ಸಾರಾಂಶ
ಬೆಳಗಾವಿಯಲ್ಲಿ ಕಂಡಕ್ಟರ್ ಮೇಲೆ ಮರಾಠಿ ಪುಂಡರಿಂದ ಹಲ್ಲೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಅವರ ವಿರುದ್ಧ ಪೊಲೀಸರು ಏನು ಕ್ರಮ ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಂಡಿದ್ದಾರೆ ಎಂದರು.
ತುಮಕೂರು: ರಾಜ್ಯಪಾಲರು ಹಾಗೂ ಸರ್ಕಾರದ ನಡುವೆ ಯಾವುದೇ ಸಂಘರ್ಷ ಇಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಅವರು ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯಪಾಲರು ಸ್ಪಷ್ಟೀಕರಣ ಕೇಳುವುದು ಸಹಜ. ನಾವು ಕಳಿಸಿದ್ದೆಲ್ಲಾ ಸರಿ ಇದೆ ಎಂದು ಅವರಿಗೆ ಅನ್ನಿಸುವುದಿಲ್ಲ. ಹಾಗೆಯೇ ಅನೇಕ ಬಿಲ್ ಗಳಲ್ಲಿ ನಾವು ಕಳಿಸುವುದನ್ನು ಅವರು ಪ್ರಶ್ನೆನೇ ಮಾಡುವುದಿಲ್ಲ. ಹಾಗೇ ಸಹಿ ಹಾಕಿ ಕಳುಹಿಸಿದ್ದಾರೆ ಎಂದರು.ಕೆಲವು ಸಂದರ್ಭದಲ್ಲಿ ಅವರು ಸ್ಪಷ್ಟೀಕರಣ ಕೇಳುತ್ತಾರೆ. ಆಗ ನಾವು ಸ್ಪಷ್ಟೀಕರಣ ಕೊಡುತ್ತೇವೆ ಎಂದರು.
ಮೈಕ್ರೋ ಫೈನಾನ್ಸ್ ಬಿಲ್ ನಲ್ಲೂ ಅವರಿಗೆ ಡೌಟ್ ಇತ್ತು. ನಾವು ಸ್ಪಷ್ಟೀಕರಣ ಕೊಟ್ಟೆವು. ನಂತರ ಅವರು ಅಂಕಿತ ಹಾಕಿದ್ದರು ಎಂದರು.ಹಾಗಾಗಿ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಯಾವುದೇ ಸಂಘರ್ಷ ಇಲ್ಲ ಎಂದರು.
ಬೆಳಗಾವಿಯಲ್ಲಿ ಕಂಡಕ್ಟರ್ ಮೇಲೆ ಮರಾಠಿ ಪುಂಡರಿಂದ ಹಲ್ಲೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಅವರ ವಿರುದ್ಧ ಪೊಲೀಸರು ಏನು ಕ್ರಮ ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಂಡಿದ್ದಾರೆ ಎಂದರು. ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಮತ್ತೆ ಮತ್ತೆ ಆತ್ಮಹತ್ಯೆಗಳು ಆಗುತ್ತಿರುವ ವಿಚಾರದ ಬಗ್ಗೆ ಮಾತನಾಡಿದ ಅವರು, ಹೊಸ ಕಾನೂನು ಪರಿಣಾಮಕಾರಿಯಾಗಲು ಸ್ವಲ್ಪ ದಿನ ಸಮಯ ಬೇಕು. ನಾವು ಯಾವುದೇ ಮುಲಾಜಿಲ್ಲದೇ ಕ್ರಮ ಕೈಗೊಳ್ಳುತ್ತೇವೆ ಎಂದರು.