ಮೇಲ್ವಿಚಾರಕರ ಯಡವಟ್ಟು, ಗೊಂದಲದಲ್ಲೇ ಎನ್ಎಂಎಂಎಸ್ ಪರೀಕ್ಷೆ

| Published : Jan 11 2024, 01:31 AM IST

ಮೇಲ್ವಿಚಾರಕರ ಯಡವಟ್ಟು, ಗೊಂದಲದಲ್ಲೇ ಎನ್ಎಂಎಂಎಸ್ ಪರೀಕ್ಷೆ
Share this Article
  • FB
  • TW
  • Linkdin
  • Email

ಸಾರಾಂಶ

ಕೆಎಸ್ಇಎಬಿ, ಕೆಎಸ್ಕ್ಯೂಎಎಸಿವತಿಯಿಂದ ಜ.7ರಂದು ನಡೆದ 2023-24ನೇ ಸಾಲಿನ ಎನ್ಎಂಎಂಎಸ್ ಪರೀಕ್ಷೆ ಉರ್ದು ಭಾಷೆಯಲ್ಲಿ ಪ್ರಶ್ನೆ ಪತ್ರಿಕೆ ಕೇಳಿದ್ದ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ ಪ್ರಶ್ನೆ ಪತ್ರಿಕೆ ಕೊಟ್ಟು ಪರೀಕ್ಷೆ ಬರೆಯುವಂತೆ ಕೊಠಡಿ ಮೇಲ್ವಿಚಾರಕ ಸೂಚನೆ ನೀಡಿದ್ದು, ವಿದ್ಯಾರ್ಥಿಗಳು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪಾಲಕರ ದೂರು, ಪರೀಕ್ಷಾ ಮೆಲ್ವಿಚಾರಕರಿಗೆ ನೊಟೀಸ್ ಜಾರಿಮಾಡಲಾಗಿದೆ.

ಮಸ್ಕಿ: ಕೆಎಸ್ಇಎಬಿ, ಕೆಎಸ್ಕ್ಯೂಎಎಸಿವತಿಯಿಂದ ಜ.7ರಂದು ನಡೆದ 2023-24ನೇ ಸಾಲಿನ ಎನ್ಎಂಎಂಎಸ್ ಪರೀಕ್ಷೆ ಉರ್ದು ಭಾಷೆಯಲ್ಲಿ ಪ್ರಶ್ನೆ ಪತ್ರಿಕೆ ಕೇಳಿದ್ದ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ ಪ್ರಶ್ನೆ ಪತ್ರಿಕೆ ಕೊಟ್ಟು ಪರೀಕ್ಷೆ ಬರೆಯುವಂತೆ ಕೊಠಡಿ ಮೇಲ್ವಿಚಾರಕ ಸೂಚನೆ ನೀಡಿದ್ದು, ವಿದ್ಯಾರ್ಥಿಗಳು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪಾಲಕರ ದೂರು, ಪರೀಕ್ಷಾ ಮೆಲ್ವಿಚಾರಕರಿಗೆ ನೊಟೀಸ್ ಜಾರಿಮಾಡಲಾಗಿದೆ.

ಕಳೆದ ಭಾನುವಾರದಂದು ಲಿಂಗಸಗೂರಿನ ಬಸವೇಶ್ವರ ಪ್ರೌಢ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ 8ನೇ ತರಗತಿ ವಿದ್ಯಾರ್ಥಿಗಳಿಗಾಗಿ 2023-24ನೇ ಸಾಲಿನ ಎನ್ಎಂಎಂಎಸ್ ಪರೀಕ್ಷೆ ನಡೆಸಲಾಗಿದೆ. ಪರೀಕ್ಷೆ ಬರೆಯಲು ಶಿಕ್ಷಣ ಇಲಾಖೆಯಿಂದ ಕನ್ನಡ, ಇಂಗ್ಲೀಷ್, ಉರ್ದು ಭಾಷೆಯ ಪ್ರಶ್ನೆ ಪತ್ರಿಕೆಗಳನ್ನು ಆಯ್ಕೆ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಅದರಂತೆ ವಿದ್ಯಾರ್ಥಿಗಳು ತಮಗೆ ಬೇಕಾದ ಭಾಷೆಯಲ್ಲಿ ಪರೀಕ್ಷೆ ಆಯ್ಕೆ ಮಾಡಿಕೊಂಡು ಸಿದ್ಧತೆ ನಡೆಸಿ ಪರೀಕ್ಷಾ ಹಾಲ್ ಟಿಕೆಟ್‌ನೊಂದಿಗೆ ಪರೀಕ್ಷಾ ಕೇಂದ್ರಕ್ಕೆ ತೆರಳಿದ್ದಾರೆ.

