲಾಲ, ರೇಣುಕಾ ಕಲಾರಿ, ಪ್ರಕಾಶ ಹಾದಿಮನಿ, ಚಂದ್ರಗೌಡ ಪಾಟೀಲ, ಮಹೇಶ ಬೋಳಶೆಟ್ಟಿ, ರಾಚನಗೌಡ ಪಾಟೀಲ, ಮಂಜುಳಾ ಪಟ್ಟಣಶೆಟ್ಟಿ, ಹುಸೇನಸಾಬ ಗೋಟೂರ, ರಜಿಯಾಬೇಗಂ ತಹಸೀಲ್ದಾರ್, ಸುನೀಲ ಕುಷ್ಟಗಿ, ಉಮೇಶಗೌಡ ಪಾಟೀಲ, ಮುಖ್ಯಾಧಿಕಾರಿ ಸಂಗಮೇಶ ಬ್ಯಾಳಿ ಸಿಬ್ಬಂದಿ ಇದ್ದರು.