ಕೋಗಿಲೆಮನೆ ಗ್ರಾಪಂ ಅಧ್ಯಕ್ಷರಾಗಿ ನಿಂಗೇಗೌಡ ಆಯ್ಕೆ

| Published : Jul 11 2024, 01:36 AM IST

ಸಾರಾಂಶ

ಬೇಲೂರು ತಾಲೂಕಿನ ಕೋಗಿಲೆಮನೆ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ನಿಂಗೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಈ ವೇಳೆ ಗ್ರಾಮಸ್ಥರಿಂದ ಹಾಗೂ ಸದಸ್ಯರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಎಲ್ಲಾ ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳನ್ನು ನೀಡಲಾಗುತ್ತದೆ ಎಂದರು. ಈ ವೇಳೆ ಗ್ರಾಮಸ್ಥರು ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಹರ್ಷ ವ್ಯಕ್ತಪಡಿಸಿದರು.

ಬೇಲೂರು: ತಾಲೂಕಿನ ಕೋಗಿಲೆಮನೆ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ನಿಂಗೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ತಾಲೂಕಿನ ಕೋಗಿಲೆಮನೆ ಗ್ರಾಮ ಪಂಚಾಯ್ತಿಯಲ್ಲಿ ಈ ಹಿಂದೆ ಅಧ್ಯಕ್ಷರಾಗಿದ್ದ ಶೇಷಪ್ಪರವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಮಾಳೆಗೆರೆ ಕ್ಷೇತ್ರದ ನಿಂಗೇಗೌಡ ಒಬ್ಬರೇ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ನಿಂಗೇಗೌಡರನ್ನು ಅವಿರೋಧವಾಗಿ ಆಯ್ಕೆಯಾದರು. ಈ ವೇಳೆ ಗ್ರಾಮಸ್ಥರಿಂದ ಹಾಗೂ ಸದಸ್ಯರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಎಲ್ಲಾ ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳನ್ನು ನೀಡಲಾಗುತ್ತದೆ ಎಂದರು. ಈ ವೇಳೆ ಗ್ರಾಮಸ್ಥರು ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಹರ್ಷ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಹೇಮಾವತಿ, ಮಾಜಿ ಅಧ್ಯಕ್ಷ ಸದಸ್ಯ ಶೇಷಯ್ಯ, ಸಂಗಪ್ಪ, ಸ್ವಾಮಿ, ಸಾವಿತ್ರಿ, ಮಹದೇವಮ್ಮ, ಸುಶೀಲಾ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಚಿದಾನಂದ್, ಗ್ರಾಮಸ್ಥರಾದ ಜಯಪ್ರಕಾಶ್, ಈರೇಗೌಡ, ಬಲರಾಮೇಗೌಡ, ಶಿವರಾಜ್,ತ. ಮ್ಮಣ್ಣಗೌಡ, ಮಧು, ಈರೇಶ್, ಇತರರು ಹಾಜರಿದ್ದರು.