ಗುಣಮಟ್ಟದಲ್ಲಿ ರಾಜೀಯಾಗಲ್ಲ: ಶಾಸಕ ಶ್ರೀನಿವಾಸ್

| Published : Feb 14 2025, 12:34 AM IST

ಸಾರಾಂಶ

ಕಳಪೆ ಕಾಮಗಾರಿಗಳು ಕಂಡುಬಂದರೆ ನನ್ನ ಗಮನಕ್ಕೆ ತನ್ನಿ, ತಕ್ಷಣವೇ ಅಂತಹ ಕಾಮಗಾರಿಗಳನ್ನು ಮಾಡುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಕ್ರಮವಹಿಸುತ್ತೇನೆ.

ದಾಬಸ್‍ಪೇಟೆ: ನನ್ನ ಕ್ಷೇತ್ರದಲ್ಲಿ ಗುಣಮಟ್ಟದ ಕಾಮಗಾರಿಗಳಿಗೆ ಆದ್ಯತೆ ನೀಡುತ್ತಿದ್ದೇನೆ. ಉತ್ತಮ ಗುಣಮಟ್ಟದಲ್ಲಿ ರಸ್ತೆ, ಚರಂಡಿ, ಚೆಕ್ ಡ್ಯಾಮ್ ಗಳು ನಿರ್ಮಾಣವಾಗುತ್ತಿವೆ. ಗುಣಮಟ್ಟದಲ್ಲಿ ಯಾವುದೇ ಕಾರಣಕ್ಕೂ ರಾಜೀ ಮಾಡಿಕೊಡುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.

ಸೋಂಪುರ ಹೋಬಳಿಯ ಕೆ.ಜಿ.ಶ್ರೀನಿವಾಸಪುರ ಗ್ರಾಮದಲ್ಲಿ 2 ಕೋಟಿ ವೆಚ್ಚದ 1.08 ಕಿ.ಮೀ.ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಕಳಪೆ ಕಾಮಗಾರಿಗಳು ಕಂಡುಬಂದರೆ ನನ್ನ ಗಮನಕ್ಕೆ ತನ್ನಿ, ತಕ್ಷಣವೇ ಅಂತಹ ಕಾಮಗಾರಿಗಳನ್ನು ಮಾಡುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಕ್ರಮವಹಿಸುತ್ತೇನೆ. ಈ ರಸ್ತೆಯೂ ಸುಮಾರು 3.5 ಮೀಟರ್ ಉದ್ದ ಇದ್ದು ಕಿರಿದಾಗಿದೆ, ಇದೀಗ 5.5 ಮೀ ಅಗಲೀಕರಣವಾಗಿ ಗುಣಮಟ್ಟದ ಕಾಮಗಾರಿ ಕೈಗೊಳ್ಳಲಿದ್ದೇವೆ, ರಾ.ಹೆದ್ದಾರಿ 48 ರಿಂದ ತುಮಕೂರು ಗಡಿಯವರೆಗೆ ಈ ರಸ್ತೆಯೂ ನಾಲ್ಕು ಗ್ರಾಮಗಳಿಗೆ ನೆರವಾಗುತ್ತದೆ ಎಂದರು. ಮುಖಂಡರಾದ ಅಗಳಕುಪ್ಪೆ ಗೋವಿಂದರಾಜು, ಅಂಚೆಮನೆ ಪ್ರಕಾಶ್, ಗ್ರಾಪಂ ಅಧ್ಯಕ್ಷರಾದ ವಸಂತಾ ವೆಂಕಟೇಶ್, ಶೋಭಾ, ಗ್ರಾಪಂ ಸದಸ್ಯರಾದ ವನಿತಾ, ವೆಂಕಟಾಚಲಯ್ಯ, ಮಾಜಿ ಸದಸ್ಯರಾದ ನಾರಾಯಣಸ್ವಾಮಿ, ಗೋವಿಂದರಾಜು, ಗಂಗರುದ್ರಯ್ಯ, ಸಿದ್ದರಾಜು, ಮುಖಂಡರಾದ ರಾಜಣ್ಣ, ಸುರೇಶ್, ನಯಾಜ್ ಖಾನ್, ಅರ್ಚಕ ಸಿದ್ದರಾಜು ಇನ್ನಿತರರಿದ್ದರು.