ಹಿಂದೂಗಳ ಪರ ಇರುವವರನ್ನು, ಹಿಂದೂಗಳನ್ನು ಜಾಗೃತಿ ಮಾಡುತ್ತಿರುವವರನ್ನು ಮುಗಿಸಬೇಕು ಎಂಬುದು ಪಾಕಿಸ್ತಾನ, ಐಎಸ್‌ಐ ಉಗ್ರರ ಲೆಕ್ಕಾಚಾರ. ಹಿಟ್ ಲಿಸ್ಟ್‌ನಲ್ಲಿ ಮೋದಿ, ಅಮಿತ್ ಶಾ ಇದ್ದಾರೆ. ಪಾಪ ಕರ್ನಾಟಕದಲ್ಲಿ ಮೂರೆ ಜನ ಟಾರ್ಗೆಟ್ ಇದ್ದು, ಉಳಿದವರು ಎಲ್ಲದರಲ್ಲೂ ಹೊಂದಾಣಿಕೆ ಇದ್ದಾರೆ ಎಂಬ ಸಂದೇಶ ಕೊಡುತ್ತದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಶಂಕಿತ ಉಗ್ರರ ಬಂಧನವಾಗಿದ್ದು, ಶಾಸಕ ಯತ್ನಾಳ, ಸಿ.ಟಿ. ರವಿ, ಪ್ರತಾಪಸಿಂಹ ಟಾರ್ಗೆಟ್ ವಿಚಾರದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರ ಗೃಹ ಸಚಿವರು ಈ ಬಗ್ಗೆ ಎನ್.ಐಎ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಟೆಲಿಗ್ರಾಮ್ ಮೂಲಕ ಶಂಕಿತರು ಕಮ್ಯುನಿಕೇಶನ್ ವಿಚಾರದ ಕುರಿತು ಮಾತನಾಡಿ, ಟೆಲಿಗ್ರಾಮ್ ಮೇಲೆ ಸರ್ಕಾರ ನಿಗಾ ಇಡಬೇಕು, ಕೆಲವರು ಇಂಟರ್ನೆಟ್ ಮೂಲಕ ಮಾಡ್ತಾರೆ. ಇಂಥ ಕೃತ್ಯಗಳನ್ನು ಕೇಂದ್ರ ಗೃಹ ಇಲಾಖೆ ಗಂಭೀರವಾಗಿ ತೆಗೆದುಕೊಳ್ಳಬೇಕು. ರಾಜ್ಯ ಗೃಹ ಇಲಾಖೆಯ ಮೇಲೆ ನಿರೀಕ್ಷೆ ಇಲ್ಲ, ಕೇಂದ್ರದ ಮೋದಿ, ಅಮೀತ್ ಶಾ ಇಲ್ಲಿನ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಪಾಕಿಸ್ತಾನದ ಭಯೋತ್ಪಾದಕರಿಗಿಂತ ಭಾರತದ ಅನ್ನ ತಿಂದು ದೇಶದ ವಿರುದ್ಧ ಮಾತನಾಡೋರು. ಕೆಲ ಹಿಂದೂಗಳಾಗಿ ಹುಟ್ಟಿ ಸಾಬರಂತೆ ಮಾತನಾಡುತ್ತಾರೆ ಎಂದು ದೂರಿದರು.