ರಾಷ್ಟ್ರೀಯ ತಾಂತ್ರಿಕ ಸಂಸ್ಥೆ ಕರ್ನಾಟಕ (ಎನ್‌ಐಟಿಕೆ) ಸುರತ್ಕಲ್‌ನ ಗಣಿಗಾರಿಕೆ ಇಂಜಿನಿಯರಿಂಗ್ ವಿಭಾಗ ಗಣಿಗಳಲ್ಲಿ ಆರೋಗ್ಯ ಮತ್ತು ಸುರಕ್ಷತೆ ಹಾಗೂ ಒಎಸ್‌ಎಚ್‌ಡಬ್ಲ್ಯೂಸಿ ಕೋಡ್ 2020 ಎಂಬ ಆರು ದಿನಗಳ ಅಲ್ಪಾವಧಿ ತರಬೇತಿ ಕಾರ್ಯಕ್ರಮ ಸೋಮವಾರ ಉದ್ಘಾಟಿಸಲಾಯಿತು.

ಮಂಗಳೂರು: ರಾಷ್ಟ್ರೀಯ ತಾಂತ್ರಿಕ ಸಂಸ್ಥೆ ಕರ್ನಾಟಕ (ಎನ್‌ಐಟಿಕೆ) ಸುರತ್ಕಲ್‌ನ ಗಣಿಗಾರಿಕೆ ಇಂಜಿನಿಯರಿಂಗ್ ವಿಭಾಗ ಗಣಿಗಳಲ್ಲಿ ಆರೋಗ್ಯ ಮತ್ತು ಸುರಕ್ಷತೆ ಹಾಗೂ ಒಎಸ್‌ಎಚ್‌ಡಬ್ಲ್ಯೂಸಿ ಕೋಡ್ 2020 ಎಂಬ ಆರು ದಿನಗಳ ಅಲ್ಪಾವಧಿ ತರಬೇತಿ ಕಾರ್ಯಕ್ರಮ ಸೋಮವಾರ ಉದ್ಘಾಟಿಸಲಾಯಿತು.

ಕಾರ್ಯಕ್ರಮ ಜೂ.13ರವರೆಗೆ ನಡೆಯಲಿದ್ದು, ದೇಶದ ವಿವಿಧ ಭಾಗಗಳಿಂದ ಬಂದಿರುವ 31 ಗಣಿಗಾರಿಕೆ ವೃತ್ತಿಪರರು ಭಾಗವಹಿಸುತ್ತಿದ್ದಾರೆ.

ಎನ್‌ಐಟಿಕೆ ಸುರತ್ಕಲ್‌ನ ಉಪನಿರ್ದೇಶಕ ಪ್ರೊ.ಸುಭಾಷ್ ಸಿ.ಯಾರಗಲ್ ಅವರು ಅಧ್ಯಕ್ಷತೆ ವಹಿಸಿದರು. ಗಣಿಗಾರಿಕೆ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರೊ.ಹರ್ಷ ವರ್ಧನ್, ಡೀನ್‌ಗಳು, ಕಾರ್ಯನಿರ್ವಹಣಾಧಿಕಾರಿಗಳು, ಅಧ್ಯಾಪಕರು

ಇದ್ದರು. ಗಣಿಗಾರಿಕೆ ಕ್ಷೇತ್ರದ ಪ್ರಮುಖ ಸಂಸ್ಥೆಗಳಿಂದ ಆಗಮಿಸಿದ್ದರು. ಕೋಲ್ ಇಂಡಿಯಾ ಲಿಮಿಟೆಡ್, ಸಿಂಗರೆಣಿ ಕೊಲ್ಲಿಯರೀಸ್ ಕಂಪನಿ ಲಿಮಿಟೆಡ್ (SCCL), ಮಹಾನದಿ ಕೋಲ್‌ಫೀಲ್ಡ್ಸ್ ಲಿಮಿಟೆಡ್ (MCL), ಸೆಂಟ್ರಲ್ ಕೋಲ್‌ಫೀಲ್ಡ್ಸ್ ಲಿಮಿಟೆಡ್ (CCL), ವೆಸ್ಟರ್ನ್ ಕೋಲ್‌ಫೀಲ್ಡ್ಸ್ ಲಿಮಿಟೆಡ್ (WCL), ಜೆಎಸ್‌ಡಬ್ಲ್ಯೂ ಸ್ಟೀಲ್ (ಗೋವಾ ಮತ್ತು ಚಿತ್ರದುರ್ಗ ಘಟಕಗಳು), ಫೊಮೆಂಟೊ ರಿಸೋರ್ಸಸ್ ಪ್ರೈವೇಟ್ ಲಿಮಿಟೆಡ್ (ಗೋವಾ), ಕರ್ನಾಟಕ ರಾಜ್ಯ ಖನಿಜ ನಿಗಮ ಲಿಮಿಟೆಡ್ (KSMCL), ನ್ಯಾಷನಲ್ ಮಿನರಲ್ ಡೆವಲಪ್ಮೆಂಟ್ ಕಾರ್ಪೊರೇಷನ್ (NMDC) ಪನ್ನಾ ಡೈಮಂಡ್ ಪ್ರಾಜೆಕ್ಟ್, ಕಿರಂಡುಲ್ ಮತ್ತು ಬೈಲಡಿಲಾ ಸಂಕೀರ್ಣಗಳು, ವೇದಾಂತ ಲಿಮಿಟೆಡ್ (ಐರನ್ ಓರ್), ಎನ್‌ಆರ್‌ಬಿ ಗ್ರೂಪ್ (ಗೋವಾ) ಮತ್ತು ಇಕೋಮೈನ್ ಮೈನಿಂಗ್ ಪ್ರೈವೇಟ್ ಲಿಮಿಟೆಡ್‌ ಮೊದಲಾದ ಸಂಸ್ಥೆಗಳಿಂದ ಉಪ ಪ್ರಧಾನ ವ್ಯವಸ್ಥಾಪಕರು ಮತ್ತು ಸಮಾನ ಹುದ್ದೆಗಳನ್ನು ವಹಿಸಿಕೊಂಡಿದ್ದವರು ಆಗಮಿಸಿದ್ದರು.

