ನಿಟ್ಟೆ: ಎನ್ ಇಗ್ಮಾ-2024 ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಗೆ ಚಾಲನೆ

| Published : Apr 04 2024, 01:00 AM IST

ನಿಟ್ಟೆ: ಎನ್ ಇಗ್ಮಾ-2024 ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಗೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಡಾ.ಎನ್.ಎಸ್.ಎ.ಎಂ. ಪ್ರಥಮ ದರ್ಜೆ ಕಾಲೇಜು ವತಿಯಿಂದ ರಾಜ್ಯ ಮಟ್ಟದ ಎನ್-ಇಗ್ಮಾ-2024 ರಾಜಮತಾಜ್ ಸಾಂಸ್ಕೃತಿಕ ಸ್ಪರ್ಧೆ ನಡೆಯಿತು. ಸುಮಾರು 25 ವಿವಿಧ ಕಾಲೇಜಿನಿಂದ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲು ಆಗಮಿಸಿದ್ದರು.

ಕನ್ನಡಪ್ರಭ ವಾರ್ತೆ ಕಾರ್ಕಳ

ನಿಟ್ಟೆ ಸದಾನಂದ ಸಭಾಂಗಣದಲ್ಲಿ ಮಂಗಳವಾರ ಡಾ.ಎನ್.ಎಸ್.ಎ.ಎಂ. ಪ್ರಥಮ ದರ್ಜೆ ಕಾಲೇಜು ಆಯೋಜಿಸಿದ ರಾಜ್ಯ ಮಟ್ಟದ ಎನ್-ಇಗ್ಮಾ-2024 ರಾಜಮತಾಜ್ ಸಾಂಸ್ಕೃತಿಕ ಸ್ಪರ್ಧೆಯನ್ನು ಆಳ್ವಾಸ್ ವಿದ್ಯಾ ಸಂಸ್ಥೆಯ ವಿವೇಕ್ ಆಳ್ವ ಉದ್ಘಾಟಿಸಿದರು.ಬಳಿಕ ಮಾತನಾಡಿದ ವಿವೇಕ್ ಆಳ್ವ, ಯಾವ ವಿದ್ಯಾರ್ಥಿಗಳು ಕೂಡ ಕಾಲೇಜು ಆಯೋಜಿಸುವ ಸ್ಪರ್ಧೆಗಳಿಂದ ಹೊರಗುಳಿಯಬಾರದು. ಪ್ರತಿಯೊಬ್ಬ ಕೂಡ ವಿದ್ಯಾರ್ಥಿ ಜೀವನದಲ್ಲಿ ನೂರು ಪ್ರತಿಶತ ಪ್ರಯತ್ನ ಪಡಬೇಕು. ಆಯ್ಕೆ ಮಾಡಿಕೊಂಡ ಕೋರ್ಸನ್ನು ಪ್ರಾಮಾಣಿಕವಾಗಿ ವ್ಯಾಸಂಗ ಮಾಡಬೇಕು ಎಂದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎನ್.ಜಿ.ಎಸ್.ಎಂ. ಫಾರ್ಮಸಿಟಿಕ್ಯುಲ್ ಸೈನ್ಸ್ ಪ್ರಾಂಶುಪಾಲ ಡಾ.ಸಿ.ಎಸ್. ಶಾಸ್ತ್ರಿ ಮಾತನಾಡಿ, ವಿದ್ಯಾರ್ಥಿಗಳು ಪರದೆಗಳ ದಾಸರಾಗಿದ್ದು, ಅದರಿಂದ ಹೊರಬಂದು ನೈಜ ಪ್ರಪಂಚದಲ್ಲಿ ಬದುಕಬೇಕು. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದು ಉತ್ತಮ ಎಂದು ಹೇಳಿದರು.ಡಾ.ಎನ್.ಎಸ್.ಎ.ಎಂ. ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ವೀಣಾ ಕುಮಾರಿ ಬಿ.ಕೆ. ಮಾತನಾಡಿ, ಸ್ಪರ್ಧಿಗಳು ಕೇವಲ ಗೆಲುವನ್ನು ಮಾತ್ರ ಸ್ವೀಕರಿಸುವುದಲ್ಲ, ಸೋಲನ್ನು ಕೂಡ ಸ್ವೀಕರಿಸಲು ಸಿದ್ಧರಿರಬೇಕು. ಆಗ ಮಾತ್ರ ಸ್ಪರ್ಧೆಗಳು ಹೆಚ್ಚು ವೃತ್ತಿಪರ ಮತ್ತು ಮನರಂಜನೆಯಿಂದ ಕೂಡಿರಲು ಸಾಧ್ಯ ಎಂದು ತಿಳಿಸಿದರು.ಸುಮಾರು 25 ವಿವಿಧ ಕಾಲೇಜಿನಿಂದ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲು ಆಗಮಿಸಿದ್ದರು. ಐಕ್ಯೂಎಸಿ ಸಂಯೋಜಕ ಪ್ರಕಾಶ್, ಅತಿಥಿಗಳನ್ನು ಸ್ವಾಗತಿಸಿದರು. ವಿದ್ಯಾರ್ಥಿ ಪರಿಷತ್ ಸಂಯೋಜಕಿ ರೇಖಾ ವಂದಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ರಮೇಶ್ ಎಂ. ಮತ್ತು ವಿದ್ಯಾರ್ಥಿ ಪರಿಷತ್ ಸಂಯೋಜಕಿ ಮಾಲಿನಿ ಜೆ. ರಾವ್, ವಿದ್ಯಾರ್ಥಿ ಪರಿಷತ್ ಕಾರ್ಯದರ್ಶಿ ಶ್ರೀಷಾ ಯು. ಪೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನೇಹಾ ಕಾರ್ಯಕ್ರಮ ನಿರ್ವಹಿಸಿದರು.