ಸಾರಾಂಶ
-ಗುರುಕುಲ ಶಾಲಾ ವಿದ್ಯಾರ್ಥಿ ಫುಟ್‌ಬಾಲ್ ಪಂದ್ಯಕ್ಕೆ ಆಯ್ಕೆಯಾಗಿ ಆಸ್ಟ್ರಿಯಾ ದೇಶಕ್ಕೆ
------ಕನ್ನಡಪ್ರಭ ವಾರ್ತೆ ಜೇವರ್ಗಿ
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಸುಪ್ತ ಪ್ರತಿಭೆ ಅಡಗಿರುತ್ತದೆ. ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ಅದು ಇಮ್ಮಡಿಗೊಳ್ಳಲು ಸಾಧ್ಯ ಎನ್ನುವದಕ್ಕೆ ಗುರುಕುಲದ 10ನೇ ತರಗತಿಯ ವಿದ್ಯಾರ್ಥಿ ನಿತೀನ್ ಸಿದ್ರಾಮ ಪಾಟೀಲ ಸಾಕ್ಷಿಯಾಗಿದ್ದಾರೆ.ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಮಹತ್ವ ನೀಡಿದ ಗುರುಕುಲ ಶಾಲೆಯ ವಿದ್ಯಾರ್ಥಿ ನಿತೀನ ಪಾಟೀಲ್ ಓದಿಗೂ ಸೈ, ಕ್ರೀಡೆಗೂ ಸೈ ಎನ್ನುವದನ್ನು ಸಾಬೀತುಪಡಿಸಿದ್ದಾರೆ. ಓದಿನಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ ನಿತೀನ ಫುಟ್ ಬಾಲ್ ಪಂದ್ಯದಲ್ಲಿ ಸೋಲು ಗೆಲುವುಗಳನ್ನು ಸವಾಲಾಗಿ ಸ್ವೀಕರಿಸಿ ಛಲದಂಕಮಲ್ಲನಂತೆ ಶ್ರಮ ಹಾಕಿ ಇಂದು ಆಸ್ಟ್ರೀಯಾ ದೇಶದಲ್ಲಿ ನಡೆಯುವ ಫುಟ್ ಬಾಲ್ ಸ್ಫರ್ಧೆಯಲ್ಲಿ ಆಯ್ಕೆಗೊಂಡಿದ್ದಾನೆ. ನ್ಯೂಸ್ ೯ ಇಂಡಿಯನ ಟೈಗರ್ ಆಯೋಜಿಸಿರುವ ಕ್ರೀಡಾಕೂಟದಲ್ಲಿ ಆಯ್ಕೆಗೊಂಡಿರುವ ಆಟಗಾರ ನಿತೀನ್ ದೆಹಲಿಯಲ್ಲಿ ನಡೆದ ಸ್ಪರ್ಧೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಆಸ್ಟ್ರಿಯಾಕ್ಕೆ ತೆರಳುತ್ತಿದ್ದಾನೆ.ವಿದೇಶಕ್ಕೆ ತೆರಳುತ್ತಿರುವ ಗುರುಕುಲ ಪ್ರತಿಭೆಯನ್ನು ಶಿಕ್ಷಣ ಸಂಸ್ಥೆಯ ಗೌರವಾಧ್ಯಕ್ಷ ಚನ್ನಮಲ್ಲಯ್ಯ ಹಿರೇಮಠ ಹಾಗೂ ಶಿಕ್ಷಕ ವೃಂದ ಸನ್ಮಾನಿಸಿ ಗೌರವಿಸಿ ಯಶಸ್ವಿ ಸಾಧಿಸಲಿ ಎಂದು ಹರಸಿ ಹಾರೈಸಿದರು.
...ಕೋಟ್....ಸಾಧನೆಗೆ ಅಸಾಧ್ಯವಾದುದು ಯಾವೂದು ಇಲ್ಲ, ಸಾಧಿಸುವ ಛಲ ನಮ್ಮಲ್ಲಿರಬೇಕು ಅಂದಾಗ ಮಾತ್ರ ಯಶಸ್ಸಿನ ಮೆಟ್ಟಿಲಗಳನ್ನೇರಲು ಸಾಧ್ಯ ಆ ನಿಟ್ಟಿನಲ್ಲಿ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಆಸ್ಟ್ರೀಯಾ ದೇಶಕ್ಕೆ ಕ್ರೀಡಾಪಟುವಾಗಿ ತೆರಳುತ್ತಿದ್ದಾನೆ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಅಷ್ಟೆ ಮಹತ್ವ ಗುರುಕುಲ ಶಾಲೆಯಲ್ಲಿ ನೀಡಲಾಗುತ್ತಿದೆ.
-ಮಹಾಂತಯ್ಯ ಸಿ. ಹಿರೇಮಠ, ಕಾರ್ಯದರ್ಶಿ ಗುರುಕುಲ ಆಂಗ್ಲ ಮಾಧ್ಯಮ ಶಾಲೆ ಜೇವರ್ಗಿ.