ತರಬೇತಿಯನ್ನು ಎನ್‌ಐಟಿಕೆ ಸುರತ್ಕಲ್‌ನ ಗಣಿಗಾರಿಕೆ ಎಂಜಿನಿಯರಿಂಗ್ ವಿಭಾಗದ ಅಧ್ಯಾಪಕರು ನಡೆಸುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಗಣಿಗಳ ಸುರಕ್ಷತಾ ಎಂಜಿನಿಯರಿಂಗ್ ತತ್ವಗಳು, DGMS ಚೌಕಟ್ಟಿನಂತೆ ಅಪಾಯ ಮೌಲ್ಯಮಾಪನ ಆಧಾರಿತ ನಿರ್ವಹಣಾ ವ್ಯವಸ್ಥೆಗಳು, ಅಪಘಾತ ವಿಶ್ಲೇಷಣೆಯ ಮಾನವ ಅಂಶಗಳು, ವರ್ತನೆ ಆಧಾರಿತ ಸುರಕ್ಷತೆ, ಶಬ್ದ ನಿಯಂತ್ರಣ, ಯಂತ್ರಗಳಿಂದ ಉಂಟಾಗುವ ಕಂಪನ, ಗಾಯದ ಡೇಟಾದ ಕಂಪ್ಯೂಟರ್ ಆಧಾರಿತ ವಿಶ್ಲೇಷಣೆ ಹಾಗೂ OSHWC ಕೋಡ್ 2020ರ ಗಣಿಗಾರಿಕೆ ಕ್ಷೇತ್ರದ ಪರಿಣಾಮಗಳನ್ನು ಒಳಗೊಂಡಿವೆ. ತರಗತಿ ಅಧಿವೇಶನಗಳ ಜೊತೆಗೆ, ಭಾಗವಹಿಸುವವರು ಎನ್‌ಐಟಿಕೆ ವಿಶೇಷ ಪ್ರಯೋಗಾಲಯಗಳು, ಮಾದರಿ ಗಣಿಗಾರಿಕೆ, ಡಿಜಿಟಲ್ ಲೈಬ್ರರಿ, ಮಂಗಳೂರು ಕಿಯೋಸಿಎಲ್ ಪೆಲೆಟ್ ಪ್ಲಾಂಟ್, ನ್ಯೂ ಮಂಗಳೂರು ಪೋರ್ಟ್ ಅಥಾರಿಟಿ ಹಾಗೂ ಪದುಬಿದ್ರಿ ಮತ್ತು ಮರ್ವಾಂತೇ ಕಡಲತೀರಗಳಿಗೆ ಭೇಟಿ ನೀಡಲಿದ್ದಾರೆ.

ಈ ಕಾರ್ಯಕ್ರಮ ಗಣಿಗಾರಿಕೆ ಸಿಬ್ಬಂದಿಗೆ ಕೆಲಸದ ಸ್ಥಳದ ಅಪಾಯಗಳನ್ನು ಗುರುತಿಸಿ ನಿಯಂತ್ರಿಸುವುದು, ಸುರಕ್ಷಿತ ಕಾರ್ಯವಿಧಾನಗಳನ್ನು ಅನುಸರಿಸುವುದು, ರಕ್ಷಣಾ ಸಾಧನಗಳನ್ನು ಪರಿಣಾಮಕಾರಿಯಾಗಿ ಬಳಸುವುದು ಹಾಗೂ ಬಲವಾದ ಸಂಸ್ಥಾ ಸುರಕ್ಷತಾ ಸಂಸ್ಕೃತಿಯನ್ನು ನಿರ್ಮಿಸುವುದಕ್ಕೆ ಅಗತ್ಯವಾದ ಜ್ಞಾನ ಮತ್ತು ಕೌಶಲ್ಯಗಳನ್ನು ನೀಡುವ ಉದ್ದೇಶ ಹೊಂದಿದೆ. ಜೊತೆಗೆ, ಗಣಿಗಾರಿಕೆ ಕ್ಷೇತ್ರಕ್ಕೆ ಸಂಬಂಧಿಸಿದ OSHWC ಕೋಡ್ 2020ರ ವಿಶೇಷ ನಿಯಮಗಳನ್ನು ಪರಿಚಯಿಸುವುದನ್ನೂ ಉದ್ದೇಶಿಸಿದೆ.