ಗುಣಮಟ್ಟದಲ್ಲಿ ಯಾವುದೇ ರಾಜಿಯಿಲ್ಲ; ಶಾಸಕ ಎನ್.ಶ್ರೀನಿವಾಸ್

| Published : Feb 13 2024, 12:47 AM IST / Updated: Feb 13 2024, 12:48 AM IST

ಗುಣಮಟ್ಟದಲ್ಲಿ ಯಾವುದೇ ರಾಜಿಯಿಲ್ಲ; ಶಾಸಕ ಎನ್.ಶ್ರೀನಿವಾಸ್
Share this Article
  • FB
  • TW
  • Linkdin
  • Email

ಸಾರಾಂಶ

ಮುಜರಾಯಿ ಇಲಾಖೆಯ ಬಿ ಗ್ರೇಡ್ ಶ್ರೇಣಿ ಹೊಂದಿರುವ ಮಹಿಮಾಪುರದ ದೇವಾಲಯಕ್ಕೆ ಸಾವಿರಾರು ಭಕ್ತರಿದ್ದಾರೆ. ಮೂಲಭೂತ ಸೌಲಭ್ಯಗಳ ಕೊರತೆಯಿದ್ದು ಶೀಘ್ರವಾಗಿ ನಮ್ಮ ತಾಲೂಕಿನ ಶಿವಗಂಗೆ, ಹಳೆ ನಿಜಗಲ್, ಬರದಿ ಬೆಟ್ಟ, ಮಹಿಮರಂಗನ ಬೆಟ್ಟವನ್ನು ಪ್ರವಾಸೋದ್ಯಮ ಇಲಾಖೆಗೊಳಪಡಿಸಿ ಅಭಿವೃದ್ಧಿಪಡಿಸಲು ಚಿಂತನೆ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ದಾಬಸ್‌ಪೇಟೆ

ತ್ಯಾಮಗೊಂಡ್ಲು ಹೋಬಳಿಯ ಸುಧಾನಗರ ಗೇಟ್ ನಿಂದ ಮಹಿಮಾಪುರದವರೆಗೆ ನಡೆಯುತ್ತಿರುವ ಡಾಂಬರ್ ರಸ್ತೆ ಕಾಮಗಾರಿಯನ್ನು ಶಾಸಕ ಎನ್.ಶ್ರೀನಿವಾಸ್ ವೀಕ್ಷಿಸಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪುರಾಣ ಪ್ರಸಿದ್ಧ ಮಹಿಮಾಪುರದ ರಸ್ತೆ ಕಿತ್ತು ಹಾಳಾಗಿತ್ತು. ಶ್ರೀ ಮಹಿಮರಂಗಸ್ವಾಮಿಯ ಬ್ರಹ್ಮರಥೋತ್ಸವ ಫೆಬ್ರವರಿ 24ರಂದು ನಡೆಯುವ ಹಿನ್ನೆಲೆ ವಾಹನಗಳ ಸಂಚಾರಕ್ಕೆ ಅನುಕೂಲವಾಗಲು ಶೀಘ್ರ ಕಾಮಗಾರಿಗಾಗಿ ಗುತ್ತಿಗೆದಾರರಿಗೆ ತಿಳಿಸಿದ್ದೇನೆ ಎಂದರು.

ಕ್ಷೇತ್ರದಾದ್ಯಂತ ಅಭಿವೃದ್ಧಿ ಕಾರ್ಯಗಳು ತ್ವರಿತಗತಿಯಲ್ಲಿ ನಡೆಯುತ್ತಿದ್ದು, ಗುಣಮಟ್ಟದಲ್ಲಿ ಯಾವುದೇ ರಾಜಿಯಿಲ್ಲ. ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಗುಣಮಟ್ಟ ಮತ್ತು ಶಾಶ್ವತ ಕಾಮಗಾರಿ ನಡೆಸಿ ಎಂದು ತಾಕೀತು ಮಾಡಿದರು.

ಮೂಲಭೂತ ಸೌಲಭ್ಯಗಳಿಗೆ ಆಧ್ಯತೆ

ಮುಜರಾಯಿ ಇಲಾಖೆಯ ಬಿ ಗ್ರೇಡ್ ಶ್ರೇಣಿ ಹೊಂದಿರುವ ಮಹಿಮಾಪುರದ ದೇವಾಲಯಕ್ಕೆ ಸಾವಿರಾರು ಭಕ್ತರಿದ್ದಾರೆ. ಮೂಲಭೂತ ಸೌಲಭ್ಯಗಳ ಕೊರತೆಯಿದ್ದು ಶೀಘ್ರವಾಗಿ ನಮ್ಮ ತಾಲೂಕಿನ ಶಿವಗಂಗೆ, ಹಳೆ ನಿಜಗಲ್, ಬರದಿ ಬೆಟ್ಟ, ಮಹಿಮರಂಗನ ಬೆಟ್ಟವನ್ನು ಪ್ರವಾಸೋದ್ಯಮ ಇಲಾಖೆಗೊಳಪಡಿಸಿ ಅಭಿವೃದ್ಧಿಪಡಿಸಲು ಚಿಂತನೆ ಮಾಡಲಾಗಿದೆ ಎಂದರು.

ಗ್ರಾಪಂ ಸದಸ್ಯ ಕೆ.ಕೆ. ಕೃಷ್ಣಮೂರ್ತಿ, ಪುರಸಭೆ ಮಾಜಿ ಅಧ್ಯಕ್ಷ ನಾರಾಯಣಗೌಡ, ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಬ್ಯಾಡರಹಳ್ಳಿ ಬಿ.ಟಿ.ರಾಮಚಂದ್ರ ಗ್ರಾಪಂ ಸದಸ್ಯರಾದ ರಂಗಸ್ವಾಮಿ, ಜಬೀ ಉಲ್ಲಾ, ಶಬ್ಬೀರ್ ಖಾನ್, ಮುಖಂಡರಾದ ಲಕ್ಕಸಂದ್ರ ಗಂಗರಾಜು, ಗುತ್ತಿಗೆದಾರ ಅರುಣ್, ಗ್ರಾಮಸ್ಥರು ಇದ್ದರು.