ನಿಟ್ಟೆ: ಇನ್ಕ್ರಿಡಿಯಾ 2025 ಟೆಕ್ನೋ ಕಲ್ಚರಲ್‌ ಉತ್ಸವ ಉದ್ಘಾಟನೆ

| Published : Mar 02 2025, 01:16 AM IST

ನಿಟ್ಟೆ: ಇನ್ಕ್ರಿಡಿಯಾ 2025 ಟೆಕ್ನೋ ಕಲ್ಚರಲ್‌ ಉತ್ಸವ ಉದ್ಘಾಟನೆ
Share this Article
  • FB
  • TW
  • Linkdin
  • Email

ಸಾರಾಂಶ

ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಬಹುನಿರೀಕ್ಷಿತ ಟೆಕ್ನೋ-ಕಲ್ಚರಲ್ ಫೆಸ್ಟ್ ‘ಇನ್ಕ್ರಿಡಿಯಾ 2025’ ಉದ್ಘಾಟನೆ ಇತ್ತೀಚೆಗೆ ನಡೆಯಿತು. ನಿಟ್ಟೆ ವಿದ್ಯಾಸಂಸ್ಥೆಯ ಬಿ.ಸಿ.ಆಳ್ವ ಕ್ರೀಡಾ ಸಂಕೀರ್ಣದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ವಿದ್ಯಾರ್ಥಿಗಳು, ಅಧ್ಯಾಪಕರು ಭಾಗವಹಿಸಿದ್ದರು.

ಕನ್ನಡಪ್ರಭ ವಾರ್ತೆ ಕಾರ್ಕಳ

ಕಾರ್ಯಕ್ರಮವನ್ನು ವಿಫ್ಲಿ ಇಂಡಿಯಾ ಎಲ್ಎಲ್ಪಿಯ ಟ್ಯಾಲೆಂಟ್ ಅಂಡ್ ಕಲ್ಚರ್ (ಎಚ್ಆರ್) ವಿಭಾಗದ ಮುಖ್ಯಸ್ಥ ರವೀಶ ರಾವ್ ಉದ್ಘಾಟಿಸಿ ಮಾತನಾಡಿ, ಶಿಕ್ಷಣದಲ್ಲಿ ನಾವೀನ್ಯತೆ ಮತ್ತು ಸೃಜನಶೀಲತೆಯ ಮಹತ್ವ ಅರಿಯುವುದು ಅಗತ್ಯವೆಂದರು. ಇನ್ಕ್ರಿಡಿಯಾದಂತಹ ವೇದಿಕೆಗಳ ಮೂಲಕ ತಂತ್ರಜ್ಞಾನ ಮತ್ತು ಸಂಸ್ಕೃತಿಯಲ್ಲಿ ಹೊಸ ಮಜಲುಗಳನ್ನು ಅನ್ವೇಷಿಸಲು ವಿದ್ಯಾರ್ಥಿಗಳನ್ನು ತಮ್ಮ ಭಾಷಣದ ಮೂಲಕ ಪ್ರೋತ್ಸಾಹಿಸಿದರು.

ನಿಟ್ಟೆ ತಾಂತ್ರಿಕ ಶಿಕ್ಷಣ ವಿಭಾಗದ ಉಪಾಧ್ಯಕ್ಷ ಡಾ.ಗೋಪಾಲ್ ಮುಗೇರಾಯ ಗೌರವ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಸಮಗ್ರ ಕಲಿಕೆಯ ವಾತಾವರಣ ಸೃಷ್ಟಿಸಲು ತಾಂತ್ರಿಕ ಪರಿಣತಿಯನ್ನು ಸಾಂಸ್ಕೃತಿಕ ಅಭಿವ್ಯಕ್ತಿಯೊಂದಿಗೆ ಸಂಯೋಜಿಸುವ ಮಹತ್ವ ವಿವರಿಸಿದರು.

ನಿಟ್ಟೆಯ ಡೀಮ್ಡ್ ಟು ಬಿ ಯೂನಿವರ್ಸಿಟಿಯ ಕುಲಾಧಿಪತಿ ಮತ್ತು ನಿಟ್ಟೆ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷ ಎನ್.ವಿನಯ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.

ಈ ಉತ್ಸವ ತಾಂತ್ರಿಕ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಮತ್ತು ಪ್ರೋನೈಟ್ಸ್ ಪ್ರದರ್ಶನಗಳ ವೈವಿಧ್ಯಮಯ ಶ್ರೇಣಿಯನ್ನು ಒಳಗೊಂಡಿತ್ತು. ದೇಶದ ವಿವಿಧ ತಾಂತ್ರಿಕ ಕಾಲೇಜುಗಳ ಸುಮಾರು ೭೦೦೦ ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡರು.

ಎನ್ಎಂಎಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಂಶುಪಾಲ ಡಾ.ನಿರಂಜನ್ ಎನ್.ಚಿಪ್ಲುಂಕರ್ ಸ್ವಾಗತಿಸಿದರು. ಉಪಪ್ರಾಂಶುಪಾಲ ಡಾ.ಐ.ರಮೇಶ್ ಮಿತ್ತಂತಾಯ ವಂದಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ಡೀನ್ ಡಾ.ನರಸಿಂಹ ಬೈಲ್ಕೇರಿ ಕಾರ್ಯಕ್ರಮ ಸಂಯೋಜಿಸಿದರು.