ಸಾರಾಂಶ
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಜಪಾನ್ ಭೇಟಿ ವೇಳೆ ಕರ್ನಾಟಕದ ಕಂಪನಿಯೊಂದು ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ. ಕರ್ನಾಟಕದ ಮಾಜಿ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಪುತ್ರ ವಿಜಯ್ ನಿರಾಣಿ ನೇತೃತ್ವದ ಟ್ರೂಆಲ್ಟ್ ಬಯೋ ಎನರ್ಜೀಸ್ ಕಂಪನಿಯು ಜಪಾನಿನ ಸುಮಿಟೊಮೊ ಕಾರ್ಪೋರೇಷನ್ ನಡುವೆ ಜೈವಿಕ ಇಂಧನ ಸಂಶೋಧನೆ ಮತ್ತು ಉತ್ಪಾದನೆ ಕುರಿತು ಈ ಒಪ್ಪಂದವಾಗಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಜಪಾನ್ ಭೇಟಿ ವೇಳೆ ಕರ್ನಾಟಕದ ಕಂಪನಿಯೊಂದು ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ. ಕರ್ನಾಟಕದ ಮಾಜಿ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಪುತ್ರ ವಿಜಯ್ ನಿರಾಣಿ ನೇತೃತ್ವದ ಟ್ರೂಆಲ್ಟ್ ಬಯೋ ಎನರ್ಜೀಸ್ ಕಂಪನಿಯು ಜಪಾನಿನ ಸುಮಿಟೊಮೊ ಕಾರ್ಪೋರೇಷನ್ ನಡುವೆ ಜೈವಿಕ ಇಂಧನ ಸಂಶೋಧನೆ ಮತ್ತು ಉತ್ಪಾದನೆ ಕುರಿತು ಈ ಒಪ್ಪಂದವಾಗಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಶಿಗೆರು ಇಶಿಬಾ ಸಮ್ಮುಖದಲ್ಲಿ ನಡೆದ ಈ ಒಪ್ಪಂದಕ್ಕೆ ಟ್ರೂಆಲ್ಟ್ ಬಯೋ ಎನರ್ಜೀಸ್ ಪರವಾಗಿ ವಿಜಯ್ ನಿರಾಣಿ ಹಾಗೂ ಸುಮಿಟೊಮೋ ಕಾರ್ಪೋರೇಷನ್ ಸಿಇಒ ಸೀಜಿ ಕಿಯಾಮ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಈ ಒಪ್ಪಂದದ ಪ್ರಕಾರ ಮೊದಲ ಹಂತದಲ್ಲಿ ಈ ಎರಡೂ ಕಂಪನಿ ಸೇರಿಕೊಂಡು ಹೊಸದೊಂದು ಕಂಪನಿ ಹುಟ್ಟುಹಾಕಲಿವೆ. ಅದರ ಮೂಲಕ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಜೈವಿಕ ಇಂಧನ ಉತ್ಪಾದನ ಘಟಕಗಳು ಆರಂಭವಾಗಲಿವೆ. ಈ ಘಟಕಗಳು ನೇರವಾಗಿ 700 ಉದ್ಯೋಗ ಸೃಷ್ಟಿಸಲಿವೆ. ಪರೋಕ್ಷವಾಗಿ 1 ಸಾವಿರ ಕುಟುಂಬಗಳಿಗೆ ಜೀವನಾಧಾರವಾಗಲಿದೆ ಈ ಹೊಸ ಕಂಪನಿ. ಕಂಪ್ರೆಸ್ಡ್ ಬಯೋ ಗ್ಯಾಸ್ ಉತ್ಪಾದನೆ ಆರಂಭಿಸಲಿರುವ ಈ ಹೊಸ ಕಂಪನಿಯು ಎಥೆನಾಲ್ ಉತ್ಪಾದನೆ ಹಾಗೂ ವಿಮಾನಯಾನ ಕ್ಷೇತ್ರದ ಇಂಧನ ಬೇಡಿಕೆ ಪೂರೈಸುವ ಗುರಿಯೊಂದಿಗೆ ಕಾರ್ಯಾಚರಣೆಗಳು ಮುಂದುವರೆಯಲಿವೆ ಎಂದು ಟ್ರೂ ಆಲ್ಟ್ ನ ಪತ್ರಿಕಾ ಪ್ರಕಟಣೆ ತಿಳಿಸಿದೆ. ಜೈವಿಕ ಇಂಧನ ಭಾರತದ ಶಕ್ತಿಯಾಗಿದೆ. ಈ ಒಪ್ಪಂದದಿಂದ ಜಾಗತಿಕ ಗುಣಮಟ್ಟದ ಜೈವಿಕ ಇಂಧನ ಉತ್ಪಾದನೆ, ಸೇವೆಗಳು ಭಾರತೀಯರಿಗೆ ದೊರೆಯಲಿದೆ. ಈ ಜಂಟಿ ಕಾರ್ಯಚರಣೆಯಿಂದಾಗಿ ಭಾರತದಲ್ಲಿ ಸ್ವಚ್ಛ ಇಂಧನದ ಉತ್ಪಾದನೆ ಮತ್ತು ಬಳಕೆಯೂ ಹೆಚ್ಚಾಗಿ ಪರಿಸರ ಸಂರಕ್ಷಣೆಯೂ ಆಗಲಿದೆ. ಜೊತೆಗೆ ಇಂಧನ ಕ್ಷೇತ್ರದಲ್ಲಿ ಸ್ವಸಾಮರ್ಥ್ಯವೂ ಹೆಚ್ಚಾಗಿ ಭಾರತ ಜೈವಿಕ ಇಂಧನದ ಪ್ರಮುಖ ದೇಶವಾಗಲಿದೆ. ಜೊತೆಗೆ ರೈತರ ಆದಾಯವನ್ನೂ ಈ ಜೈವಿಕ ಇಂಧನ ಬಳಕೆಯು ಹೆಚ್ಚಿಸಲಿದೆ ಎಂದು ಟ್ರೂಆಲ್ಟ್ ಬಯೋ ಎನರ್ಜೀಸ್‌ನ ಎಂಡಿ ವಿಜಯ್ ನಿರಾಣಿ ಹೇಳಿದ್ದಾರೆ.