ಆದರೆ ಉರ್ದು ಭಾಷೆ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯ ಪತ್ರಿಕೆ ನೀಡಿ ಪರೀಕ್ಷೆ ಬರೆಯುವಂತೆ ಸೂಚನೆ ನೀಡಿದ್ದಾರೆ. ಇದಕ್ಕೆ ಒಪ್ಪದ ವಿದ್ಯಾರ್ಥಿಗಳು ಉರ್ದು ಭಾಷೆಯಲ್ಲಿ ಪರೀಕ್ಷೆ ಬರೆಯುತ್ತೇವೆ ಎಂದು ಆಯ್ಕೆ ಮಾಡಿಕೊಂಡು ಶ್ರಮಪಟ್ಟು ವಿದ್ಯಾಭ್ಯಾಸ ಮಾಡಿದ್ದೇವೆ. ಆದರೆ ಈಗ ಕನ್ನಡದಲ್ಲಿ ಪತ್ರಿಕೆ ಕೊಟ್ಟರೆ ನಮಗೆ ಪರೀಕ್ಷೆ ಬರೆಯಲು ಕಷ್ಟವಾಗುತ್ತದೆ ಎಂದು ಹೇಳಿದರು ಸಹ ಕೊಠಡಿ ಮೆಲ್ವಿಚಾರಕರು ವಿದ್ಯಾರ್ಥಿಗಳ ಮಾತು ಅಲ್ಲಗಳೆದಿದ್ದಾರೆ. ಹಾಗೇ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಪಾಲಕರಿಗೆ ವಿಷಯ ತಿಳಿಸಿದ ನಂತರ ಪಾಲಕರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ವಿಷಯ ತಂದು ಕೊಠಡಿ ಮೇಲ್ವಿಚಾರಕರಿಗೆ ಮೇಲ್ನೋಟಕ್ಕೆ ಲೋಪವೆಸಗಲಾಗಿದೆ ಎಂದು ನೊಟೀಸ್ ಜಾರಿ ಮಾಡಿದ್ದಾರೆ.

ಉರ್ದು ಭಾಷೆ ಆಯ್ಕೆ: ರಾಜ್ಯ ಸರ್ಕಾರ ಬಡವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಅನೂಕೂಲವಾಗಲೆಂದು ಉಚಿತ ಪಠ್ಯ-ಪುಸ್ತಕ, ಬಟ್ಟೆ, ಶೂ ಸಾಕ್ಸ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸುತ್ತಿದೆ. ಇದರ ಜೊತೆಗೆ ಶಿಕ್ಷಣ ಇಲಾಖೆ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ಎನ್ಎಂಎಂಎಸ್ ಪರೀಕ್ಷೆ ನಡೆಸುತ್ತದೆ. ಪರೀಕ್ಷೆಯಲ್ಲಿ ಉತ್ತಿರ್ಣರಾದ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 1 ಸಾವಿರ ರು.ನಂತೆ 12ನೇ ತರಗತಿಯವರೆಗೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುತ್ತಿದೆ.

ಒತ್ತಾಯ: ವಿದ್ಯಾರ್ಥಿಗಳು ಯಾವುದೇ ಪರೀಕ್ಷೆ ಎದುರಿಸಲು ಅರ್ಜಿಗಳನ್ನು ಸಲ್ಲಿಸಿ ತಮಗೆ ಬೇಕಾದ ಭಾಷೆಗಳನ್ನು ಆಯ್ಕೆ ಮಾಡಿಕೊಂಡು ಸಾಕಷ್ಟು ಸಿದ್ಧತೆ ಮಾಡಿಕೊಂಡಿರುತ್ತಾರೆ. ಆದರೆ ಸಿದ್ಧತೆ ಮಾಡಿಕೊಂಡಿರುವ ಭಾಷೆಯಲ್ಲಿ ಪ್ರಶ್ನೆ ಪತ್ರಿಕೆ ವಿತರಿಸಿ ಸರಿಯಾದ ರೀತಿಯ ಸೌಲಭ್ಯ ಒದಗಿಸಿ ಪರೀಕ್ಷೆ ಬರೆಯಲು ಶಿಕ್ಷಣ ಇಲಾಖೆ ಅನೂಕೂಲ ಮಾಡಬೇಕು ಎಂದು ಶಿಕ್ಷಣ ಪ್ರೇಮಿ ಹವಾಲ್ದಾರ ಒತ್ತಾಯಿಸಿದ್ದಾರೆ.