ಸಾರಾಂಶ
೨೦೨೩-೨೪ ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ೪೮ ವಿದ್ಯಾರ್ಥಿಗಳು ಹಾಜರಾಗಿದ್ದು, ಅದರಲ್ಲಿ ಹಳೇಬೀಡಿನ ಕೆಪಿಎಸ್ ಕಾಲೇಜಿನ ೬ ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿ ಪಡೆದಿದ್ದಾರೆ. ೩೩ ವಿದ್ಯಾರ್ಥಿಗಳು ಪ್ರಥಮ ದರ್ಜೆ, ೫ ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಹಳೇಬೀಡು: ೨೦೨೩-೨೪ ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ೪೮ ವಿದ್ಯಾರ್ಥಿಗಳು ಹಾಜರಾಗಿದ್ದು, ಅದರಲ್ಲಿ ೬ ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿ ಪಡೆದಿದ್ದಾರೆ. ೩೩ ವಿದ್ಯಾರ್ಥಿಗಳು ಪ್ರಥಮ ದರ್ಜೆ, ೫ ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಕೆಪಿಎಸ್ ಕಾಲೇಜಿನ ವಿನುತ ತಿಳಿಸಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಶೇ.೧೦೦ ಫಲಿತಾಂಶ ದೊರೆತಿದೆ. ಭೂಮಿಕ ೫೫೮, ಕೀರ್ತನ ಎ.ಎನ್. ೫೨೮, ಕೀರ್ತನ ೫೨೧, ವಾಣಿಜ್ಯ ವಿಭಾಗದಲ್ಲಿ ಭಾವನ ಎಸ್. ೫೨೭, ನಿತಿನ್ ೫೨೦, ಕಲಾ ವಿಭಾಗದಲ್ಲಿ ಪ್ರಮೋದ್ ಕೆ.ಎಚ್. ೫೩೨ ಅಂಕ ಗಳಿಸಿದ್ದಾರೆ. ಸರ್ಕಾರಿ ಕೆಪಿಎಸ್ ಕಾಲೇಜು ಅಭಿವೃಧಿಯ ಅಧ್ಯಕ್ಷ ಹಾಗೂ ಬೇಲೂರು ಕ್ಷೇತ್ರದ ಶಾಸಕ ಎಚ್.ಕೆ.ಸುರೇಶ್, ಕಾಲೇಜಿನ ಅಭಿವೃಧಿಯ ಕಾರ್ಯಾಧ್ಯಕ್ಷ ಬಿ.ಎಸ್.ಸೋಮಶೇಖರ, ಖಜಾಂಚಿ ಹುಲಿಕೆರೆ ಅಶೋಕ್ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಎಸ್‌ಜಿಆರ್ ಪದವಿ ಪೂರ್ವ ಕಾಲೇಜಿಗೆ ಶೇ.೯೨ ಫಲಿತಾಂಶ೨೦೨೩-೨೪ ಸಾಲಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಇಲ್ಲಿನ ಎಸ್‌ಜಿಆರ್ ಕಾಲೇಜಿನ ೫೩ ವಿದ್ಯಾರ್ಥಿಗಳು ಹಾಜರಾಗಿದ್ದು ಅದರಲ್ಲಿ ೧೯ ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿ ಪಡೆದಿದ್ದಾರೆ. ೩೦ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಹರೀಶ್ ತಿಳಿಸಿದ್ದಾರೆ.
ಬೇಲೂರು ತಾಲೂಕಿಗೆ ಗ್ರಾಮಾಂತರ ವಿಭಾಗದಿಂದ ಪ್ರಥಮ ಸ್ಥಾನ ನಮ್ಮ ಕಾಲೇಜು ಗಳಿಸಿದೆ. ವಾಣಿಜ್ಯ ವಿಭಾಗದಲ್ಲಿ ಭವಾನಿ ೫೭೭ ಅಂಕ, ಕಲಾ ವಿಭಾಗದಲ್ಲಿ ಸಹನ ೫೫೨ ಅಂಕ ಗಳಿಸಿ ಕಾಲೇಜುಗೆ ಕೀರ್ತಿ ತಂದಿದ್ದಾರೆ. ಅತ್ಯುತ್ತಮ ಶ್ರೇಣಿ ಪಡೆದ ವಿದ್ಯಾರ್ಥಿಗಳಾದ ತ್ರಿವೇಣಿ, ಮನೊಜ್, ಯಶಸ್ವಿನಿ, ತ್ರಿವೇಣಿ, ಚಂದನ, ರಮ್ಯಾ, ಅಂಕಿತ, ವೇದಾವತಿ, ನಿಖಿತ್, ನಿಶು, ರಕ್ಷಿತ, ಸಾಕಮ್ಮ, ವಿಷ್ಣು, ಮೋನಿಕ, ಪ್ರಭುರಾಜ್, ಕಿಶನ್ ಶೆಟ್ಟಿ, ಪೂರ್ಣಿಮ, ನಿವಾಸ ಪಟೇಲ್ ಇವರಿಗೆ ಕಾಲೇಜಿನ ಅಧ್ಯಕ್ಷ ರಾಮೇಗೌಡ, ಕಾರ್ಯದರ್ಶಿ ಎಚ್.ಆರ್.ಸುರೇಶ್, ಎಲ್ಲಾ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.