ಸಾರಾಂಶ
NITI Aayog State Coordinator visits homeless shelter
ಕನ್ನಡಪ್ರಭ ವಾರ್ತೆ ಯಾದಗಿರಿ
ವಸತಿರಹಿತರ ಆಶ್ರಯ ಕೇಂದ್ರವು ನಿಜವಾದ ನಿರಾಶ್ರಿತರಿಗೆ ಬಳಕೆಯಾಗಿದ್ದು ಸಂತೋಷವಾಗಿದೆ ಎಂದು ನೀತಿ ಆಯೋಗದ ರಾಜ್ಯ ಸಂಯೋಜಕ ಅಜಯ್ ಎಂ. ಎಸ್. ಅಭಿಪ್ರಾಯಪಟ್ಟರು.ಯಾದಗಿರಿ ನಗರ ವಸತಿ ರಹಿತರ ಆಶ್ರಯ ಕೇಂದ್ರಕ್ಕೆ ಅವರು ದಿಢೀರ್ ಭೇಟಿ ನೀಡಿ ಕೇಂದ್ರದ ಸಮಗ್ರ ದಾಖಲೆಗಳನ್ನು ಪರಿಶೀಲಿಸಿ ಅವರು ಮಾತನಾಡಿದರು. ಆಶ್ರಯ ಕೇಂದ್ರದ ಕಾರ್ಯಚರಣೆ ಮತ್ತು ನಿರ್ವಹಣೆ ಮಾಡುವಂತಹ ಭಾರತಾಂಬೆ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಮೇಲುಸ್ತುವಾರಿ ಮಾಡುವಂತಹ ನಗರಸಭೆಯ ಸಮುದಾಯ ಸಂಘಟನಾ ಅಧಿಕಾರಿಗಳಾದ ಭೀಮಣ್ಣ ಕೆ. ವೈದ್ಯರವರ ಶ್ರಮ ಶ್ಲಾಘಿಸಿದರು ಹಾಗೂ ವಸತಿ ರಹಿತರ ಕೇಂದ್ರದ ಬಗ್ಗೆ ಮಾಹಿತಿ ಇರುವ ಕರಪತ್ರ ಬಿಡುಗಡೆಗೊಳಿಸಿದರು.
ಭಾರತಾಂಬೆ ಸಂಸ್ಥೆಯ ಕಾರ್ಯದರ್ಶಿಗಳಾದ ಭೀಮಾಶಂಕರ ಬೆನಕನಹಳ್ಳಿ ಅವರು ಸಂಸ್ಥೆಯ ನಡೆದು ಬಂದ ದಾರಿಯನ್ನು ವಿವರಿಸುತ್ತ, ಯಾದಗಿರಿ ಜಿಲ್ಲೆಯಾದ್ಯಂತ ಸುಮಾರು 5 ಸಾವಿರ ವಸತಿ ರಹಿತರಿಗೆ ಆಶ್ರಯ ಕೊಟ್ಟಂತಹ ಪ್ರತಿಷ್ಠಿತ ಸಮಾಜ ಸೇವಾ ಸಂಸ್ಥೆಯಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ವ್ಯವಸ್ಥಾಪಕರಾದ ಬೀರಲಿಂಗಪ್ಪ ಕಿಲ್ಲನಕೇರಾ, ಮೌನೇಶ ಇಟಗಿ, ದೇವಮ್ಮ ಹಾಗೂ ಸಮುದಾಯ ಸಂಪನ್ಮೂಲ ವ್ಯಕ್ತಿಗಳಾದ ಪ್ರೇಮಾ, ಸಾಬಮ್ಮ, ಅವಮ್ಮ ಮತ್ತು ವಸತಿ ರಹಿತರು ಉಪಸ್ಥಿತರಿದ್ದರು.-
22ವೈಡಿಆರ್8: ಯಾದಗಿರಿ ನಗರ ವಸತಿ ರಹಿತರ ಆಶ್ರಯ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿದ ನೀತಿ ಆಯೋಗದ ರಾಜ್ಯ ಸಂಯೋಜಕ ಅಜಯ್, ಸಮಗ್ರ ದಾಖಲೆಗಳನ್ನು ಪರಿಶೀಲಿಸಿದರು.