ಸಾರಾಂಶ
ಸುರತ್ಕಲ್ ಎನ್‌ಐಟಿಕೆ ಬೀಚ್‌ನಲ್ಲಿ ಇಬ್ಬರು ಬಾಲಕರು ಸಮುದ್ರಪಾಲಾಗಿ, ಮತ್ತಿಬ್ಬರು ರಕ್ಷಿಸಲ್ಪಟ್ಟ ಘಟನೆ ಮಂಗಳವಾರ ಸಂಜೆ ನಡೆದಿದೆ. ಮುಂಬೈಯ ವಿವೇಕ್ ಎಂಬವರ ಪುತ್ರ ಧ್ಯಾನ್ (18) ಹಾಗೂ ಮುಂಬೈಯ ಉಮೇಶ್ ಕುಲಾಲ್ ಅವರ ಪುತ್ರ ಹನೀಶ್ ಕುಲಾಲ್ (15) ಸಮುದ್ರಪಾಲಾದವರು. ಧ್ಯಾನ್ ಮೃತದೇಹ ಪತ್ತೆಯಾಗಿದ್ದು, ನಾಪತ್ತೆಯಾದ ಹನೀಶ್‌ಗೆ ಹುಡುಕಾಟ ನಡೆದಿದೆ.
ಕನ್ನಡಪ್ರಭ ವಾರ್ತೆ ಮೂಲ್ಕಿ
ಮಂಗಳೂರು ಹೊರವಲಯ ಸುರತ್ಕಲ್ ಎನ್‌ಐಟಿಕೆ ಬೀಚ್‌ನಲ್ಲಿ ಇಬ್ಬರು ಬಾಲಕರು ಸಮುದ್ರಪಾಲಾಗಿ, ಮತ್ತಿಬ್ಬರು ರಕ್ಷಿಸಲ್ಪಟ್ಟ ಘಟನೆ ಮಂಗಳವಾರ ಸಂಜೆ ನಡೆದಿದೆ.ಮುಂಬೈಯ ವಿವೇಕ್ ಎಂಬವರ ಪುತ್ರ ಧ್ಯಾನ್ (18) ಹಾಗೂ ಮುಂಬೈಯ ಉಮೇಶ್ ಕುಲಾಲ್ ಅವರ ಪುತ್ರ ಹನೀಶ್ ಕುಲಾಲ್ (15) ಸಮುದ್ರಪಾಲಾದವರು. ಈ ಪೈಕಿ ಧ್ಯಾನ್ ಮೃತದೇಹ ಪತ್ತೆಯಾಗಿದ್ದು, ನಾಪತ್ತೆಯಾದ ಹನೀಶ್‌ಗೆ ಹುಡುಕಾಟ ನಡೆದಿದೆ.
ಸುರತ್ಕಲ್ ಸಮೀಪದ ಸೂರಿಂಜೆಯ ಕುಟುಂಬವೊಂದರ ಯುವತಿಯ ಮದುವೆ ಬುಧವಾರ ನಡೆಯಲಿದ್ದು ಮನೆಗೆ ಮುಂಬೈಯಿಂದ ನೆಂಟರು ಬಂದಿದ್ದರು. ಅವರ ಜೊತೆ ಮದುಮಗಳ ತಮ್ಮ ಸಹಿತ 10 ಮಂದಿ ಬಾಲಕರು ಬೀಚ್‌ಗೆ ತೆರಳಿದ್ದರು. ನಾಲ್ಕು ಮಂದಿ ನೀರಿಗೆ ಇಳಿದು ಅಲೆಯಲ್ಲಿ ಸಿಲುಕಿದರು. ಸ್ಥಳದಲ್ಲಿದ್ದ ಜೀವ ರಕ್ಷಕ ಪ್ರದೀಪ್ ಆಚಾರ್ಯ ಧ್ಯಾನ್ ಸಹಿತ ಮೂವರನ್ನು ದಡಕ್ಕೆ ತಂದು ಆಸ್ಪತ್ರೆಗೆ ಕಳಿಸಿದರೂ ಚಿಕಿತ್ಸೆ ಫಲಿಸದೆ ಧ್ಯಾನ್ ಸಾವು ಸಂಭವಿಸಿತು. ಹನೀಶ್ ನಾಪತ್ತೆಯಾಗಿದ್ದಾನೆ. ಉಳಿದಂತೆ ನೀರಿನಲ್ಲಿ ಮುಳುಗಿದ್ದ ಪ್ರಖ್ಯಾತ್ (24), ಗ್ಯಾನ್ ಬಂಜನ್ (18) ಎಂಬ ಇಬ್ಬರನ್ನು ರಕ್ಷಿಸಲಾಗಿದೆ. ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.